24 ಗಂಟೆಯಲ್ಲಿ 7 ಸಾವು.. ಒಂದೇ ವಾರದಲ್ಲಿ 5 ಪಟ್ಟು ಕೊರೊನಾ ಹೆಚ್ಚಳ; ಯಾವ ರಾಜ್ಯದಲ್ಲಿ ಹೆಚ್ಚು? ಕಡಿಮೆ?

author-image
admin
Updated On
ರಾಜ್ಯದಲ್ಲಿ ಕೊರೊನಾ ವೈರಸ್‌ 80ಕ್ಕೆ ಏರಿಕೆ.. ಯಾವ್ಯಾವ ಜಿಲ್ಲೆಗಳಲ್ಲಿ ಕೋವಿಡ್ ಕೇಸ್ ಪತ್ತೆ ಆಗಿವೆ?
Advertisment
  • ದಿನೇ ದಿನೇ ದೇಶದಲ್ಲಿ ಕೊರೊನಾ ಸಕ್ರಿಯ ಕೇಸ್‌ಗಳ ಸಂಖ್ಯೆ ಹೆಚ್ಚಳ
  • ಕೇರಳ ರಾಜ್ಯದಲ್ಲಿ ವಿದೇಶಗಳಿಗೆ ಹೋಗಿ ಬರೋ ಜನರ ಸಂಖ್ಯೆ ಹೆಚ್ಚು
  • ಗಾಬರಿಯಾಗುವ ಅಗತ್ಯವಿಲ್ಲ ಎಂದ ಕೇಂದ್ರ ಆರೋಗ್ಯ ಇಲಾಖೆ

ನವದೆಹಲಿ: ಮತ್ತೆ ವಕ್ಕರಿಸಿರುವ ಕೊರೊನಾ ಮಹಾಮಾರಿ ದಿನ ಕಳೆದಂತೆ ದೇಶಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದೆ. ದಿನೇ ದಿನೇ ದೇಶದಲ್ಲಿ ಕೊರೊನಾ ಕೇಸ್‌ ಹೆಚ್ಚಾಗುತ್ತಿದ್ದು, ಇಂದಿಗೆ ಕೊರೊನಾ ಸಕ್ರಿಯ ಕೇಸ್‌ಗಳ ಸಂಖ್ಯೆ 2,710ಕ್ಕೆ ಏರಿಕೆ ಆಗಿದೆ.

ಕಳೆದ 24 ಗಂಟೆಯಲ್ಲಿ ಇಡೀ ದೇಶದಲ್ಲಿ ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚು ಕೊರೊನಾ ಸಕ್ರಿಯ ಕೇಸ್‌ಗಳು ಪತ್ತೆಯಾಗಿದೆ. ಕೇರಳ ರಾಜ್ಯದಲ್ಲಿ ಬರೋಬ್ಬರಿ 1,147 ಕೊರೊನಾ ಸಕ್ರಿಯ ಕೇಸ್‌ಗಳು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 424, ದೆಹಲಿಯಲ್ಲಿ 294, ಗುಜರಾತ್‌ನಲ್ಲಿ 223, ತಮಿಳುನಾಡು 148, ಕರ್ನಾಟಕದಲ್ಲಿ 148, ಪಶ್ಚಿಮ ಬಂಗಾಳದಲ್ಲಿ 116 ಕೊರೊನಾ ಕೇಸ್ ಪತ್ತೆಯಾಗಿದೆ. ಮಿಜೋರಾಂ ರಾಜ್ಯದಲ್ಲಿ 2 ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ.

ಇದನ್ನೂ ಓದಿ: ಕೊರೊನಾ ಪಾಸಿಟಿವಿಟಿ ರೇಟ್ ಮತ್ತೆ ಹೆಚ್ಚಳ.. ಬೆಳಗಾವಿಯಲ್ಲಿ ಪ್ರಾಣಬಿಟ್ಟ ಓರ್ವ ವೃದ್ಧ.. 

ಕಳೆದ ವಾರಕ್ಕೆ ಹೋಲಿಸಿದರೆ ಒಂದೇ ವಾರದಲ್ಲಿ ದೇಶದಲ್ಲಿ 5 ಪಟ್ಟು ಕೊರೊನಾ ಕೇಸ್ ಹೆಚ್ಚಳವಾಗಿದೆ. ಕೇರಳ ರಾಜ್ಯದಲ್ಲಿ ವಿದೇಶಗಳಿಗೆ ಹೋಗಿ ಬರುವ ಜನರ ಸಂಖ್ಯೆ ಹೆಚ್ಚು. ಕೇರಳ ರಾಜ್ಯದಲ್ಲಿ ಕೊರೊನಾ ಟೆಸ್ಟಿಂಗ್‌ ಕೂಡ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಡಲಾಗುತ್ತಿದೆ. ಹೀಗಾಗಿ ಕೇರಳದಲ್ಲಿ ಕೊರೊನಾ ಸಕ್ರಿಯ ಕೇಸ್‌ಗಳು ಸ್ಫೋಟಗೊಂಡಿವೆ.

publive-image

ಕೊರೊನಾದಿಂದ ಕಳೆದ 24 ಗಂಟೆ ಅವಧಿಯಲ್ಲಿ 7 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಇಬ್ಬರು, ದೆಹಲಿ, ಗುಜರಾತ್, ಕರ್ನಾಟಕ, ಪಂಜಾಬ್, ತಮಿಳುನಾಡಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

JN.1 ಹಾಗೂ LF.7 ಹಾಗೂ NB.1.8.1 ತಳಿಯ ಕೊರೊನಾ ಕೇಸ್‌ಗಳು ಭಾರತದಲ್ಲಿ ಪತ್ತೆಯಾಗಿದೆ. ಹೊಸ ತಳಿಗಳು ರೋಗ ನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬಹುದು. ಆದರೆ ದೇಶದಲ್ಲಿ ಕೊರೊನಾ ಕೇಸ್‌ಗಳಿಗೆ ಗಾಬರಿಯಾಗುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment