ಕೂರ್ಗಿ ಶೈಲಿಯಲ್ಲಿ ಸೀರೆಯುಟ್ಟ ರಶ್ಮಿಕಾ.. ನ್ಯಾಷನಲ್​ ಕ್ರಶ್​ಗೆ ಕಮೆಂಟ್​ ಮಾಡೋ ಮುನ್ನ ಎಚ್ಚರ; ಯಾಕೆ?

author-image
Veena Gangani
Updated On
ಅಂದು ಆಡಿಷನ್​ಗಾಗಿ ಸುತ್ತಿ, ಸುತ್ತಿ ಕಣ್ಣೀರು ಹಾಕುತ್ತಿದ್ದೆ ಆದರೆ.. ನ್ಯಾಷನಲ್​ ಕ್ರಶ್​ ಲೈಫ್​ ಬದಲಾಗಿದ್ದು ಹೇಗೆ?
Advertisment
  • ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಕೂರ್ಗ್ ಬೆಡಗಿ ರಶ್ಮಿಕಾ ಮಂದಣ್ಣ
  • ಫೋಟೋ ಶೇರ್ ಮಾಡಿ ಕೊಡಗು ನನ್ನ ಹೃದಯದಲ್ಲಿ ಇರುವ ಸ್ಥಳ ಎಂದ ನಟಿ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ರಶ್ಮಿಕಾ ಮಂದಣ್ಣ ಫೋಟೋಸ್

ಪ್ಯಾನ್​ ಇಂಡಿಯಾ ಸ್ಟಾರ್​ ಹೀರೋಯಿನ್​​​ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಹೀಗಾಗಿ ನ್ಯಾಷನಲ್​ ಕ್ರಶ್​ ನಟಿ ರಶ್ಮಿಕಾ ಮಂದಣ್ಣ ಸಖತ್​ ಸುದ್ದಿಯಲ್ಲಿರುತ್ತಾರೆ.

publive-image

ಇದನ್ನೂ ಓದಿ: ಮುದ್ದು ಮುದ್ದಾದ ಅವಳಿ ಶಿಶುಗಳನ್ನೇ ಸುಟ್ಟು ಹಾಕಿದ ಪಾಪಿ ತಂದೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬ್ಯೂಟಿಫುಲ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು ನಟಿ ರಶ್ಮಿಕಾ ಮಂದಣ್ಣ ತನ್ನ ಹುಟ್ಟೂರು ಕೊಡಗಿಗೆ ನಟಿ ಭೇಟಿ ನೀಡಿದ್ದಾರೆ. ಸ್ನೇಹಿತೆಯ ಮದುವೆಯಲ್ಲಿ ಸಮಾರಂಭದಲ್ಲಿ ರಾಯಲ್‌ ಬ್ಲೂ ಸೀರೆಯಲ್ಲಿ ನಟಿ ಮಿರ ಮಿರ ಅಂತ ಮಿಂಚಿದ್ದಾರೆ. ಕಿರಿಕ್​ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​​ಗೆ ಕಾಲಿಟ್ಟಿದ್ದ ರಶ್ಮಿಕಾ ಮಂದಣ್ಣ ತಮ್ಮ ಅದ್ಭುತ ನಟನೆ ಮೂಲಕ ನ್ಯಾಶನಲ್ ಕ್ರಶ್ ಆಗಿ ಫೇಮಸ್​ ಆಗಿದ್ದಾರೆ.

publive-image

ಸದ್ಯ ನಟಿ ಶೇರ್ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟಿ ಶೂಟಿಂಗ್​ ಬ್ರೇಕ್ ಕೊಟ್ಟು ತನ್ನ ಗೆಳತಿಯ ಮದುವೆಗೆ ಹಾಜರಾಗಿದ್ದಾರೆ. ಜೊತೆಗೆ ಫೋಟೋಗಳನ್ನು ಶೇರ್ ಮಾಡಿಕೊಂಡು ಕೊಡಗು ನನ್ನ ಹೃದಯದಲ್ಲಿ ಇರುವ ಸ್ಥಳ. ಇವತ್ತು ನನ್ನ ಹುಡುಗಿಯರ ಜೊತೆ ಇದ್ದೇನೆ. ಆದರೆ ವಧು ಯಾತ್ರಾ ಮದುವೆ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನೀವು, ನಿಮ್ಮ ಸಂಗಾತಿ ಜೀವನಪೂರ್ತಿ ಖುಷಿ ಮತ್ತು ಆರೋಗ್ಯದಿಂದ ಇರು ಎಂದು ಬಯಸುತ್ತೇನೆ ಅಂತ ಬರೆದುಕೊಂಡಿದ್ದಾರೆ. ಇದೇ ಫೋಟೋ ನೋಡಿದ ಫ್ಯಾನ್ಸ್​ ಕಾಮೆಂಟ್ಸ್​ ಮಾಡೋ ಮುನ್ನ ಎಚ್ಚರ, ನಮ್ಮ ಕೂರ್ಗ್​ ಬೆಡಗಿ ಅಂತ ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment