newsfirstkannada.com

ಮದುವೆಯಾಗಲು ಕನ್ಯೆ ಹುಡುಕಿಕೊಡಿ ಪ್ಲೀಸ್; ಪಿಡಿಓಗೆ ಗುತ್ತಿಗೆದಾರನ ಮನವಿ ಪತ್ರ..!

Share :

Published June 15, 2023 at 4:47pm

    ಬರೋಬ್ಬರಿ ಏಳು ವರ್ಷಗಳಿಂದ ಸಂಗಾತಿಗಾಗಿ ಹುಡುಕಾಟ ನಡೆಸಿದ ಮುತ್ತು ಹೂಗಾರ

    ಸರ್ಕಾರಿ ನೌಕರಿ ಇದ್ದರೆ ಮಾತ್ರ ಕನ್ಯೆ ಕೊಡ್ತೀವಿ ಅಂತಾರೆ ನಾನ್ ಏನ್ ಮಾಡ್ಲಿ ಸಾರ್

    ಕನ್ಯೆ ಹುಡುಕಿಕೊಡಿ ಅನ್ನೋ ಪತ್ರವನ್ನು ಓದಿ ಪಿಡಿಓ ಅಧಿಕಾರಿ ಹೇಳಿದ್ದೇನು ಗೊತ್ತಾ?

ಗದಗ: ಸರ್ಕಾರಿ ನೌಕರಿ ಇದ್ದರೆ ಮಾತ್ರ ಕನ್ಯೆ ಕೊಡ್ತೀವಿ ಅಂತಿದ್ದಾರೆ. ಹೀಗಾಗಿ ನೀವು ನನಗೊಂದು ಕನ್ಯೆ ಕೊಡಿಸಿ ಅಂತಾ PDOಗೆ ಮನವಿ ಪತ್ರ ಬರೆದ ವಿಲಕ್ಷಣ ಘಟನೆಯೊಂದು ಗದಗದಲ್ಲಿ‌ ನಡೆದಿದೆ. ಬರೋಬ್ಬರಿ ಏಳು ವರ್ಷಗಳಿಂದ ಸಂಗಾತಿಗಾಗಿ ಹುಡುಕಾಟ ನಡೆಸಿ ಕೊನೆಗೆ ಸೋತ ಯುವಕನೊಬ್ಬ ಪಿಡಿಓಗೆ ಕನ್ಯೆ ಹುಡುಕಿ ಕೊಡಿ ಅಂತಾ ಪತ್ರ ಬರೆದಿದ್ದಾನೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಯುವಕ ಮುತ್ತು ಹೂಗಾರ (27) ಪತ್ರ ಬರೆದಿರೋ ವ್ಯಕ್ತಿ. ಕಳೆದ ಏಳೆಂಟು ವರ್ಷದಿಂದ ಕನ್ಯೆ ಹುಡುಕಿ ಬೇಸತ್ತು ಹೋಗಿದ್ದಾನೆ. ಹಳ್ಳಿ, ಸಿಟಿ ನಗರ ಪ್ರದೇಶಗಳಲ್ಲಿ ಎಲ್ಲಾ ಕಡೆ ಹುಡುಕಿದರು ಕನ್ಯೆ ಸಿಕ್ಕಿಲ್ಲ. ಏನಾದರೂ ನೆಪ ಹೇಳ್ತಾರೆ, ಇಲ್ಲ ನೌಕರಿ ಕೇಳ್ತಾರೆ. ಬಹುತೇಕರು ಸರ್ಕಾರಿ ನೌಕರಿ ಇದ್ದರೆ ಮಾತ್ರ ಕನ್ಯೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ಜಿಗುಪ್ಸೆಗೊಂಡಿರೋ ಮುತ್ತು ಎಂಬುವವರು ಗ್ರಾಮ ಪಂಚಾಯಿತಿ ಅಧಿಕಾರಿಗೆ ಪತ್ರ ಬರೆದು ಕನ್ಯಾ ಹುಡುಕಿಕೊಡಿ ಅಂತಾ ಮನವಿ ಮಾಡಿದ್ದಾರೆ.

ಮುತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡ್ತಾರಂತೆ. ಕುಟುಂಬ ನಿರ್ವಹಿಸುವಷ್ಟು ಹಣವನ್ನೂ ಸಂಪಾದಿಸ್ತಾರೆ. ಹೀಗಿದ್ದರು ಕನ್ಯಾ ಮಾತ್ರ ಸಿಗ್ತಾನೇ ಇಲ್ಲ. ಸರ್ಕಾರಿ ನೌಕರಿ ಇಲ್ಲದೇ ಕನ್ಯೆ ಹುಡುಕುತ್ತಿರೋರಿಗೆ ಸರ್ಕಾರ ಏನಾದ್ರೂ ಯೋಜನೆ ತರಲು ಅನ್ನೋ ಕಾರಣಕ್ಕೆ ಪಿಡಿಒ ಅವರಿಗೆ ಪತ್ರ ಬರೆದಿದ್ದೇನೆ ಎಂದು ಮುತ್ತು ಹೇಳಿಕೊಂಡಿದ್ದಾರೆ. ಈ ಪತ್ರವನ್ನು ಸ್ವೀಕರಿಸಿದ ಪಿಡಿಒ ಅನಿಲ್​​ ಗೌಡ ಅವರು ಮುತ್ತುಗೆ ಕನ್ಯೆ ಹುಡುಕೋದಕ್ಕೆ ಆಗಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಅವರಿಗೆ ಶುಭವಾಗಲಿ ಅಂತಾ ಹೇಳಿ ಕಳಿಸಿದ್ದಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮದುವೆಯಾಗಲು ಕನ್ಯೆ ಹುಡುಕಿಕೊಡಿ ಪ್ಲೀಸ್; ಪಿಡಿಓಗೆ ಗುತ್ತಿಗೆದಾರನ ಮನವಿ ಪತ್ರ..!

https://newsfirstlive.com/wp-content/uploads/2023/06/gadag.jpg

Load More