/newsfirstlive-kannada/media/post_attachments/wp-content/uploads/2023/10/Chinnaswamy-1.jpg)
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ಸಿದ್ದರಾಮಯ್ಯರ ಈ ಹೇಳಿಕೆ ತುಂಬಾನೇ ಮಹತ್ವ ಪಡೆದುಕೊಂಡಿದೆ.
ಕಾಲ್ತುಳಿತದ ಸಮಸ್ಯೆಗೆ ದೀರ್ಘಕಾಲದ ಪರಿಹಾರ ಕಂಡುಕೊಳ್ಳಲು ಹೊಸ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಇಂಥ ಅಹಿತಕರ ಘಟನೆಗಳು ಯಾವುದೇ ಸರ್ಕಾರದ ಅವಧಿಯಲ್ಲಾಗಲೀ ನಡೆಯಬಾರದು. ವೈಯಕ್ತಿಕವಾಗಿ ಇದು ನನಗೆ , ನನ್ನ ಸರ್ಕಾರಕ್ಕೆ ನೋವು ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಸ್ಥಾನ ತುಂಬೋದೇ ಚಿಂತೆ.. ನಾಲ್ವರು ಸ್ಟಾರ್ಗಳ ಶಾರ್ಟ್ಲಿಸ್ಟ್ ಮಾಡಿದ ಮ್ಯಾನೇಜ್ಮೆಂಟ್..!
ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರಕ್ಕೆ ಆಗ್ರಹ
ಮತ್ತೊಂದು ಕಡೆ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆಲು ಮುಂದಾಗಿದ್ದಾರೆ. ನಗರದ ಮಧ್ಯೆ ಸ್ಟೇಡಿಯಂ ಇರೋದ್ರಿಂದ ಹಲವು ರೀತಿಯ ಸಮಸ್ಯೆ ಆಗ್ತಿದೆ. ಈ ಚಿನ್ನಸ್ವಾಮಿ ಕ್ರೀಡಾಂಗಣವನ್ನು ವಶಪಡಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಪತ್ರ ಬರೆಯಲು ಮುಂದಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣ ಮಾತ್ರವಲ್ಲ, ಕಂಠೀರವ ಸ್ಟೇಡಿಯಂ ಅನ್ನೂ ಶಿಫ್ಟ್ ಮಾಡುವಂತೆ ಒತ್ತಾಯ ಮಾಡಲಾಗುತ್ತದೆ. ಇದು ಮೂಲತಃ ಆರ್ಮಿಗೆ ಸೇರಿದ ಜಾಗ. ಸರ್ಕಾರದಿಂದ ಕೆಎಸ್ಸಿಎ ಲೀಸ್ಗೆ ಪಡೆದುಕೊಂಡಿದೆ. ಗಿಡ-ಮರಗಳು ಹಾಳಾಗಿದ್ದು, ಪಂದ್ಯಗಳು ನಡೆದರೆ ಟ್ರಾಫಿಕ್ ಹಾಗೂ ಈ ಹಿಂದೆ ಬಾಂಬ್ ಬ್ಲಾಸ್ಟ್ ಸಹ ಆಗಿದೆ. ಇದೀಗ 11 ಜನರು ಜೀವ ಕಳೆದುಕೊಂಡಿದ್ದಾರೆ. ಸಿಟಿ ಸೆಂಟರ್ ಒಳಗೆ ಮೈದಾನ ಬೇಕಾಗಿಲ್ಲ. ಏರ್ಪೋರ್ಟ್ ಪಕ್ಕದಲ್ಲಿ KSCAಗೆ ಸೇರಿದ 100 ಎಕರೆ ಜಾಗ ಇದೆ. ಅಲ್ಲಿಗೆ ಸ್ಟೇಡಿಯಂ ಸ್ಥಳಾಂತರ ಮಾಡಿ ಎಂದು ಮನವಿ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಹೊಸ ಕೋಚ್ ನೇಮಿಸಿಕೊಂಡ ಟೀಂ ಇಂಡಿಯಾ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ