/newsfirstlive-kannada/media/post_attachments/wp-content/uploads/2025/06/Siddu-dks.jpg)
ಕಾಂಗ್ರೆಸ್ನಲ್ಲಿ ಎದೆಬಡಿತ ಹೆಚ್ಚಾಗ್ತಿದೆ. ಸೆಪ್ಟೆಂಬರ್ ಹೊತ್ತಿಗೆ ಎದುಸಿರು ಏರಿಕೆ ಆಗಲಿದೆ. ಯಾಕೆಂದರೆ ಕ್ರಾಂತಿಯ ಕಿಡಿ ಮೇಲೆ ಬೂದಿ ಮುಚ್ಚಿದೆ. ಹೀಗಾಗಿ ಇಂದು ಡೆಲ್ಲಿಯಿಂದ ಹೈಕಮಾಂಡ್ ನಾಯಕ ಸುರ್ಜೇವಾಲ ಬರ್ತಿದ್ದಾರೆ.
ಹಸ್ತದಲ್ಲಿ ಹೊಸ ಕುಸ್ತಿ!
ಕಾಂಗ್ರೆಸ್ನಲ್ಲಿನ ಗದ್ದಲ ಗಲಾಟೆ ಜೋರಾಗುವ ಲಕ್ಷಣಗಳು ಕಾಣ್ತಿವೆ. ಅದಕ್ಕೆ ಹವಾಸಿರಿ ನೋಡಿ ಬರುವಂತೆ ರಣದೀಪ್ ಸುರ್ಜೇವಾಲರನ್ನು ಕಾಂಗ್ರೆಸ್ ಹೈಕಮಾಂಡ್ ಕಳಿಸ್ತಿದೆ.. ಇಂದು ಮಧ್ಯಾಹ್ನ ಹೊತ್ತಿಗೆ ಬೆಂಗಳೂರಿಗೆ ಲ್ಯಾಂಡ್ ಆಗಲಿರುವ ಸುರ್ಜೇವಾಲ, ಸಮಸ್ಯೆ ಪರಿಹಾರಕ್ಕೆ ಯತ್ನಿಸಲಿದ್ದಾರೆ.
ರಾಜ್ಯಕ್ಕೆ ಸುರ್ಜೇವಾಲ!
ಮಧ್ಯಾಹ್ನದ ಹೊತ್ತಿಗೆ ಆಗಮಿಸುವ ಸುರ್ಜೇವಾಲ, ಜುಲೈ 2 ಅಂದ್ರೆ ಬುಧವಾರ ಡೆಲ್ಲಿಗೆ ರಿಟರ್ನ್ ಆಗಲಿದ್ದಾರೆ.. ಹೀಗಾಗಿ ಕಾಂಗ್ರೆಸ್ ಶಾಸಕರ ಜೊತೆ ಒನ್ ಟು ಒನ್ ಮೀಟಿಂಗ್ ಮಾಡ್ತಿದ್ದು, ಒಬ್ಬೊಬ್ಬ ಶಾಸಕರಿಗೆ ಟೈಂ ಸಹ ಫಿಕ್ಸ್ ಮಾಡಿದ್ದಾರೆ. ಅಕಸ್ಮಾತ್ ಇನ್ಯಾರೇ ನಾಯಕರು ಭೇಟಿಗೆ ಕೇಳಿದ್ರೆ ಅವರಿಗೂ ಮುಕ್ತ ಅವಕಾಶ ಇರಲಿದೆ. ಇದೇ ವೇಳೆ, ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಲು ಎಚ್ಚರಿಕೆ ಸಭೆ ನಡೆಸಲಿರುವ ಸುರ್ಜೇವಾಲ, ಈ ಬಾರಿ ಸಿಎಂ ಮತ್ತು ಡಿಸಿಎಂ ಜೊತೆ ಪ್ರತ್ಯೇಕ ಚರ್ಚೆ ಮಾಡ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಸೆಪ್ಟೆಂಬರ್ ಕ್ರಾಂತಿ ಭವಿಷ್ಯ.. ಮತ್ತೆ ಸಂಚಲನ ಮೂಡಿಸಿದ KN ರಾಜಣ್ಣ ಹೇಳಿಕೆ
ಅತ್ಯಂತ ಪ್ರಮುಖ ವಿಚಾರ ಏನಂದ್ರೆ ರಾಹುಲ್ ಗಾಂಧಿ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಭಾರತಕ್ಕೆ ರಿಟರ್ನ್ ಆಗ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಡೆಲ್ಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಈ ಪ್ರವಾಸದಲ್ಲಿ ಪವರ್ ಬ್ಯಾಟಲ್ಗೆ ಫೈನಲ್ ಟಚ್ ಸಿಗಲಿದೆ.
‘ಕ್ರಾಂತಿಗೀಂತಿ ಎಲ್ಲವೂ ಹೈಕಮಾಂಡ್ನ ಕೈಯಲ್ಲಿದೆ!’
ಅದೇ ಕ್ರಾಂತಿ ಬಗ್ಗೆ ಸಚಿವ ಸತೀಶ್ಗೆ ಗೊತ್ತೇ ಇಲ್ಲ ಎಂದಿದ್ದಾರೆ. ಕ್ರಾಂತಿ ಮಾಡೊದು ಬಿಡೋದು ವರಿಷ್ಠರ ಕೈಯಲ್ಲಿದೆ ಎಂದಿದ್ದಾರೆ. ಆದರೆ ಕೆಪಿಸಿಸಿ ಹುದ್ದೆ ಸಿಗುವ ಬಗ್ಗೆ ವೇಟಿಂಗ್ ಲಿಸ್ಟ್ನಲ್ಲಿ ಟಿಕೆಟ್ ಬುಕ್ ಮಾಡಿರುವ ಹಿಂದಿನಂತೆ ಈಗಲು ಅದೇ ಮಾತನ್ನ ಹೇಳಿದ್ದಾರೆ. ಒಟ್ಟಾರೆ, ಕಾಂಗ್ರೆಸ್ನಲ್ಲಿ ದಿನಕ್ಕೊಂದು ಬೆಳವಣಿಗೆ ಆಗ್ತಿದೆ.
ಇದನ್ನೂ ಓದಿ: CM, ಡಿಸಿಎಂ, ಗೃಹಸಚಿವರ ರಹಸ್ಯ ಸಭೆ.. 11 ದಿನಗಳ ದಸರಾ ಮಹೋತ್ಸವದ ಬಗ್ಗೆ ಸಿದ್ದರಾಮಯ್ಯ ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ