ಬೆಂಗಳೂರಲ್ಲಿ ಕೊರೊನಾ ಕೇಸ್‌ ದಿಢೀರ್ ಹೆಚ್ಚಳ; ನಾಳೆ ಹೈವೋಲ್ಟೇಜ್ ಮೀಟಿಂಗ್!

author-image
admin
Updated On
ಬೆಂಗಳೂರಲ್ಲಿ ಕೊರೊನಾ ಕೇಸ್‌ ದಿಢೀರ್ ಹೆಚ್ಚಳ; ನಾಳೆ ಹೈವೋಲ್ಟೇಜ್ ಮೀಟಿಂಗ್!
Advertisment
  • ಗರ್ಭಿಣಿಯರು, ಬಾಣಂತಿಯರಿಗೆ ಕೊವಿಡ್ ಟೆಸ್ಟ್ ಕಡ್ಡಾಯ
  • ಕೆಮ್ಮು, ನೆಗಡಿ, ಜ್ವರ ಕಂಡು ಬಂದ್ರೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ
  • ಸ್ಯಾರಿ ಕೇಸ್‌ಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ

ಕೊರೊನಾ ಸೋಂಕಿತರ ಸಂಖ್ಯೆ ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕೊರೊನಾ ಪಾಸಿಟಿವ್ ಕೇಸ್ ಏರಿಕೆಯಾಗುತ್ತಿದ್ದಂತೆ ಆರೋಗ್ಯ ಇಲಾಖೆ, ಬಿಬಿಎಂಪಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಗರ್ಭಿಣಿಯರು, ಬಾಣಂತಿಯರ ಮೇಲೆ ನಿಗಾ
ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಗರ್ಭಿಣಿಯರು ಹಾಗೂ ಬಾಣಂತಿಯರ ಮೇಲೆ ನಿಗಾ ಇಡಲಾಗಿದೆ. ಅನೇಕ ಆಸ್ಪತ್ರೆಗಳಲ್ಲಿ ಈಗಾಗಲೇ ಗರ್ಭಿಣಿಯರು, ಬಾಣಂತಿಯರಿಗೂ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ.
ರೋಗಿಗಳಲ್ಲಿ ಕೊವಿಡ್ ಸಿಂಪ್ಟಮ್ಸ್ ಇದ್ದಲ್ಲಿ ವೈದ್ಯರು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ವೈದ್ಯರು ಗರ್ಭಿಣಿಯರು ಹಾಗೂ ಬಾಣಂತಿಯರು ಜನಸಂದಣಿ ಸ್ಥಳಗಳಲ್ಲಿ ಓಡಾಡುವುದನ್ನ ಕಡಿಮೆ ಮಾಡಬೇಕು. ಇದರಿಂದ ಮಗುವಿನ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರಸೂತಿ ತಜ್ಞರು ಮಗುವಿನ ಆರೋಗ್ಯದಿಂದ ಗರ್ಭಿಣಿಯರು ಹಾಗೂ ಬಾಣಂತಿಯರು ಎಚ್ಚರಿಕೆ ವಹಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎನ್ನುವ ಸಲಹೆ ನೀಡಿದ್ದಾರೆ.

publive-image

ನಾಳೆ ಹೈವೋಲ್ಟೇಜ್ ಮೀಟಿಂಗ್
ಕೊರೊನಾ ಮಹಾಮಾರಿ ಬೆಂಗಳೂರಿಗೆ ರೀ ಎಂಟ್ರಿ ಕೊಟ್ಟಿರುವುದರಿಂದ ಬಿಬಿಎಂಪಿಯಲ್ಲಿ ನಾಳೆ ಹೈವೋಲ್ಟೇಜ್ ಮೀಟಿಂಗ್ ಕರೆಯಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ನೇತೃತ್ವದಲ್ಲಿ ನಾಳೆ ಮಹಾನಗರ ಪಾಲಿಕೆಯ 8 ವಲಯಗಳ ವಿಶೇಷ ಆಯುಕ್ತರು, ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ದುಃಖದಲ್ಲೇ ಪ್ರಾಣಬಿಟ್ಟ ಅಪ್ಪ, ಅಮ್ಮ, ತಂಗಿ.. ಅಂತ್ಯಕ್ರಿಯೆಗೂ ಬಾರದೇ ಕಟುಕಳಾದ ಮಗಳು.. 

ಪ್ರಮುಖವಾಗಿ ಪಾಲಿಕೆಯ ಆಸ್ಪತ್ರೆಗೆ ಬರುವ ಗರ್ಭಿಣಿಯರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಕೆಮ್ಮು, ನೆಗಡಿ, ಜ್ವರ ಕಂಡು ಬಂದ್ರೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ. ಟೆಸ್ಟಿಂಗ್, ಬೆಡ್ ಕಾದಿರಿಸುವಿಕೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು. ಈ ಹೈವೋಲ್ಟೇಜ್ ಸಭೆಯಲ್ಲಿ ವೈರಸ್ ತಡೆಗಟ್ಟಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಸ್ಯಾರಿ ಕೇಸ್‌ಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡುವ ಸಾಧ್ಯತೆ ಇದೆ.

ವಯಸ್ಸು ಆದವರು ಗರ್ಭಿಣಿಯರು, ವೃದ್ಧರ ಮೇಲೆ ಹೆಚ್ಚಿನ ಗಮನ ನೀಡುವುದು. ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಹಾಕುವಂತೆ ಸಾರ್ವಜನಿಕರಿಗೆ ಸಲಹೆ, ಸ್ಯಾನಿಟೈಸರ್ ಬಳಸುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment