/newsfirstlive-kannada/media/post_attachments/wp-content/uploads/2025/05/Corona-Health-buletin.jpg)
ಮನುಕುಲವನ್ನ ಇನ್ನಿಲ್ಲದಂತೆ ಕಾಡಿದ ಮಹಾಮಾರಿ ಕೊರೊನಾ ವೈರಸ್ ಮತ್ತೆ ವಕ್ಕರಿಸೋದಕ್ಕೆ ಶುರು ಮಾಡಿದೆ. ಲಕ್ಷಾಂತರ ಮಂದಿಯನ್ನ ಬಲಿಪಡೆದು ರಣಕೇಕೆ ಹಾಕಿದ್ದ ಕೋವಿಡ್-19 ಹೊಸ ರೂಪಾಂತರದೊಂದಿಗೆ ರಾಜ್ಯದಲ್ಲಿ ಶತಕ ಸಿಡಿಸಿದೆ.
ದುಸ್ವಪ್ನದಂತೆ ಕಾಡಿದ ಕೊರೊನಾ ಹೋಯ್ತಪ್ಪ ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೊಂದು ರೂಪದಲ್ಲಿ ಎದುರಾಗಿ ಭೀತಿ ಹುಟ್ಟಿಸಿದೆ. ಈ ಮಧ್ಯೆ ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡಿ ಕಾಡುವ ವೈರಸ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಮತ್ತದೇ ಚೀನಾ ವೈರಸ್ ರಾಜ್ಯದಲ್ಲಿ ಆಮೆಗತಿಯಲ್ಲಿ ಆ್ಯಕ್ಟೀವ್ ಆಗೋದಕ್ಕೆ ಶುರು ಮಾಡಿದೆ.
ರಾಜ್ಯದಲ್ಲಿ ಕೊರೊನಾ ಸಕ್ರಿಯ ಕೇಸ್ಗಳ ಸಂಖ್ಯೆ 100ಕ್ಕೆ ಏರಿಕೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊವಿಡ್ 19 ಕ್ರಿಮಿ ಕಾಣಿಸಿಕೊಂಡು ರಾಜ್ಯದ ಜನರನ್ನ ಆತಂಕಕ್ಕೆ ತಳ್ಳಿದೆ. ಸೈಲೆಂಟ್ ಆಗಿಯೇ ಚೀನಾ ವೈರಸ್ ಕೊರೊನಾ ಮತ್ತೆ ರಾಜ್ಯದಲ್ಲಿ ತನ್ನ ಪಾರುಪತ್ಯ ಸಾಧಿಸ್ತಿದೆ. ನಿನ್ನೆ ಬೆಳಗ್ಗೆವರೆಗೂ ಒಟ್ಟು 47 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಸಂಜೆಯೊಳಗೆ ಮತ್ತಷ್ಟು ಕೇಸ್‌ಗಳು ಪತ್ತೆಯಾಗಿವೆ.
ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್ನಿಂದ ಕೊಚ್ಚಿ ಅಬ್ದುಲ್ ರಹಿಮಾನ್ನ ಭೀಕರ ಹತ್ಯೆ
ಕ್ರೂರಿ ಕೊರೊನಾ ಶತಕ!
ರಾಜ್ಯದಲ್ಲಿ ಕೊರೊನಾ ಸಕ್ರೀಯ ಕೇಸ್‌ಗಳು 100ಕ್ಕೆ ಏರಿಕೆಯಾಗಿ ಶತಕ ಸಿಡಿಸಿದೆ. ಕಳೆದ 24 ಗಂಟೆಯಲ್ಲಿ ಸುಮಾರು 36 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಅದೇ ಕಳೆದ 24 ಗಂಟೆಯಲ್ಲಿ 16 ಜನ ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನೂ ಕಳೆದ 24 ಗಂಟೆಯಲ್ಲಿ 381 ಮಂದಿಗೆ ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಿದೆ.
ಕ್ರೋರಿ ಕ್ರಿಮಿ ಕಂಟಕ!
- ಕೊರೊನಾ ಕೇಸ್ಗಳ ಪಾಸಿಟಿವ್ ರೇಟ್ ಶೇ. 9.44%
- ಮೊನ್ನೆ ಹೋಲಿಕೆ ಮಾಡಿದ್ರೆ ನಿನ್ನೆ ಕೊಂಚ ಇಳಿಕೆ
- ಮೊನ್ನೆ ಕೊರೊನಾ ಪಾಸಿಟಿವಿಟಿ ರೇಟ್ 19.37% ಇತ್ತು
- 100 ರ ಪೈಕಿ 96 ಮಂದಿ ಹೋಮ್ ಐಸೋಲೇಷನ್
- ನಾಲ್ಕು ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕರುನಾಡಲ್ಲಿ ಶತಕ ಸಿಡಿಸಿರೋ ಕೊರೊನಾ ಕ್ರಿಮಿ.. ದೇಶದಲ್ಲಿ ಸಾವಿರ ಗಡಿ ದಾಟಿದೆ. ಕೇರಳ, ಮಹಾರಾಷ್ಟ್ರ, ದೆಹಲಿ ಮತ್ತು ಗುಜರಾತ್ನಲ್ಲೂ ಮುನ್ನುಗ್ತಿದೆ. ಅಬ್ಬರಿಸ್ತಿರೋ ಕೊರೊನಾಗೆ ಕಡಿವಾಣ ಹಾಕಲು ಸರ್ಕಾರ ಸಕಲ ತಯಾರಿ ಮಾಡಿಕೊಳ್ತಿದೆ. ಹಿಂದಿನ ಪರಿಸ್ಥಿತಿ ಉದ್ಭವಿಸಿದ್ರೆ ಯುದ್ಧೋಪಾದಿಗೆ ಸಿದ್ಧವಾಗಲು ಆರೋಗ್ಯ ಇಲಾಖೆ ರೆಡಿಯಾಗಿದೆ.
ಇದನ್ನೂ ಓದಿ: RCB ಕ್ಯಾಪ್ಟನ್ ಜಿತೇಶ್ ಶರ್ಮಾ ಗೆಲುವಿನ ಕ್ರೆಡಿಟ್ ಯಾರಿಗೆ ನೀಡಿದರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ