newsfirstkannada.com

ಕಾಂಗ್ರೆಸ್​ vs ಬಿಜೆಪಿ; ಜೈನಮುನಿ ಮತ್ತು ಯುವ ಬ್ರಿಗೇಡ್​ ಕಾರ್ಯಕರ್ತನ ಹತ್ಯೆ ಕುರಿತು ಪ್ರತಿಭಟನೆಗಿಳಿದ ನಾಯಕರು

Share :

12-07-2023

    ಜೈನಮುನಿ ಮತ್ತು ಯುವ ಬ್ರಿಗೇಡ್​ ಕಾರ್ಯಕರ್ತನ ಕೊಲೆ

    ಎರಡೂ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡ ಸರ್ಕಾರ ಬಂಧಿಸಿದೆ

    ಪ್ರಕರಣವನ್ನ ಸಿಬಿಐಗೆ ವಹಿಸಲು ಬಿಜೆಪಿ ಒತ್ತಾಯ; ಅತ್ತ ಕಾಂಗ್ರೆಸ್​ ಮೌನ ಪ್ರತಿಭಟನೆ

ಇತ್ತೀಚೆಗೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಇಬ್ಬರು ಸೇರಿ ಹತ್ಯೆ ಮಾಡಿದ್ದರು, ಈ ಘಟನೆ ಬಳಿಕ ಯುವ ಬ್ರಿಗೇಡ್​​ ಕಾರ್ಯಕರ್ತನನ್ನು ಕ್ಷುಲ್ಲಕ ಕಾರಣಕ್ಕೆ ಕೊಂದಿದ್ದರು. ಆದರೆ ಈ ವಿಚಾರವಾಗಿ ವಿಧಾನಸಭೆಯಲ್ಲಿ ಡೆಗೆಚರ್ಚೆ ಕೂಡ ನಡೆದಿತ್ತು. ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆದಿತ್ತು. ಆದರೀಗ ಸರ್ಕಾರದ ನ ಅನುಮಾನ ವ್ಯಕ್ತಪಡಿಸಿದ ಖಂಡಿಸಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ಮಾಡಿದರೆ, ಅತ್ತ ಕಾಂಗ್ರೆಸ್​​ ಫ್ರೀಡಂ ಪಾರ್ಕ್​ನಲ್ಲಿ ಮೌನ ಪ್ರತಿಭಟನೆಗಿಳಿದಿದೆ.

ತನಿಖೆ ಹಂತದಲ್ಲಿರುವ ಜೈನಮುನಿ ಮತ್ತು ಯುವ ಬ್ರಿಗೇಡ್​ ಕಾರ್ಯಕರ್ತನ ಕೊಲೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿಗರು ಈ ಘಟನೆಯನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಹೀಗಾಗಿ ಪ್ರತಿಭಟನೆಯ ಅಸ್ತ್ರ ಪ್ರಯೋಗಿಸಿದೆ. ಅತ್ತ ಸಿದ್ದರಾಮಯ್ಯ ಸರ್ಕಾರ ಈ ಘಟನೆಯನ್ನು ಖಂಡಿಸಿ ಬಾಯಿಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆಗಿಳಿದಿದೆ.

ಚಿಕ್ಕೋಡಿಯ ಜೈನಮುನಿ ಹಾಗೂ ಮೈಸೂರಿನ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯ ತನಿಖೆ ಈಗಾಗಲೇ ನಡೆಯುತ್ತಿದೆ. ಎರಡೂ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡ ಸರ್ಕಾರ ಬಂಧಿಸಿದೆ. ಆದರೆ ಈ ಎರಡು ಹತ್ಯೆಗಳಲ್ಲಿ ಅನುಮಾನ ವ್ಯಕ್ತಪಡಿಸಿದ ಬಿಜೆಪಿ, ಪ್ರಕರಣವನ್ನ ಸಿಬಿಐ ತನಿಖೆ ವಹಿಸಲು ಒತ್ತಾಯಿಸಿದೆ. ಜೈನಮುನಿ ಹತ್ಯೆ ಘನಘೋರ ಕೃತ್ಯ. ಇದರ ಉನ್ನತಮಟ್ಟದ ತನಿಖೆ ಆಗಬೇಕು ಅಂತ ಆಗ್ರಹಿಸಿತ್ತು. ಆದರೆ ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಸದನದಲ್ಲಿ ವಿಪಕ್ಷ ನಾಯಕರ ಮನವಿಗೆ ಒಪ್ಪಿಗೆ ಸೂಚಿಸಲಿಲ್ಲ. ಹೀಗಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆಗೆ ನಿರ್ಧಾರ ಮಾಡಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಈ ಎರಡು ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನೆಗೆ ಕೇಸರಿ ಕಲಿಗಳು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ vs ಬಿಜೆಪಿ; ಜೈನಮುನಿ ಮತ್ತು ಯುವ ಬ್ರಿಗೇಡ್​ ಕಾರ್ಯಕರ್ತನ ಹತ್ಯೆ ಕುರಿತು ಪ್ರತಿಭಟನೆಗಿಳಿದ ನಾಯಕರು

https://newsfirstlive.com/wp-content/uploads/2023/07/Bommai-1.jpg

Load More