newsfirstkannada.com

‘25 ಲಕ್ಷಕ್ಕೆ ಶಾಸಕರ ಜೊತೆ ಮಲಗುತ್ತಿದ್ದ ನಟಿ ತ್ರಿಷಾ’- ತಮಿಳುನಾಡು ನಾಯಕನಿಂದ ವಿವಾದಾತ್ಮಕ ಹೇಳಿಕೆ

Share :

Published February 20, 2024 at 8:08pm

Update February 20, 2024 at 8:18pm

  ‘25 ಲಕ್ಷ ರೂಪಾಯಿಗೆ ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದ ಶಾಸಕ’

  ನಾಲಿಗೆ ಹರಿಬಿಟ್ಟ ಎಐಎಡಿಎಂಕೆ ಪಕ್ಷದ ಮಾಜಿ ನಾಯಕ ಎ.ವಿ ರಾಜು

  ನಟಿ ತ್ರಿಷಾ ಅವರು ಯಾವ ಪಾತ್ರದಲ್ಲಿ ಬೇಕಾದರೂ ನಟಿಸುತ್ತಾರಾ?

ಚೆನ್ನೈ: ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ವಿರುದ್ಧ ತಮಿಳುನಾಡಿನಲ್ಲಿ ಮತ್ತೊಬ್ಬ ನಾಯಕ ತನ್ನ ನಾಲಿಗೆ ಹರಿಬಿಟ್ಟು ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಮಾಜಿ ಎಐಎಡಿಎಂಕೆ ನಾಯಕ ಎ.ವಿ ರಾಜು ಅವರು ತ್ರಿಷಾ ಬಗ್ಗೆ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ.

ತ್ರಿಷಾ ಬಗ್ಗೆ ಎ.ವಿ ರಾಜು ಹೇಳಿದ್ದೇನು?
ಮಾಜಿ ಎಐಎಡಿಎಂಕೆ ನಾಯಕ ಎ.ವಿ ರಾಜು ಅವರು ಮಾತಿನ ಭರದಲ್ಲಿ ನಟಿ ತ್ರಿಷಾ ಅವರು ಯಾವ ಪಾತ್ರದಲ್ಲಿ ಬೇಕಾದರೂ ನಟಿಸುತ್ತಾರೆ. ಬೆಡ್‌ ರೂಮ್‌ ಸೀನ್‌ಗಳಲ್ಲೂ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಅಷ್ಟೇ ಅಲ್ಲ ಒಬ್ಬ ಶಾಸಕ ತ್ರಿಷಾ ಅವರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಎ.ವಿ ರಾಜು ನೀಡಿದ ಈ ಹೇಳಿಕೆಯ ವಿಡಿಯೋ ಸಖತ್‌ ವೈರಲ್ ಆಗಿದೆ. ಎ.ವಿ ರಾಜು ಅವರನ್ನು ಇತ್ತೀಚೆಗೆ ಎಐಎಡಿಎಂಕೆ ಪಕ್ಷದಿಂದಲೂ ಉಚ್ಛಾಟನೆಯನ್ನೂ ಮಾಡಿದೆ.

ಕಳೆದ ಎರಡು ತಿಂಗಳ ಹಿಂದಷ್ಟೇ ನಟ ಮನ್ಸೂರ್ ಅಲಿ ಖಾನ್ ಅವರು ತ್ರಿಷಾ ಅವರ ಬಗ್ಗೆ ಮಾತನಾಡಿದ್ದರು. ನಾನು ತ್ರಿಷಾ ಅವರ ರೊಮ್ಯಾನ್ಸ್ ಸೀನ್ ಮಾಡಲು ಬಯಸುತ್ತೇನೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದು ವಿವಾದ ಸೃಷ್ಟಿಸಿತ್ತು. ಇದೀಗ ರಾಜಕಾರಣಿಯೊಬ್ಬರು ತ್ರಿಷಾ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ತಮಿಳು ಚಿತ್ರರಂಗದ ನಿರ್ದೇಶಕ ಚರಣ್ ಅವರು ಎ.ವಿ ರಾಜು ಅವರು ಸಾಕ್ಷ್ಯಾಧಾರವಿಲ್ಲದೇ ಆರೋಪ ಮಾಡುವುದು ಸರಿಯಲ್ಲ. ಅವಹೇಳನಕಾರಿ ಹೇಳಿಕೆ ನೀಡಿರುವ ವ್ಯಕ್ತಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘25 ಲಕ್ಷಕ್ಕೆ ಶಾಸಕರ ಜೊತೆ ಮಲಗುತ್ತಿದ್ದ ನಟಿ ತ್ರಿಷಾ’- ತಮಿಳುನಾಡು ನಾಯಕನಿಂದ ವಿವಾದಾತ್ಮಕ ಹೇಳಿಕೆ

https://newsfirstlive.com/wp-content/uploads/2024/02/Trisha-Krishnan.jpg

Load More