newsfirstkannada.com

×

BBK11; ರಣರಂಗವಾದ ಮನೆ.. ಲಾಯರ್ ಜಗದೀಶ್​- ತ್ರಿವಿಕ್ರಮ್, ಮಂಜು, ಮಾನಸ ನಡುವೆ ಗಲಾಟೆ

Share :

Published October 16, 2024 at 9:57am

Update October 17, 2024 at 2:25pm

    ನಿಂದೇನು ಲೇ, ಹೋಗಲೇ, ನಿಮ್ಮನೇ ಮುಂದೆ ನಿಂತಿದ್ದೇನಾ?

    ಧರ್ಮ ನಾಮಿನೇಷನ್ ಕುರಿತು ಮನೆಯಲ್ಲಿ ಫುಲ್ ಗಲಾಟೆ

    ಲಾಯರ್ ಜಗದೀಶ್ ಮೇಲೆ ಕೆಲ ಸ್ಪರ್ಧಿಗಳು ಗರಂ, ಯಾಕೆ?

ಬಿಗ್​ಬಾಸ್ ಸೀಸನ್​ 11 ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಮನೆಯಲ್ಲಿ ಗಲಾಟೆಗಳು ಆಗುತ್ತಿರುವುದು ಎಲ್ಲರನ್ನು ಆಶ್ಚರ್ಯಕ್ಕೆ ದೂಡಿವೆ. ಬಿಗ್​ಬಾಸ್​ ಸ್ಪರ್ಧಿಗಳು ಒಂದಲ್ಲ ಒಂದು ವಿಚಾರಕ್ಕೆ ಒಬ್ಬರ ನಡುವೆ ಒಬ್ಬರು ಕಿತ್ತಾಡುತ್ತಿದ್ದು ವಾದ ವಿವಾದಗಳು ಕೂಡ ಅತಿರೇಕಕ್ಕೆ ಹೋಗಿವೆ. ಜಗದೀಶ್ ವಿರುದ್ಧ ಕೆಲ ಸ್ಪರ್ಧಿಗಳು ತಿರುಗಿ ಬಿದ್ದಿದ್ದು ಈ ವೇಳೆ ಒಬ್ಬರನೊಬ್ಬರು ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ. ಸದ್ಯಕ್ಕಂತೂ ಮನೆ ರಣರಂಗವಾಗಿದೆ.

ಇತಿ-ಮಿತಿ ಎಲ್ಲವೂ ಮರೆತ ಸ್ಪರ್ಧಿಗಳು ಎಂದು ರಿಲೀಸ್ ಆಗಿರುವ ವಿಡಿಯೋಗೆ ಟ್ಯಾಗ್​​ಲೈನ್ ಕೊಡಲಾಗಿದೆ. ವಿಡಿಯೋದಲ್ಲಿ ಏನಿದೆ ಎಂದರೆ.. ಶಿಶಿರ್ ಅವರು ತಮ್ಮ ಮೊದಲ ನಾಮಿನೇಷನ್ ಧರ್ಮ ಅವರು ಎಂದು ಹೇಳುತ್ತಾರೆ. ಇದಕ್ಕೆ ಲಾಯರ್ ಜಗದೀಶ್ ಅವರು ನೀವು ಅವರನ್ನು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ನನಗನಿಸುತ್ತಿದೆ ಎಂದಿದ್ದಾರೆ. ಈ ವೇಳೆ ಮಾನಸ ಎಲ್ಲದಕ್ಕೂ ಬಾಯಿ ಹಾಕುತ್ತಿರಲ್ಲ ಎಂದು ಜಗದೀಶ್​ ಅವರಿಗೆ ಆವಾಜ್ ಹಾಕಿದ್ದಾರೆ. ಆಗ ಮನೆ ಮಂದಿಯೆಲ್ಲ ಎದ್ದು ಜಗಳಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: ‘ಡ್ರೆಸ್ಸಿಂಗ್ ರೂಮ್​ನಿಂದ ಕ್ರೀಸ್​ವರೆಗೆ ಎಮೋಷನ್ಸ್ ಇವೆ’.. ಚಿನ್ನಸ್ವಾಮಿ ಸ್ಟೇಡಿಯಂ ಬಗ್ಗೆ KL ರಾಹುಲ್ ಭಾವುಕ ಆದ್ರಾ?

ನಾಮಿನೇಟ್ ಆದವರೇ ಸುಮ್ಮನೆ ಇದ್ದಾರೆ, ನಿಂದೇನು, ಹೋಗೋ, ನಿಮ್ಮನೇ ಮುಂದೆ ನಿಂತಿದ್ದೇನಾ? ಎಂದು ಜಗದೀಶ್​ಗೆ ತ್ರಿವಿಕ್ರಮ್ ಏಕವಚನದಲ್ಲೇ ಹೇಳಿದ್ದಾರೆ. ಇದೇ ವೇಳೆ ಮಂಜು ಬಂದು ಥೂ ನಿನ್ನ ಯೋಗ್ಯತೆಗೆ, ಹೋಗೋ.. ಎಂದು ಜಗದೀಶ್​ಗೆ ಹೇಳಿದ್ದಾರೆ. ಇನ್ನು ಈ ರೀತಿ ಹೇಳುವಾಗ ಜಗದೀಶ್ ಹಾಗೂ ಮಂಜು ಇಬ್ಬರು ಫೇಸ್​ ಟು ಫೇಸ್ ಇದ್ದರು. ಇದೇ ವೇಳೆ ಬಿಗ್ ಬಾಸ್ ಎಂಟ್ರಿಯಾಗಿದ್ದು ಈ ಕೂಡಲೇ ಸೋಫಾದಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. ಹೀಗೆ ಹೇಳುವಾಗಲೂ ಸ್ಪರ್ಧಿಗಳೆಲ್ಲ ಗುಂಪಾಗಿಯೇ ಇದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11; ರಣರಂಗವಾದ ಮನೆ.. ಲಾಯರ್ ಜಗದೀಶ್​- ತ್ರಿವಿಕ್ರಮ್, ಮಂಜು, ಮಾನಸ ನಡುವೆ ಗಲಾಟೆ

https://newsfirstlive.com/wp-content/uploads/2024/10/BBK11-1-1.jpg

Load More