/newsfirstlive-kannada/media/post_attachments/wp-content/uploads/2025/05/SCHOOL.jpg)
ಮತ್ತೆ ಅದೇ ಭಯ.. ಆತಂಕ.. ಸುಳಿವು ನೀಡದೇ ಸದ್ದು ಮಾಡ್ತಿರೋ ಕೊರೊನಾ ಅಬ್ಬರಿಸಲು ಶುರು ಮಾಡಿದೆ. ಹೋಗಿದ್ದ ಪಿಶಾಚಿ ಮತ್ತೆ ಬಂದು ವಕ್ಕರಿಸಿದೆ. ರಾಜಧಾನಿ ಬೆಂಗಳೂರಲ್ಲಿ ಮಹಾಮಾರಿ ಸದ್ದು ಮಾಡ್ತಿದೆ. ದಿನದಿಂದ ದಿನಕ್ಕೆ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ!
ಬಿಟ್ಟರೂ ಬಿಡದೀ ಮಾಯೆ ಎನ್ನುವಂತೆ ಕೊರೊನಾ ಹೊಸ ಹೊಸ ಅವತಾರ ತಾಳಿ ಬರುತ್ತಲೇ ಇದೆ. ಇದೀಗ ರಾಜ್ಯದಲ್ಲಿ ಕೊರೊನಾ ಎಂಬ ಕ್ರಿಮಿಯ ಕಾಟ ಮತ್ತೆ ಶುರುವಾಗಿದೆ. ರಾಜ್ಯದಲ್ಲಿ ಮತ್ತೆ ಚೀನಾ ತಳಿಯ ಗುಮ್ಮ ಕಂಗೆಡಿಸಿದೆ. ಮುಂಗಾರು ಪೂರ್ವ ಮಳೆ ಜೊತೆಜೊತೆಯಲ್ಲೇ ದಾಂಗುಡಿ ಇಟ್ಟು ದಂಗುಬಡಿಸಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದೆ. ರಾಜ್ಯರಾಜಧಾನಿಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಇದನ್ನೂ ಓದಿ: ಜ್ವರ, ನೆಗಡಿ ಇದ್ದ ಮಕ್ಕಳಿಗೆ ರಜೆ ಕೊಡಿ.. ರಾಜ್ಯದ ಎಲ್ಲಾ ಶಾಲೆಗಳಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸೂಚನೆ
ಕೊರೊನಾ ಕೇಸ್ 80ಕ್ಕೆ ಏರಿಕೆ!
- ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣ ಸಂಖ್ಯೆ 80ಕ್ಕೆ ಏರಿಕೆ!
- ಕಳೆದ 24 ಗಂಟೆಯಲ್ಲಿ 37 ಹೊಸ ಕೊರೊನಾ ಕೇಸ್‌ಗಳು ಪತ್ತೆ
- 4 ಮಂದಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದು, 80 ಸಕ್ರಿಯ ಕೇಸ್
- ಬೆಂಗಳೂರಿನಲ್ಲಿ 73 ಕೊರೊನಾ ಪ್ರಕರಣಗಳ ಸಂಖ್ಯೆ ದಾಖಲು
- 183 ಮಂದಿಗೆ ಟೆಸ್ಟ್ ಮಾಡಲಾಗಿದ್ದು, 73 ಮಂದಿ ಪಾಸಿಟಿವ್
- ಬೆಂಗಳೂರು ಗ್ರಾಮಾಂತರದಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್
- ಶೇಕಡ 19.37ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದೆ
ಬೆಂಗಳೂರು ಅಷ್ಟೇ ಅಲ್ಲ.. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಕೇಸ್‌ಗಳ ಸಂಖ್ಯೆ ಮೆಲ್ಲನೆ ತಲೆದೋರಿದೆ. ಹಲವು ಜಿಲ್ಲೆಗಳಲ್ಲಿ ಕೊವಿಡ್ 19 ಕ್ರಿಮಿ ಕಾಣಿಸಿಕೊಂಡು ರಾಜ್ಯದ ಜನರನ್ನ ಆತಂಕಕ್ಕೆ ತಳ್ಳಿದೆ.
ಕೊರೊನಾ ಕಂಟಕ!
ದಕ್ಷಿಣ ಕನ್ನಡದಲ್ಲಿ ಒಂದು ಕೊರೊನಾ ಸೋಂಕು ಪಾಸಿಟಿವ್ ಕೇಸ್ ದಾಖಲಾಗಿದೆ. ಮೈಸೂರು ಭಾಗದಲ್ಲಿ 3 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ವಿಜಯನಗರದಲ್ಲಿ ಒಂದು ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಮೊನ್ನೆ 47 ಇದ್ದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ನಿನ್ನೆಗೆ 80ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಪ್ರೇಮಿಗಳಿಗೆ ಅಶುಭ, ರಿಯಲ್ ಎಸ್ಟೇಟ್, ಭೂ ವ್ಯವಹಾರ ಮಾಡುವವರಿಗೆ ಲಾಭ; ಇಲ್ಲಿದೆ ಇಂದಿನ ಭವಿಷ್ಯ
ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದ್ದು ರಾಜ್ಯ ಸರ್ಕಾರ ಅಲರ್ಟ್ ಘೋಷಿಸಿದೆ. ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು ಅಗತ್ಯಬಿದ್ರೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಕೋವಿಡ್ ಸ್ಥಿತಿಗತಿ ನೋಡಿಕೊಂಡು ಕಠಿಣ ರೂಲ್ಸ್ ಜಾರಿ ಮಾಡುವ ಚಿಂತನೆಯಲ್ಲಿದೆ. ರೂಪಾಂತರಿ ರೂಪದಲ್ಲಿ ಅಬ್ಬರಿಸ್ತಿರೋ ಕೊರೊನಾಗೆ ಕಡಿವಾಣ ಹಾಕಲು ಸರ್ಕಾರ ಸಕಲ ತಯಾರಿ ಮಾಡಿಕೊಳ್ತಿದೆ. ಹಿಂದಿನ ಪರಿಸ್ಥಿತಿ ಉದ್ಭವಿಸಿದ್ರೆ ಯುದ್ಧೋಪಾದಿಯಲ್ಲಿ ನುಗ್ಗುವಂತೆ ಆರೋಗ್ಯ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ.
ಶೀತ-ಜ್ವರ ಇದ್ದ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಶಾಲೆಗಳೂ ಕೂಡ ಇಂಥ ಮಕ್ಕಳಿಗೆ ರಜೆ ನೀಡಬೇಕು. ಈ ಬಗ್ಗೆ ಶೀಘ್ರದಲ್ಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮೇ 29 ರಿಂದ ರಾಜ್ಯಾದ್ಯಂತ ಶಾಲೆಗಳು ಪುನರ್ ಆರಂಭ ಆಗುತ್ತಿವೆ.
ಇದನ್ನೂ ಓದಿ: ಲಕ್ನೋದಲ್ಲಿ ಇವತ್ತು ಆರ್ಸಿಬಿಗೆ ಒಂದಲ್ಲ, ಎರಡು ಸವಾಲ್..! ಏನದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ