/newsfirstlive-kannada/media/post_attachments/wp-content/uploads/2024/07/DARSHAN-5-1.jpg)
ಅಡುಗೆ ಮನೆಯಲ್ಲಿ ನಾನ್-ಸ್ಟಿಕ್ ಪ್ಯಾನ್ ಕಡ್ಡಾಯವಾಗಿ ಇರುತ್ತೆ. ಅದರಲ್ಲಿ ನೆಚ್ಚಿನ ಅಡುಗೆ ಮಾಡೋದರಿಂದ ದೊಡ್ಡ ಖುಷಿ. ಆದ್ರೆ ನೆನಪಿರಲಿ ನಾನ್ ಸ್ಟಿಕ್ ಪ್ಯಾನ್ ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದನ್ನು ಅನೇಕರು ಅನುಭವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
ಕೆಲವು ದಿನಗಳ ಹಿಂದೆ ಅಮೆರಿಕದ ಪಾಯ್ಸನ್ ಸೆಂಟರ್ ನೀಡಿರುವ ವರದಿ ಪ್ರಕಾರ 267 ಜನರಲ್ಲಿ ಪಾಲಿಮರ್ ಫ್ಯೂಮ್ ಫೀವರ್ ಅನ್ನೋ ಅಪರೂಪದ ಕಾಯಿಲೆ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಬಿಸಿಯಾದ ನಾನ್ ಸ್ಟಿಕ್ ಪ್ಯಾನ್ನಿಂದ ಆಚೆ ಬರುವ ಹೊಗೆ ಕಾರಣ ಎಂದು ಹೇಳಲಾಗುತ್ತಿದೆ. ಅದರ ಹೊಗೆಯನ್ನು ಸೇವಿಸಿದ ಮಹಿಳೆಯರಲ್ಲಿ ಈ ರೀತಿಯ ಒಂದು ಫೀವರ್ (ಜ್ವರ) ಕಾಣಿಸಿಕೊಂಡಿದೆ.
ನಾನ್ ಸ್ಟಿಕ್ ಪ್ಯಾನ್ಗೆ ಮಾಡಿರುವ ಕೋಟಿಂಗ್ನಲ್ಲಿದೆ ವಿಷ
ಹೌದು.. ಅಡುಗೆ ಮನೆಯಲ್ಲಿ ನಾನ್ ಸ್ಟಿಕ್ ಪ್ಯಾನ್ಗಳು ಹೆಚ್ಚು ಸದ್ದು ಮಾಡುತ್ತಿವೆ. ಆಮ್ಲೆಟ್ ದೋಸೆಯಂತಹ ಗರಿಗರಿ ಐಟಮ್ಸ್ಗಳನ್ನ ಮಾಡುವುದು ಅಂದ್ರೆ ಹೆಣ್ಣು ಮಕ್ಕಳಿಗೆ ಸಂಭ್ರಮ. ಟೆಫ್ಲಾನ್ ಪ್ಯಾನ್ ಸೇರಿದಂತೆ ಎಲ್ಲಾ ಪ್ಯಾನ್ಗಳು ಪಿಟಿಎಫ್ಇ ಅನ್ನೋ ಅಂಶದಿಂದ ಕೋಟಿಂಗ್ ಆಗಿರುತ್ತದೆ. ಇದರಲ್ಲಿ ಅನೇಕ ವಿಷಕಾರಿ ಅಂಶಗಳು ಇರುತ್ತವೆ. ನೀವು ಒಲೆಯ ಮೇಲೆ ಪ್ಯಾನ್ ಬಿಸಿಗೆ ಇಟ್ಟಾಗ ಈ ಕೋಟಿಂಗ್ನಲ್ಲಿರುವ ಅಂಶ ಹೊಗೆಯೊಂದಿಗೆ ಸೇರಿ ಆಚೆ ಬರುತ್ತೆ. ಅದನ್ನು ಉಸಿರಿನೊಂದಿಗೆ ನಮ್ಮ ದೇಹ ಸೇರಿದಾಗ ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
ಪ್ಯಾನ್ ಬಿಸಿಯಿಂದಾಗಿ ಹೊಗೆ ಮೂಲಕ ಹೊರ ಬರುವ ವಿಷಕಾರಿ ಹೊಗೆಯನ್ನು ಸೇವಿಸುವುದರಿಂದ ಉಸಿರಾಟದಲ್ಲಿ ತೊಂದರೆ, ಕಫಾ, ತಲೆನೋವು, ತಲೆ ಸುತ್ತುವುದು, ಸುಸ್ತು, ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಫರಿದಾಬಾದ್ನ ಏಷಿಯಾ ಆಸ್ಪತ್ರೆಯ ವೈದ್ಯರಾದ ಸಂತೋಷ್ ಕುಮಾರ್ ಅಗ್ರವಾಲ್ ಹೇಳಿದ್ದಾರೆ. ಹೀಗಾಗಿ ಆದಷ್ಟು ನಾನ್ ಸ್ಟಿಕ್ ಪ್ಯಾನ್ನಿಂದ ಗೃಹಿಣಿಯರು ದೂರ ಉಳಿದಲ್ಲಿ ತುಂಬಾ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ