/newsfirstlive-kannada/media/post_attachments/wp-content/uploads/2025/01/bbk1165.jpg)
ಅಬ್ಬಬ್ಬಾ.. ಈ ವಾರ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಟಿಕೆಟು ಟು ಫಿನಾಲೆ ಪಾಸ್​ ಪಡೆದುಕೊಳ್ಳಲು ನಾ ಮುಂದು ತಾ ಮುಂದು ಅಂತ ಕಷ್ಟ ಪಟ್ಟ ಟಾಸ್ಕ್​ ಅನ್ನು ಆಡಿದ್ದರು. ಕೊನೆಯ ಕ್ಷಣದಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್​, ರಜತ್​ ಹಾಗೂ ಹನುಮಂತ ಟಿಕೆಟು ಟು ಫಿನಾಲೆ ಟಾಸ್ಕ್​ ಆಡಲು ಆಯ್ಕೆ ಆಗಿದ್ದರು. ಹೀಗಾಗಿ ಈ ನಾಲ್ಕು ಸ್ಪರ್ಧಿಗಳಿಗೆ ಬಿಗ್​ಬಾಸ್ ಟ್ರಂಕ್​ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ.
ಇದನ್ನೂ ಓದಿ:Bigg Boss ಮನೆಗೆ ಎಂಟ್ರಿ ಕೊಟ್ಟ ಶರಣ್, ಅದಿತಿ ಪ್ರಭುದೇವ.. ಕಾರಣವೇನು?
/newsfirstlive-kannada/media/post_attachments/wp-content/uploads/2025/01/bbk1167.jpg)
ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್​ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕಿತ್ತು. ಆದ್ರೆ ಅಚ್ಚರಿ ಎಂಬಂತೆ ಹನುಮಂತ 2 ನಿಮಿಷ 27 ಸೆಕೆಂಡ್​ನಲ್ಲಿ ಈ ಟಾಸ್ಕ್​ನಲ್ಲಿ ಗೆದ್ದು ಟಿಕೆಟ್​ ಟು ಫಿನಾಲೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ. ಜೊತೆಗೆ ವಾರದ ಕೊನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ.
/newsfirstlive-kannada/media/post_attachments/wp-content/uploads/2025/01/bbk1166.jpg)
ಇನ್ನೂ, ಕೊನೆಯ ಕ್ಷಣದಲ್ಲಿ ಅಂದ್ರೆ ಕೇವಲ 2 ಸೆಕೆಂಡ್​ಗಳಲ್ಲೇ ಟು ಫಿನಾಲೆ ಪಾಸ್​ ಮಿಸ್ ಮಾಡಿಕೊಂಡಿದ್ದಾರೆ ತ್ರಿವಿಕ್ರಮ್​. ಹೌದು, ಮೊದಲು ಈ ಟಾಸ್ಕ್​ ಆಡಲು ಭವ್ಯಾ ಗೌಡ ಹೋಗಿದ್ದರು. ಈ ಟಾಸ್ಕ್​ ಆಡಲು ಭವ್ಯಾ ಗೌಡ ತೆಗೆದುಕೊಂಡ ಸಮಯ 3 ನಿಮಿಷ 22 ಸೆಕೆಂಡುಗಳು. ಇದಾದ ಬಳಿಕ ರಜತ್​ ಟಾಸ್ಕ್​ ಆಡಲು ಹೋಗಿದ್ದರು. ಆಗ ರಜತ್ ತೆಗೆದುಕೊಂಡ ಸಮಯ 3 ನಿಮಿಷ 49 ಸೆಕೆಂಡುಗಳು. ಇನ್ನೂ ಇದಾದ ಬಳಿಕ ತ್ರಿವಿಕ್ರಮ್ ಟಾಸ್ಕ್​ ಆಡಲು ಹೋಗಿ ತೆಗೆದುಕೊಂಡ ಸಮಯ 2 ನಿಮಿಷ 29 ಸೆಕೆಂಡುಗಳು. ಇನ್ನೂ 2 ಸೆಕೆಂಡ್​ಗಳಲ್ಲಿ ಗ್ರ್ಯಾಂಡ್ ಫಿನಾಲೆಗೆ ಹೋಗುವ ಅವಕಾಶವನ್ನು ಮಿಸ್​ ಮಾಡಿಕೊಂಡು ಬೇಸರ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us