newsfirstkannada.com

ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ

Share :

Published April 11, 2024 at 9:42am

    ಮಾತನಾಡಬೇಕು ಅಂತ ಕರೆಯಿಸಿಕೊಂಡು ಹೀಗೆ ಮಾಡಿದ್ರಾ?

    ತಾಲೂಕು ಆಸ್ಪತ್ರೆಗೆ JDS ಸದಸ್ಯನನ್ನು ದಾಖಲಿಸಿ, ಚಿಕಿತ್ಸೆ

    ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ಚಾಕು ಇರಿದ ಹಿಂದಿನ ಸತ್ಯ ಏನು?

ತುಮಕೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರವಾಗಿ ಕ್ಯಾಂಪೇನ್ ಮಾಡಿದ್ದ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಕಾಂಗ್ರೆಸ್​ ಬೆಂಬಲಿಗ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆಯು ಕುಣಿಗಲ್ ತಾಲೂಕಿನ ಅಂಚೇಪಾಳ್ಯದಲ್ಲಿ ನಡೆದಿದೆ.

ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಪರವಾಗಿ ಕೆಂಪನಹಳ್ಳಿ ಗ್ರಾಮ ಪಂಚಾಯತಿಯ ಜೆಡಿಎಸ್​ ಸದಸ್ಯ ಮಂಜುನಾಥ್ ಪ್ರಚಾರ ಮಾಡಿದ್ದಾರೆ. ಇದಕ್ಕಾಗಿ ಕಾಂಗ್ರೆಸ್​ ಬೆಂಬಲಿತ ವ್ಯಕ್ತಿ ಬೊರೇಗೌಡ ಹಾಗೂ ಬೆಂಬಲಿಗರು ಸೇರಿ ಮಾತನಾಡಬೇಕು ಎಂದು ಮಂಜುನಾಥ್​ರನ್ನು ಕರೆಯಿಸಿಕೊಂಡಿದ್ದಾರೆ. ಈ ವೇಳೆ ಅಂಚೇಪಾಳ್ಯದ ಬಳಿ ಬರುತ್ತಿದ್ದಂತೆ ಬೋರೇಗೌಡ ಚಾಕು ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ; ಸಮಾವೇಶ ರದ್ದು ಮಾಡಿದ್ದೇಕೆ..?

ಚಾಕು ಇರಿಯುತ್ತಿದ್ದಂತೆ ತಕ್ಷಣ ಜೀವ ಉಳಿಸಿಕೊಳ್ಳಲು ಕೆಳಕ್ಕೆ ಬಗ್ಗಿದ್ದರಿಂದ ಚಾಕು ತಲೆಗೆ ಚುಚ್ಚಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಕುಣಿಗಲ್​ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕುಣಿಗಲ್​ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ

https://newsfirstlive.com/wp-content/uploads/2024/04/TMK-JDS.jpg

Load More