Advertisment

ಯುವ ಗುತ್ತಿಗೆದಾರ ಸಚಿನ್ ಪ್ರಕರಣಕ್ಕೆ ರಾಜಕೀಯ ಟಚ್; ಸಚಿವರ ತಲೆದಂಡಕ್ಕೆ ಬಿಜೆಪಿ ಪಟ್ಟು..!

author-image
Ganesh
Updated On
ಯುವ ಗುತ್ತಿಗೆದಾರ ಸಚಿನ್ ಪ್ರಕರಣಕ್ಕೆ ರಾಜಕೀಯ ಟಚ್; ಸಚಿವರ ತಲೆದಂಡಕ್ಕೆ ಬಿಜೆಪಿ ಪಟ್ಟು..!
Advertisment
  • ಬೀದರ್​ನ ಯುವ ಗುತ್ತಿಗೆದಾರ ಸಚಿನ್ ಪ್ರಕರಣ
  • ಇಂದು ಸಚಿನ್​ ನಿವಾಸಕ್ಕೆ ವಿಜಯೇಂದ್ರ ನಿಯೋಗ ಭೇಟಿ
  • ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್​ ಖರ್ಗೆ ವಾಗ್ದಾಳಿ

ಬೀದರ್​ನ ಯುವ ಗುತ್ತಿಗೆದಾರ ಸಚಿನ್ ಪ್ರಕರಣದ ವಿವಾದ ದಿನದಿಂದ ದಿನಕ್ಕೆ ಜೋರಾಗ್ತಿದೆ. ಸಚಿನ್ ಜೀವ ತೆಗೆದುಕೊಳ್ಳುವುದಕ್ಕೂ ಮುನ್ನ ಬರೆದಿಟ್ಟಿರಿವ ನೋಟ್​ ಅನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ, ಸಚಿವ ಪ್ರಿಯಾಂಕ್​ ಖರ್ಗೆಯ ತಲೆದಂಡಕ್ಕೆ ಪಟ್ಟು ಹಿಡಿದು ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿದೆ.

Advertisment

ಗುತ್ತಿಗೆದಾರ ಸಚಿನ್​ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿನ್​ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ದೆಹಲಿಯಿಂದ ವಾಪಸ್​ ಆದ ಬಳಿಕ ಸಂಜೆ 5 ಗಂಟೆ ಸುಮಾರಿಗೆ ವಿಜಯೇಂದ್ರ ಬೀದರ್​ಗೆ ತೆರಳಲಿದ್ದಾರೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬೀದರ್, ಕಲಬುರ್ಗಿ, ಭಾಗದ ಬಿಜೆಪಿ ಶಾಸಕರು, ಪ್ರಮುಖರು ಸಾಥ್ ನೀಡಲಿದ್ದಾರೆ. ಈ ವೇಳೆ ಸಚಿನ್‌ ಕುಟುಂಬದವರಿಂದ ಬಿಜೆಪಿ ನಾಯಕರು ಕೆಲ ಮಾಹಿತಿ ಕಲೆ ಹಾಕಲಿದ್ದು, ಸಚಿನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿದ್ದಾರೆ.

ಸಚಿನ್ ಕೇಸ್​ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

ನಿನ್ನೆ ಕೂಡ ಬಿಜೆಪಿಯ ಎರಡು ನಿಯೋಗ ಕಟ್ಟಿತೂಗಾಂವ್​ ಗ್ರಾಮದ ಸಚಿನ್​ ನಿವಾಸಕ್ಕೆ ತೆರಳಿ, ಸಾಂತ್ವನ ಹೇಳಿದೆ. ಸಚಿನ್ ಮನೆಯಲ್ಲಿನ ದಾಖಲೆಗಳನ್ನು ಕಾಂಗ್ರೆಸ್ ಕಚೇರಿ ತಲುಪಿದ್ದು, ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಈ ಕೇಸ್​ ಅನ್ನು ಸಿಬಿಐ ತನಿಖೆಗೆ ಒಪ್ಪಿಸಿ ನ್ಯಾಯ ಸಿಗುವರೆಗೂ ಹೋರಾಟ ಮಾಡ್ತೇವೆ ಎಂದು ಶಾಸಕ ಬಸವರಾಜ್ ಮತ್ತಿಮೂಡ್ ಹೇಳಿದ್ದಾರೆ.

ಇದನ್ನೂ ಓದಿ:ಅದೊಂದು ಪತ್ರದಿಂದ ಕಲಬುರಗಿ ಕಮಲ ಪಡೆಯಲ್ಲಿ ಭಯ.. ದೂರು ನೀಡಲು ಹೋದ್ರೆ ಠಾಣೆಯಲ್ಲಿ ಹೈಡ್ರಾಮಾ

Advertisment

ತಮ್ಮ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್​ ಖರ್ಗೆ ತಿರುಗೇಟು ನೀಡಿದ್ದಾರೆ. ನನ್ನ ರಾಜೀನಾಮೆ ಕೇಳುವುದು ಬಿಜೆಪಿ ನಾಯಕರಿಗೆ ಫ್ಯಾಷನ್ ಆಗಿಬಿಟ್ಟಿದೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಸಿಐಡಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ ನಾನು ಸಿದ್ಧ ಎಂದಿದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈಶ್ವರಪ್ಪ ವಿರುದ್ಧ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಬಳಿಕ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ರು. ಇದೀಗ ಬಿಜೆಪಿ ಕೂಡ, ಸಚಿವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಬಿಜೆಪಿ ಆಗ್ರಹಿಸುತ್ತಿದೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಇನ್ಯಾವ ಸ್ವರೂಪ ಪಡೆದುಕೊಳ್ಳುತ್ತೋ ಏನೋ.

ಇದನ್ನೂ ಓದಿ:M.G ರೋಡ್‌ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಪ್ಲಾನ್ ಮಾಡಿದ್ರೆ ಹುಷಾರ್‌; ತಪ್ಪದೇ ಈ ಸ್ಟೋರಿ ಓದಿ!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment