newsfirstkannada.com

ಮಹಿಳೆಯರೇ ಎಚ್ಚರ.. ನಾನ್-ಸ್ಟಿಕ್ ಪ್ಯಾನ್​ನಲ್ಲಿ ಅಡುಗೆ ಮಾಡ್ತಿದ್ದೀರಾ; ಹಾಗಿದ್ರೆ ಕಾದಿದೆ ಅಪಾಯ!

Share :

Published July 29, 2024 at 9:37pm

    ನಾನ್​ಸ್ಟಿಕ್ ಪ್ಯಾನ್​ನಲ್ಲಿ ಅಡುಗೆ ಮಾಡುವ ಮುನ್ನ ಇರಲಿ ಎಚ್ಚರ

    ನಿಮ್ಮ ಅಡುಗೆ ರುಚಿಕರವಾದ್ರೂ ನಿಮ್ಮ ಆರೋಗ್ಯಕ್ಕಿದೆ ತೊಂದರೆ

    ನಾನ್​ ಸ್ಟಿಕ್ ಪ್ಯಾನ್​ ಆರೋಗ್ಯಕ್ಕೆ ತರುವ ಅಪಾಯಗಳಾದ್ರು ಏನು?

ಅಡುಗೆ ಮನೆಯಲ್ಲಿ ಈಗೀಗ ನಾನ್​-ಸ್ಟಿಕ್ ಪ್ಯಾನ್​ ಕಡ್ಡಾಯವಾಗಿ ಎಲ್ಲರ ಮನೆಯಲ್ಲಿಯೂ ಇರುತ್ತೆ. ಅದರಲ್ಲಿ ನಿಮ್ಮ ನೆಚ್ಚಿನ ಅಡುಗೆಯನ್ನೆಲ್ಲಾ ಮಾಡುವುದು ದೊಡ್ಡ ಖುಷಿಯನ್ನು ತಂದಿಡುತ್ತೆ. ಆದ್ರೆ ನೆನಪಿರಲಿ ನಿಮ್ಮ ಅಡುಗೆ ಮನೆಯಲ್ಲಿರುವ ನಾನ್ ಸ್ಟಿಕ್ ಪ್ಯಾನ್​ ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದನ್ನು ಅನೇಕರು ಅನುಭವಿಸಿಯೂ ಇದ್ದಾರೆ.

ಇದನ್ನೂ ಓದಿ: ಊಟದಲ್ಲಿ ಇಲ್ಲದ ಉಪ್ಪಿನ ಕಾಯಿ.. ಹೋಟೆಲ್​ಗೆ 35,000 ರೂಪಾಯಿ ದಂಡ ವಿಧಿಸಿದ ಕೋರ್ಟ್​

ಕೆಲವು ದಿನಗಳ ಹಿಂದೆ ಅಮೆರಿಕದ ಪಾಯ್ಸನ್ ಸೆಂಟರ್ ನೀಡಿರುವ ವರದಿ ಪ್ರಕಾರ 267 ಜನರಲ್ಲಿ ಪಾಲಿಮರ್ ಫ್ಯೂಮ್ ಫೀವರ್ ಅನ್ನೋ ಅಪರೂಪದ ಕಾಯಿಲೆ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಬಿಸಿಯಾದ ನಾನ್​ ಸ್ಟಿಕ್ ಪ್ಯಾನ್​ನಿಂದ ಆಚೆ ಬರುವ ಹೊಗೆ ಕಾರಣ ಎಂದು ಹೇಳಲಾಗುತ್ತಿದೆ. ಅದರ ಹೊಗೆಯನ್ನು ಸೇವಿಸಿದ ಮಹಿಳೆಯರಲ್ಲಿ ಈ ರೀತಿಯ ಒಂದು ಫೀವರ್ (ಜ್ವರ) ಕಾಣಿಸಿಕೊಂಡಿದೆ.

ಇದನ್ನೂ ಓದಿ: Bedtime trend: ಮಲಗೋ ಮೊದಲು ಹೀಗೆ ಮಾಡಿದ್ರೆ ನೆಮ್ಮದಿಯ ನಿದ್ರೆ ನಿಮ್ಮದು; ವೈದ್ಯರ ಟಿಪ್ಸ್‌ ಇದು! 

ನಾನ್​ ಸ್ಟಿಕ್ ಪ್ಯಾನ್​ಗೆ ಮಾಡಿರುವ ಕೋಟಿಂಗ್​ನಲ್ಲಿದೆ ವಿಷ

ಹೌದು.. ಅಡುಗೆ ಮನೆಯಲ್ಲಿ ನಾನ್ ಸ್ಟಿಕ್ ಪ್ಯಾನ್​ಗಳು ಹೆಚ್ಚು ಸದ್ದು ಮಾಡುತ್ತಿವೆ. ಆಮ್ಲೆಟ್ ದೋಸೆಯಂತಹ ಗರಿಗರಿ ಐಟಮ್ಸ್​ಗಳನ್ನ ಮಾಡುವುದು ಅಂದ್ರೆ ಹೆಣ್ಣು ಮಕ್ಕಳಿಗೆ ಸಂಭ್ರಮ. ಟೆಫ್ಲಾನ್ ಪ್ಯಾನ್ ಸೇರಿದಂತೆ ಎಲ್ಲಾ ಪ್ಯಾನ್​ಗಳು ಪಿಟಿಎಫ್ಇ ಅನ್ನೋ ಅಂಶದಿಂದ ಕೋಟಿಂಗ್ ಆಗಿರುತ್ತದೆ. ಇದರಲ್ಲಿ ಅನೇಕ ವಿಷಕಾರಿ ಅಂಶಗಳು ಇರುತ್ತವೆ. ನೀವು ಒಲೆಯ ಮೇಲೆ ಪ್ಯಾನ್ ಬಿಸಿಗೆ ಇಟ್ಟಾಗ ಈ ಕೋಟಿಂಗ್​ನಲ್ಲಿರುವ ಅಂಶ ಹೊಗೆಯೊಂದಿಗೆ ಸೇರಿ ಆಚೆ ಬರುತ್ತೆ. ಅದನ್ನು ಉಸಿರಿನೊಂದಿಗೆ ನಮ್ಮ ದೇಹ ಸೇರಿದಾಗ ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
ಪ್ಯಾನ್ ಬಿಸಿಯಿಂದಾಗಿ ಹೊಗೆ ಮೂಲಕ ಹೊರ ಬರುವ ವಿಷಕಾರಿ ಹೊಗೆಯನ್ನು ಸೇವಿಸುವುದರಿಂದ ಉಸಿರಾಟದಲ್ಲಿ ತೊಂದರೆ, ಕಫಾ, ತಲೆನೋವು, ತಲೆ ಸುತ್ತುವುದು, ಸುಸ್ತು, ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಫರಿದಾಬಾದ್​ಬನ ಏಷಿಯಾ ಆಸ್ಪತ್ರೆಯ ವೈದ್ಯರಾದ ಸಂತೋಷ್ ಕುಮಾರ್ ಅಗ್ರವಾಲ್ ಹೇಳಿದ್ದಾರೆ. ಹೀಗಾಗಿ ಆದಷ್ಟು ನಾನ್ ಸ್ಟಿಕ್ ಪ್ಯಾನ್​ನಿಂದ ಗೃಹಿಣಿಯರು ದೂರ ಉಳಿದಲ್ಲಿ ತುಂಬಾ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮಹಿಳೆಯರೇ ಎಚ್ಚರ.. ನಾನ್-ಸ್ಟಿಕ್ ಪ್ಯಾನ್​ನಲ್ಲಿ ಅಡುಗೆ ಮಾಡ್ತಿದ್ದೀರಾ; ಹಾಗಿದ್ರೆ ಕಾದಿದೆ ಅಪಾಯ!

https://newsfirstlive.com/wp-content/uploads/2024/07/DARSHAN-5-1.jpg

Load More