newsfirstkannada.com

24 ವರ್ಷದ ಯುವಿ ದಾಖಲೆ ಬ್ರೇಕ್ ಮಾಡಿದ ಕನ್ನಡದ ಹುಡ್ಗ.. ಮುಂಬೈಗೆ ಟಕ್ಕರ್ ಕೊಟ್ಟು ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ

Share :

Published January 16, 2024 at 11:33am

    ಕರ್ನಾಟಕದ ಬೊಂಬಾಟ್​ ಆಟಕ್ಕೆ, ಶರಣಾದ ಮುಂಬೈ ಟೀಮ್.!

    8 ವಿಕೆಟ್​ ಕಳೆದುಕೊಂಡು 890 ರನ್​ಗಳ ಕಲೆ ಹಾಕಿದ್ದ ಕರ್ನಾಟಕ

    ಚೊಚ್ಚಲ ಟ್ರೋಫಿ ಗೆದ್ದು ಸಂತಸ ವ್ಯಕ್ತಪಡಿಸಿದ ಕನ್ನಡ ಹುಡುಗರು

ಕರ್ನಾಟಕ ತಂಡದ ಯುವ ಆಟಗಾರರು ದೇಶವೇ ತಿರುಗಿನೋಡುವಂತ ಸಾಧನೆ ಮಾಡಿದ್ದಾರೆ. ಚೊಚ್ಚಲ ಕೂಚ್​​ ಬೆಹಾರ್​​ ಟ್ರೋಫಿ ಗೆದ್ದು ಸೀನಿಯರ್​​ಗಳಿಗೆ ಜೂನಿಯರ್ಸ್​​​ ಪಾಠ ಮಾಡಿದ್ದಾರೆ. ಫೈನಲ್​ ಫೈಟ್​​ನಲ್ಲಿ ಕರ್ನಾಟಕದ ಯುವ ಆಟಗಾರರ ಆಡಿದ ರೀತಿಯಂತೂ ಅದ್ಭುತ. ಹೇಗಿತ್ತು ಫೈನಲ್​?.

ಕೂಚ್​​ ಬೆಹಾರ್​ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದ ಅಂಡರ್​ 19 ಹುಡುಗರು ಇಡೀ ದೇಶವೇ ತಿರುಗಿನೋಡುವಂತೆ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ನವುಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಕರುನಾಡ ಹುಡುಗರು ಸೋಲಿನ ರುಚಿ ತೋರಿಸಿದ್ದಾರೆ.

ಕೂಚ್​ ಬೆಹಾರ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ತಂಡದ ಯುವ ಆಟಗಾರರು ಫೈನಲ್​ ಫೈಟ್​ನಲ್ಲೂ ಪಾರಮ್ಯ ಮರೆದರು. ಮೊದಲ ಇನ್ನಿಂಗ್ಸ್​ನಲ್ಲಿ ಮುಂಬೈ ತಂಡವನ್ನ ಕರ್ನಾಟಕ 380 ರನ್​ಗಳಿಗೆ ಆಲೌಟ್​ ಮಾಡ್ತು. ಆ ಬಳಿಕ ಇನ್ನಿಂಗ್ಸ್​ ಆರಂಭಿಸಿದ ಕರ್ನಾಟಕ 8 ವಿಕೆಟ್​ ಕಳೆದುಕೊಂಡು 890 ರನ್​ಗಳ ಕರ್ನಾಟಕ ಪೇರಿಸಿತು. ಕರ್ನಾಟಕವನ್ನ ಆಲೌಟ್​ ಮಾಡಲಾಗದೇ ಮುಂಬೈ ಒದ್ದಾಡಿಬಿಡ್ತು.

ಚೊಚ್ಚಲ ಕೂಚ್​​ ಬೆಹಾರ್​​ ಟ್ರೋಫಿ ಜಯಿಸಿದ ಕರ್ನಾಟಕ.!

ಮುಂಬೈ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಕರ್ನಾಟಕದ ಬ್ಯಾಟರ್ಸ್​​ ಬರೋಬ್ಬರಿ 223 ಓವರ್​ ಬ್ಯಾಟಿಂಗ್​​ ನಡೆಸಿದ್ರು. ಕರುನಾಡ ಹುಡುಗರ ದಿಟ್ಟ ಬ್ಯಾಟಿಂಗ್​ ಮುಂದೆ ಕಂಗೆಟ್ಟ, ಮುಂಬೈ ತಂಡ ಕೊನೆಯಲ್ಲಿ ಶರಣಾಗಿ ಸೋಲನ್ನ ಒಪ್ಪಿಕೊಳ್ತು. ಇನ್ನಿಂಗ್ಸ್​ ಲೀಡ್​ ಆಧಾರ ಜಯ ಸಾಧಿಸಿದ ಕರ್ನಾಟಕ ಇತಿಹಾಸ ನಿರ್ಮಿಸಿತು. ಇದೇ ಮೊದಲ ಬಾರಿಗೆ ಕೂಚ್​ ಬೆಹಾರ್​ ಟ್ರೋಫಿ ಜಯಿಸಿದ ಸಾಧನೆ ಮಾಡಿತು.

ಅಜೇಯ 400 ರನ್​ ಸಿಡಿಸಿ ಮಿಂಚಿದ ಕನ್ನಡಿಗ ಪ್ರಕಾರ್​​ ಚತುರ್ವೇದಿ

ಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡದ ಓಪನರ್​​ ಪ್ರಕಾರ್​ ಚತುರ್ವೇದಿ ಆಟಕ್ಕೆ ಮುಂಬೈ ತಂಡ ಸುಸ್ತು ಹೊಡೆಯಿತು. ಆರಂಭಿಕನಾಗಿ ಕಣಕ್ಕಿಳಿದು ಅಂತ್ಯವರೆಗೂ ಹೋರಾಡಿದ ಪ್ರಕಾರ ಚತುರ್ವೇದಿ ಮುಂಬೈ ಬೌಲರ್​​ಗಳ ಬೆವರಿಳಿಸಿದ್ರು. ಅಜೇಯ 404 ರನ್​ಗಳ ಅತ್ಯಮೋಘ ಇನ್ನಿಂಗ್ಸ್​ ಕಟ್ಟಿ ಅಬ್ಬರಿಸಿದ್ರು.

400 ರನ್​ ಸಿಡಿಸಿದ ಪ್ರಕಾರ್​ ಚತುರ್ವೇದಿ

  • 638 ಎಸೆತ
  • 404 ರನ್​
  • 44 ಬೌಂಡರಿ
  • 3 ಸಿಕ್ಸರ್​​

ಶತಕ ಸಿಡಿಸೋದು ಅಂದ್ರೆನೆ ಒಂದು ಸಾಧನೆ. ಅಂತ್ರದಲ್ಲಿ ಅಜೇಯ 404 ರನ್​ ಸಿಡಿಸೋದು ಅದು ಅಸಾಧ್ಯದ ವಿಚಾರವೆ. ಇಂತಹ ಅಸಾಧ್ಯದ ವಿಚಾರವನ್ನ ಪ್ರಕಾರ್​​ ಸಾಧ್ಯವಾಗಿಸಿದ್ರು. 638 ಎಸೆತಗಳನ್ನ ಎದುರಿಸಿದ ಪ್ರಕಾರ್​​, 404 ರನ್​ ಸಿಡಿಸಿದ್ರು. 44 ಬೌಂಡರಿ, 3 ಭರ್ಜರಿ ಸಿಕ್ಸರ್​​​ ಚತುರ್ವೇದಿಯ ಇನ್ನಿಂಗ್ಸ್​ನಲ್ಲಿದ್ವು.

ಪ್ರಕಾರ್​ ‘ಪ್ರಹಾರ’.. ಯುವರಾಜ್​​ ಸಿಂಗ್​ ದಾಖಲೆ ಉಡೀಸ್​.!

1999ರಲ್ಲಿ ನಡೆದ ಕೂಚ್​ ಬೆಹಾರ್​​ ಫೈನಲ್​ ಪಂದ್ಯದಲ್ಲಿ ಯುವರಾಜ್​ ಸಿಂಗ್​​ 358 ರನ್​​ಗಳಿಸಿದ್ದರು. ಅದೇ ಈವರೆಗಿನ ಫೈನಲ್​ ಪಂದ್ಯದ ಹೈಯೆಸ್ಟ್​ ಸ್ಕೋರ್​ ಆಗಿತ್ತು. ಈ ದಾಖಲೆಯನ್ನ ಇದೀಗ ಪ್ರಕಾರ್​​ ಉಡೀಸ್​ ಮಾಡಿದ್ದಾರೆ. ಪ್ರಕಾರ್​ ಮಾತ್ರವಲ್ಲ.. ಇಡೀ ಕರ್ನಾಟಕ ತಂಡವೇ ಫೈನಲ್​ ಫೈಟ್​ನಲ್ಲಿ ಆಲ್​​ರೌಂಡ್​ ಆಟವಾಡಿತು.

ಕೂಚ್​ ಬೆಹಾರ್​​ ಫೈನಲ್​ ಹೀರೋಸ್- ಬೌಲರ್ಸ್​​

ಫೈನಲ್​ ಪಂದ್ಯದಲ್ಲಿ ಕರ್ನಾಟಕದ ಪರ ಹಾರ್ದಿಕ್​ ರಾಜ್​ 4 ವಿಕೆಟ್​ ಕಬಳಿಸಿದ್ರೆ, ಸಮರ್ಥ್​​ N ಹಾಗೂ ಸಮಿತ್​ ದ್ರಾವಿಡ್​​ ತಲಾ 2 ವಿಕೆಟ್​​ ಕಬಳಿಸಿದ್ರು. ಇನ್ನು, ಕ್ಯಾಪ್ಟನ್​ ಧೀರಜ್​ ಗೌಡ ಹಾಗೂ ಅಗಸ್ತ್ಯ ತಲಾ 1 ವಿಕೆಟ್​ ಕಬಳಿಸಿದ್ರು.

ಕೂಚ್​ ಬೆಹಾರ್​​ ಫೈನಲ್​ ಹೀರೋಸ್- ಬ್ಯಾಟ್ಸ್​​​ಮನ್​

ಬ್ಯಾಟಿಂಗ್​ನಲ್ಲಿ ಪ್ರಕಾರ್​ ಚತುರ್ವೇದಿ ಅಜೇಯ 404 ರನ್​ ಸಿಡಿಸಿದ್ರೆ, ಹರ್ಷಿಲ್​ ಧರ್ಮಾನಿ 169 ರನ್​ ಸಿಡಿಸಿದ್ರು. ಇನ್ನು, ಕಾರ್ತಿಕೇಯ 72, ಸಮರ್ಥ್​​ N ಅಜೇಯ 55, ಹಾರ್ದಿಕ್​ ರಾಜ್​ 51 ಹಾಗೂ ಕಾರ್ತಿಕ್​ SU 50 ರನ್​ ಸಿಡಿಸಿ ಮಿಂಚಿದ್ರು.

ಅದ್ಭುತ ಪ್ರದರ್ಶನ ನೀಡಿದ ಕೂಚ್​ ಬೆಹಾರ್​​ ಫೈನಲ್​ ಪಂದ್ಯದಲ್ಲಿ ಆಲ್​​ರೌಂಡ್​ ಆಟವಾಡಿದ ಯುವ ಆಟಗಾರರು ಇಡೀ ರಾಜ್ಯವೇ ಮೆಚ್ಚುವಂತ ಸಾಧನೆ ಮಾಡಿದ್ದಾರೆ. ಭವಿಷ್ಯದಲ್ಲೂ ಯುವ ಆಟಗಾರರ ಪರ್ಫಾಮೆನ್ಸ್​ ಹೀಗೆ ಇರಲಿ. ಸೀನಿಯರ್​ ತಂಡಕ್ಕೆ ಎಂಟ್ರಿ ಕೊಟ್ಟಾಗಲೂ ಮಿಂಚಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

24 ವರ್ಷದ ಯುವಿ ದಾಖಲೆ ಬ್ರೇಕ್ ಮಾಡಿದ ಕನ್ನಡದ ಹುಡ್ಗ.. ಮುಂಬೈಗೆ ಟಕ್ಕರ್ ಕೊಟ್ಟು ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ

https://newsfirstlive.com/wp-content/uploads/2024/01/YUVARAJ_Prakhar_Chaturvedi.jpg

Load More