/newsfirstlive-kannada/media/post_attachments/wp-content/uploads/2025/03/Himani-Narwal-2.jpg)
ಹರಿಯಾಣದ ರೋಹ್ಟಕ್ನ ಬಸ್ ನಿಲ್ದಾಣದ ಬಳಿ ಸೂಟ್ ಕೇಸ್ ಒಂದು ಪತ್ತೆಯಾಗಿತ್ತು. ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಶವ ಪತ್ತೆಯಾಗಿದೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ. ಜನಪ್ರಿಯ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲಾ (22) ಮೃತದೇಹ ಎಂದು ತಿಳಿದುಬಂದಿದೆ.
ಹಿಮಾನಿ ನರ್ವಾಲ್, ಭಾರತ್ ಜೋಡೋ ಯಾತ್ರೆ ಅವಧಿಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು. ಈ ವೇಳೆ ಹಿಮಾನಿ ರಾಹುಲ್ ಗಾಂಧಿ ಜೊತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಗಮನ ಸೆಳೆದಿದ್ದರು. ಹಿಮಾನಿ ಸಾವಿನ ಸುತ್ತ ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ: ತುಮಕೂರಲ್ಲಿ ಅಮಾನುಷ ಕೃತ್ಯ; 8 ತಿಂಗಳ ಗರ್ಭಿಣಿಯ ಜೀವ ತೆಗೆದ ಗಂಡನ ಅನುಮಾನ..!
ಸೂಟ್ ಕೇಸ್ ಸಂಪ್ಲಾ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ. ಅನುಮಾನಗೊಂಡ ಸ್ಥಳೀಯರು ಮಾಹಿತಿ ನೀಡಿದಾಗ ಸ್ಥಳಕ್ಕೆ ಭೇಟಿ ಕೊಟ್ವಿ. ಈ ವೇಳೆ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದೇವೆ. ದುಪ್ಪಟ್ಟದಿಂದ ಕುತ್ತಿಗೆಯನ್ನು ಸುತ್ತಲಾಗಿತ್ತು. ಮೃತಳ ಕೈಗೆ ಮೆಹಂದಿ ಹಾಕಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಹಿಮಾನಿ ನರ್ವಾಲಾ ಅವರು ರೋಹ್ಟಕ್ನ ವಿಜಯ ನಗರದಲ್ಲಿ ವಾಸಿಸುತ್ತಿದ್ದರು. ನರ್ವಾಲಾ ಸಾವಿನ ಬೆನ್ನಲ್ಲೇ, ಕಾಂಗ್ರೆಸ್ ನಾಯಕರ ಜೊತೆಗಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಕಮಲ ಮುಡಿಯೋ ನಾರಿ ಯಾರು..? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷೆ ರೇಸ್ನಲ್ಲಿ ಮೂವರು ಮಹಿಳೆಯರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ