/newsfirstlive-kannada/media/post_attachments/wp-content/uploads/2025/03/Rohit-sharma-12.jpg)
ರೋಚಕ ಪಂದ್ಯದಲ್ಲಿ ಕಿವೀಸ್ ತಂಡವನ್ನು 4 ವಿಕೆಟ್ಗಳಿಂದ ಮಣಿಸಿದ ರೋಹಿತ್ ಪಡೆ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಇದೀಗ ಚಾಂಪಿಯನ್ಸ್ ಟ್ರೋಫಿಯ ‘ಪ್ರಶಸ್ತಿ ಪ್ರದಾನ’ ಸಮಾರಂಭವು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಟ್ರೋಫಿ ಪ್ರದಾನ ಕಾರ್ಯಕ್ರಮದಲ್ಲಿ ಟೂರ್ನಿಯ ಅತಿಥ್ಯ ವಹಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಒಬ್ಬನೇ ಒಬ್ಬ ಸದಸ್ಯರೂ ಭಾಗಿಯಾಗಿರಲಿಲ್ಲ. ಈ ವಿಚಾರ ಪಾಕಿಸ್ತಾನದ ಮಾಜಿ ಕ್ರಿಕೆಟಿಗರ ಕಣ್ಣು ಕೆಂಪಾಗುವಂತೆ ಮಾಡಿದೆ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಕಾರ್ಯಕ್ರಮಕ್ಕೆ ತನ್ನ ಪ್ರತಿನಿಧಿಯಾಗಿ ಯಾರನ್ನೂ ಪಿಸಿಬಿ ಕಳುಹಿಸದೇ ಇರೋದು ಈ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ಯಾರೆಲ್ಲ ಇದ್ದರು?
ದುಬೈ ಅಂತಾರಾಷ್ಟ್ರಿಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರಿಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜನ್ ಬಿನ್ನಿ, ಕಾರ್ಯಾಧ್ಯಕ್ಷ ರೇವಜಿತ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ನಿರ್ದೇಶಕ ರೋಜರ್ ಟ್ವೊಸೆ ಇದ್ದರು. ಪಿಸಿಬಿ ಅಧ್ಯಕ್ಷ ಚೀಫ್ ಆಪರೇಟಿವ್ ಆಫೀಸರ್ ಸುಮೈರ್ ಅಹ್ಮದ್, ಚಾಂಪಿಯನ್ಸ್ ಟ್ರೋಫಿಯ ನಿರ್ದೇಶಕರಾಗಿದ್ದರು. ಅವರು ದುಬೈನಲ್ಲಿದ್ದರೂ, ಕಾರ್ಯಕ್ರಮಕ್ಕೆ ಬಂದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: 25 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ಹೃದಯಗೆದ್ದ ನಮ್ಮ ಕನ್ನಡಿಗ KL ರಾಹುಲ್..!
ವರದಿಗಳ ಪ್ರಕಾರ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಕ್ವಿ ದುಬೈಗೆ ಬರಲು ಸಾಧ್ಯವಾಗಿಲ್ಲ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಜರ್ದಾರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಇತ್ತು. ಅಲ್ಲಿ ಭಾಗಿಯಾಗುವ ಅಧಿಕೃತ ಬದ್ಧತೆಯಿಂದಾಗಿ ಬರಲು ಸಾಧ್ಯವಾಗಿಲ್ಲ. ನಾನು ಪಾರ್ಲಿಮೆಂಟ್ನ ಅಧಿವೇಶನದಲ್ಲಿ ಭಾಗಿಯಾಗಲೇಬೇಕಿತ್ತು ಎಂದು ಐಸಿಸಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಅಖ್ತರ್ ಆಕ್ರೋಶ..
ಇಂದು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದಿದೆ. ಆದರೆ ನಾನು ವಿಚಿತ್ರವಾದದ್ದನ್ನು ಗಮನಿಸಿದೆ. ಪಾಕಿಸ್ತಾನ ಪಂದ್ಯಾವಳಿಯ ಆತಿಥ್ಯ ವಹಿಸಿತ್ತು. ಆದರೆ ಅಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರತಿನಿಧಿಗಳಿರಲಿಲ್ಲ. ನನಗೆ ನಿಜವಾಗಿಯೂ ಅರ್ಥ ಆಗ್ತಿಲ್ಲ. ನಮ್ಮನ್ನು ಪ್ರತಿನಿಧಿಸಲು ಮತ್ತು ಟ್ರೋಫಿ ನೀಡಲು ಏಕೆ ನಮ್ಮವರು ಯಾರೂ ಇರಲಿಲ್ಲ? ಇದು ವಿಶ್ವ ವೇದಿಕೆಯಾಗಿದೆ. ಪಿಸಿಬಿ ಸದಸ್ಯರನ್ನು ನೋಡಲು ಸಾಧ್ಯವಾಗದೇ ಇರೋದು ಬೇಸರ ತಂದಿದೆ ಎಂದು ಖಖ್ತರ್ ಹೇಳಿದ್ದಾರೆ.
ಟೀಂ ಇಂಡಿಯಾ ಫೈನಲ್ಗೆ ಪ್ರವೇಶ ಮಾಡಿರೋದಕ್ಕೆ ಪಿಸಿಬಿ ಅಧ್ಯಕ್ಷರು ನಿನ್ನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಪಾಕಿಸ್ತಾನದ ಕೆಲವು ಮಾಜಿ ಆಟಗಾರರು ಮೆಸೇಜ್ ನೀಡಿದ್ದಾರೆ. ಫೈನಲ್ನಲ್ಲಿ ಟೀಂ ಇಂಡಿಯಾನೇ ಗೆಲ್ಲೋದು ಅಂತಾ ಗೊತ್ತಾಗಿತ್ತು. ಹೀಗಾಗಿ ಅವರು ಅಂತರವನ್ನು ಕಾಯ್ದುಕೊಂಡಿರಬಹುದು ಎಂದಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಎಷ್ಟು ICC ಟ್ರೋಫಿ ಗೆದ್ದಿದೆ..?
https://twitter.com/shoaib100mph/status/1898786882562957599
ಬರೋಬ್ಬರಿ 29 ವರ್ಷಗಳ ಬಳಿಕ ಪಾಕಿಸ್ತಾನವು ಐಸಿಸಿ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ವಿಪರ್ಯಾಸ ಅಂದ್ರೆ ಪಾಕಿಸ್ತಾನ ಕ್ರಿಕೆಟ್ ತಂಡವು ಗ್ರೂಪ್ ಹಂತದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೂತು, ಟೂರ್ನಿಯಿಂದ ಹೊರ ಬಿತ್ತು. ವರದಿಗಳ ಪ್ರಕಾರ ವೇದಿಕೆ ಮೇಲೆ ಯಾರೆಲ್ಲ ಇರಬೇಕು ಅನ್ನೋದನ್ನು ಐಸಿಸಿ ನಿರ್ಧರಿಸುತ್ತದೆ. ಆದರೆ ಪಿಸಿಬಿ ಕಳುಹಿಸಿದ್ದ ಪ್ರತಿನಿಧಿ ಸುಮೈರ್ ದುಬೈನಲ್ಲಿದ್ದರೂ ಯಾಕೆ ವೇದಿಕೆಗೆ ಬಂದಿಲ್ಲ ಅನ್ನೋದು ತಿಳಿದಿಲ್ಲ.
ಇದನ್ನೂ ಓದಿ: ನಿವೃತ್ತಿ ಬಗ್ಗೆ ಮಾತನಾಡಿ ಸ್ಪಷ್ಟನೆ ಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್