/newsfirstlive-kannada/media/post_attachments/wp-content/uploads/2025/05/CORONA_NEW.jpg)
ರಾಜ್ಯದಲ್ಲಿ ಮಳೆ ನಡುವೆ ಕೊರೊನಾ ಕ್ರಿಮಿಯ ಅಬ್ಬರ ಜೋರಾಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆ ದೇಶದ ಹಲವು ರಾಜ್ಯದಲ್ಲೂ ಸೋಂಕಿನ ಸಂಖ್ಯೆ ಹೆಚ್ಚು ಆಗುತ್ತಿರುವುದು ತಲೆ ನೋವಾಗಿ ಪರಿಣಮಿಸಿದೆ.
ರಾಜ್ಯಕ್ಕೆ ಕೊರೊನಾ ರೀ ಎಂಟ್ರಿ ಕೊಟ್ಟಿದೆ. ರಾಜ್ಯ ರಾಜಧಾನಿಯನ್ನೇ ತನ್ನ ಅಡ್ಡ ಮಾಡಿಕೊಂಡು ಸೋಂಕಿನ ಸುಂಟರಗಾಳಿ ಹಬ್ಬಿಸುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, ಸೈಲೆಂಟ್ ಆಗಿಯೇ ತನ್ನ ಅಧಿಪತ್ಯ ಸಾಧಿಸುತ್ತಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 200ರ ಗಡಿ ದಾಟಿದ್ದು, ಆತಂಕ ಮೂಡಿಸಿದೆ.
ಕಳೆದ 24 ಗಂಟೆಯಲ್ಲಿ ಬರೋಬ್ಬರಿ 114 ಕೇಸ್ ದಾಖಲು
ರಾಜ್ಯದಲ್ಲಿ ಮತ್ತೆ ಚೀನಾ ತಳಿಯ ಗುಮ್ಮ ಕಂಗೆಡಿಸಿದೆ. ಮುಂಗಾರು ಮಳೆಯ ಜೊತೆ ಜೊತೆಯಲ್ಲೆ ಕೊರೊನಾ ಹಾವಳಿ ಕೂಡ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದೆ. ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 114 ಕೇಸ್ಗಳು ದಾಖಲಾಗಿದೆ.
ಕೊರೊನಾ ಕಂಟಕ!
- ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 234ಕ್ಕೆ ಏರಿಕೆ
- ಕಳೆದ 24 ಗಂಟೆಯಲ್ಲಿ 114 ಕೇಸ್ ಪ್ರಕರಣಗಳು ಪತ್ತೆ
- ಕೊರೊನಾಗೆ ಒಬ್ಬರು ಬಲಿ, ಸಾವಿನ ಸಂಖ್ಯೆ 3ಕ್ಕೆ ಏರಿಕೆ
- 24 ಗಂಟೆಯಲ್ಲಿ 27 ಮಂದಿ ಸೋಂಕಿನಿಂದ ಗುಣಮುಖ
- ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.24.7
ಹಾವೇರಿಯಲ್ಲಿ ಕೊರೊನಾ ಐಸೋಲೇಷನ್ ವಾರ್ಡ್ ಸಿದ್ಧ
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಉಲ್ಬಣಗೊಳುತ್ತಿರುವ ಹಿನ್ನೆಲೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಐಸೋಲೇಷನ್ ವಾರ್ಡ್ ಸಿದ್ಧಪಡಿಸಲಾಗಿದೆ. ಕೊರೊನಾ 2ನೇ ಅಲೆಯಲ್ಲಿ ಅತಿ ಹೆಚ್ಚು ಮರಣ ಪ್ರಮಾಣದ ಅಪಖ್ಯಾತಿ ಹೊಂದಿರುವ ಹಾವೇರಿ ಜಿಲ್ಲೆ. ಈ ಬಾರಿ ಕೊರೊನಾ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧತೆ ನಡೆಸಿದೆ.
ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಬೆಡ್ಗಳನ್ನು ಕಾಯ್ದಿರಿಸಲು ಆದೇಶಿಸಿದ ಹಿನ್ನಲೆ, 16 ಬೆಡ್ಗಳುಳ್ಳ ವಿಶೇಷ ಐಸೋಲೇಷನ್ ವಾರ್ಡ್ ಸಿದ್ಧಪಡಿಸಲಾಗಿದೆ. ಜೊತೆಗೆ ಎರಡು ಶಿಫ್ಟ್ಗಳಲ್ಲಿ ವೈದ್ಯಕೀಯ ಸಿಬ್ಬಂದಿ ನಿಯೋಜಿಸಿ ಕೋವಿಡ್ ಎದುರಿಸಲು ಹಾವೇರಿ ಜಿಲ್ಲಾಸ್ಪತ್ರೆ ಸಜ್ಜಾಗಿದೆ.
ಸರ್ಕಾರದ ಆದೇಶ ಮತ್ತು ಮಾರ್ಗ ಸೂಚಿಯಂತೆ ಶಂಕಿತ ಪ್ರಕರಣಗಳ ಸ್ವ್ಯಾಬ್ ಕಲೆಕ್ಟ್ ಮಾಡಿ, ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ಕಳುಹಿಸುತ್ತಿದ್ದೇವೆ. ಈವರೆಗೂ ಯಾವುದು ಪಾಸಿಟಿವ್ ಬಂದಿಲ್ಲ. ಒಂದು ವೇಳೆ ಪಾಸಿಟಿವ್ ಬಂದರೆ ಆ ರೋಗಿಯ ಚಿಕಿತ್ಸೆಗೆ ಅನುಕೂಲ ಆಗುವಂತೆ ಆಸ್ಪತ್ರೆಯ 3ನೇ ಮಹಡಿಯಲ್ಲಿ 16 ಬೆಡ್ಗಳನ್ನು ಸಿದ್ಧ ಮಾಡಿ ಇಡಲಾಗಿದೆ. ಆಕ್ಷಿಜನ್ ಸೇರಿ ಅಗತ್ಯ ಔಷಧಗಳನ್ನು ತಯಾರು ಮಾಡಿದ್ದೇವೆ.
ಪರಸಪ್ಪ ಚುರ್ಚಿಹಾಳ, ವೈದ್ಯಾಧಿಕಾರಿ
ಇದನ್ನೂ ಓದಿ:ಕಮಲ್ ಹಾಸನ್ಗೆ ಟಾಂಗ್ ಕೊಟ್ಟ ರಚಿತಾ ರಾಮ್.. ಹಿರಿಯ ನಟನ ಹೆಸರು ಹೇಳದೇ ಡಿಚ್ಚಿ!
ಕೊವಿಡ್ ಟೆಸ್ಟ್ ಕಡ್ಡಾಯಗೊಳಿಸಿದ ಕೇಂದ್ರ
ರಾಜ್ಯ ಮಾತ್ರವಲ್ಲದೇ ದೇಶದಲ್ಲೂ ಕೊರೊನಾ ಅಬ್ಬರ ಹೆಚ್ಚಾಗ್ತಿರೋ ಹಿನ್ನೆಲೆ ಕೇಂದ್ರ ಆರೋಗ್ಯ ಇಲಾಖೆ ಕೊವಿಡ್ ಟೆಸ್ಟ್ ಕಡ್ಡಾಯಗೊಳಸಿದೆ.. SARI ಗುಣಲಕ್ಷಣ ಹೊಂದಿರುವವರಿಗೆ ಕೊವಿಡ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಸ್ವ್ಯಾಬ್ ಪಡೆದ ದಿನವೇ ಪ್ರಯೋಗಾಲಯಕ್ಕೆ ಕಳಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ..
ಈಗಾಗಲೇ ಬೇಸಿಗೆ ರಜೆ ಮುಗಿಸಿ ಮಕ್ಕಳು ಶಾಲೆಗಳತ್ತ ಮುಖ ಮಾಡ್ತಿದ್ದಾರೆ. ಇದರ ನಡುವೆ ಕೊರೊನಾ ಭೀತಿ ಪೋಷಕರ ನಿದ್ದೆಗಡೆಸಿದ್ದು, ಕೊರೊನಾ ಮಹಾಮಾರಿಗೆ ಕಡಿವಾಣ ಹಾಕಲು ಸರ್ಕಾರ ಸಕಲ ತಯಾರಿ ಮಾಡಿಕೊಳ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ