newsfirstkannada.com

BREAKING: ‘ಚುನಾವಣೆ ಗೆಲ್ಲೋಕೆ ಹೆಣ ಬೀಳಿಸೋಕು ಬಿಜೆಪಿ ರೆಡಿ’- ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

Share :

Published March 28, 2024 at 1:39pm

Update March 28, 2024 at 1:42pm

  ‘ಲೋಕಸಭಾ ಚುನಾವಣೆ ಗೆಲ್ಲೋಕೆ ನನ್ನ ಹೆಣ ಬಿಳಿಸೋಕು ರೆಡಿ’

  ಬಿಜೆಪಿಯ ಸ್ಟಾರ್ ಪ್ರಚಾರಕರು ಯಾರು ಗೊತ್ತಾ ಇದೇ IT/ED/CBI

  ಕಲಬುರಗಿಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಲೋಕಸಭಾ ಚುನಾವಣೆಯ ಕಾವು ಕರ್ನಾಟಕದಲ್ಲಿ ಇವತ್ತು ರಂಗೇರಿದೆ. ಅಧಿಕೃತವಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಪ್ರಚಾರದ ಅಬ್ಬರ ಜೋರಾಗಿದೆ. ಲೋಕಸಭಾ ಚುನಾವಣೆಯ ಮತಯಾಚನೆ ಜೋರಾಗಿರುವಾಗಲೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ಮೇಲೆ ಹರಿಹಾಯ್ದಿದ್ದಾರೆ. ಲೋಕಸಭಾ ಚುನಾವಣೆ ಗೆಲ್ಲೋಕೆ ನನ್ನ ಹೆಣ ಬಿಳಿಸೋಕು ಬಿಜೆಪಿಯವರು ಸಿದ್ಧರಿದ್ದಾರೆ. ಆದರೆ ನಾನು ಸಂವಿಧಾನ ಮೇಲೆ ನಂಬಿಕೆ ಇಟ್ಟವನು. ನಾನು ಸಂವಿಧಾನದ ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ‘ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಮಾರಣ್ಣ’ ವಿಜಯೇಂದ್ರ ಅಧಿಕೃತ ಘೋಷಣೆ

ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, IT, ED ಬಗ್ಗೆ ನನಗೆ ಭಯವಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ದಿನಾ IT, EDಯಲ್ಲಿ ಕೂಡಿಸ್ತಾರೆ. ಅದ್ಯಾವೋದು ಸ್ವಾತಂತ್ರ್ಯ ಪೂರ್ವದ ಪ್ರಕರಣ ತೆಗೆದು IT, ED ತನಿಖೆ ಮಾಡುತ್ತಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರು ಯಾರು ಗೊತ್ತಾ ಇದೇ IT/ED/CBI ಎಂದು ಪ್ರಿಯಾಂಕ್ ಖರ್ಗೆ ಅವರು ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ‘ಚುನಾವಣೆ ಗೆಲ್ಲೋಕೆ ಹೆಣ ಬೀಳಿಸೋಕು ಬಿಜೆಪಿ ರೆಡಿ’- ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

https://newsfirstlive.com/wp-content/uploads/2024/03/Priyank-Kharge.jpg

Load More