ರಾಜ್ಯದಲ್ಲಿ 47 ಕೊರೊನಾ ಕೇಸ್.. ಪಾಸಿಟಿವಿಟಿ ರೇಟ್‌ ಹೆಚ್ಚಾದ್ರೆ ಎಲ್ಲರಿಗೂ ಟೆನ್ಷನ್; ಯಾಕೆ ಗೊತ್ತಾ?

author-image
admin
Updated On
ರಾಜ್ಯದಲ್ಲಿ 47 ಕೊರೊನಾ ಕೇಸ್.. ಪಾಸಿಟಿವಿಟಿ ರೇಟ್‌ ಹೆಚ್ಚಾದ್ರೆ ಎಲ್ಲರಿಗೂ ಟೆನ್ಷನ್; ಯಾಕೆ ಗೊತ್ತಾ?
Advertisment
  • ಕೆಮ್ಮು, ನೆಗಡಿ, ಜ್ವರ ಕಂಡು ಬಂದ್ರೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ
  • ಮಾಸ್ಕ್ ಕಡ್ಡಾಯ, ಲಾಕ್ ಡೌನ್‌ ಹೆಲ್ತ್ ಬುಲೆಟಿನ್ ಮೇಲೆ ನಿರ್ಧಾರ
  • ಬಿಬಿಎಂಪಿಯಲ್ಲಿ ಇಂದು ಕೊರೊನಾ ಹೈವೋಲ್ಟೇಜ್ ಮೀಟಿಂಗ್

ಬೆಂಗಳೂರು: ದೇಶದಲ್ಲಿ ಮತ್ತೆ ಕೊರೊನಾ ರೂಪಾಂತರಿ ವೈರಸ್ ಭೀತಿ ಸೃಷ್ಟಿಸಿದೆ. ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದುವರೆಗೂ 47 ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಸದ್ಯ ಕೊರೊನಾ ಸಕ್ರಿಯ ಪ್ರಕರಣ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. 46 ಮಂದಿ ಹೋಮ್ ಐಸೋಲೇಶನಲ್ಲಿದ್ದು, ಓರ್ವ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆ ಕಳೆದ 24 ಗಂಟೆಯಲ್ಲಿ 104 ಮಂದಿಯನ್ನು ಟೆಸ್ಟ್‌ಗೆ ಒಳಪಡಿಸಿದೆ. ಕಳೆದ 24 ಗಂಟೆಯಲ್ಲಿ 9 ಹೊಸ ಪ್ರಕರಣ ದಾಖಲಾಗಿದೆ.

BBMP ಹೈವೋಲ್ಟೇಜ್ ಮೀಟಿಂಗ್
ಬೆಂಗಳೂರು ನಗರದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಏರಿಕೆಯಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಬಿಬಿಎಂಪಿಯಲ್ಲಿ ಇಂದು ಹೈವೋಲ್ಟೇಜ್ ಮೀಟಿಂಗ್ ಕರೆಯಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ನೇತೃತ್ವದಲ್ಲಿ ಇಂದು ಮಹಾನಗರ ಪಾಲಿಕೆಯ 8 ವಲಯಗಳ ವಿಶೇಷ ಆಯುಕ್ತರು, ಆರೋಗ್ಯ ಅಧಿಕಾರಿಗಳ ಜೊತೆ ಕೊವಿಡ್‌ಗೆ ಸಂಬಂಧಪಟ್ಟಂತೆ ಮಹತ್ವದ ಸಭೆ ನಡೆಸಲಾಗುತ್ತಿದೆ.

ಆರೋಗ್ಯ ಇಲಾಖೆ, ಸಂಬಂಧಪಟ್ಟ ವಾರಿಯರ್ಸ್‌ಗಳು ಕೊರೊನಾ ನಿಯಂತ್ರಿಸಲು ಸಜ್ಜಾಗುತ್ತಿದ್ದಾರೆ. ಬಹುಮುಖ್ಯವಾಗಿ ಗರ್ಭಿಣಿಯರು, ಮಕ್ಕಳು ಎಚ್ಚರ ವಹಿಸುವುದು ಒಳ್ಳೆಯದು ಎಂದು ಸಾಂಕ್ರಾಮಿಕ ರೋಗ ತಜ್ಞರು ಸಲಹೆ ನೀಡಿದ್ದಾರೆ.

ಈ ಹೈವೋಲ್ಟೇಜ್ ಸಭೆಯಲ್ಲಿ ವೈರಸ್ ತಡೆಗಟ್ಟಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಪಾಲಿಕೆಯ ಆಸ್ಪತ್ರೆಗೆ ಬರುವ ಗರ್ಭಿಣಿಯರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಕೆಮ್ಮು, ನೆಗಡಿ, ಜ್ವರ ಕಂಡು ಬಂದ್ರೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ. ಟೆಸ್ಟಿಂಗ್, ಬೆಡ್ ಕಾದಿರಿಸುವಿಕೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೇರಿದಂತೆ ಸ್ಯಾರಿ ಕೇಸ್‌ಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾ ಕೇಸ್‌ ದಿಢೀರ್ ಹೆಚ್ಚಳ; ನಾಳೆ ಹೈವೋಲ್ಟೇಜ್ ಮೀಟಿಂಗ್! 

ಎಲ್ಲರ ಚಿತ್ತ ಬೆಂಗಳೂರು ಪಾಸಿಟಿವಿಟಿ ರೇಟ್‌ನತ್ತ
ರಾಜ್ಯದಲ್ಲಿ ವೈರಸ್ ಹಾವಳಿ ಹೆಚ್ಚುತ್ತಿದ್ದಂತೆ ಸದ್ಯ ಎಲ್ಲರ ಚಿತ್ತ ಕೊರೊನಾ ಪಾಸಿಟಿವಿಟಿ ರೇಟ್‌ನತ್ತ ನೆಟ್ಟಿದೆ. ಇಂದಿನಿಂದ ಆರೋಗ್ಯ ಇಲಾಖೆ ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ. ಬೆಂಗಳೂರು, ರಾಜ್ಯದಲ್ಲಿ 5 ಪರ್ಸೆಂಟ್‌ಗಿಂತ ಜಾಸ್ತಿ ಪಾಸಿಟಿವ್ ಕೇಸ್ ಆದ್ರೆ ಪರಿಸ್ಥಿತಿ ಗಂಭೀರ ಎಂದು ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ ರಿಲೀಸ್ ಮಾಡುವ ಹೆಲ್ತ್ ಬುಲೆಟಿನ್ ಎಲ್ಲರ ಕೇಂದ್ರ ಬಿಂದು ಆಗಿದೆ.

ಕೊವಿಡ್ 19ರ ಮೊದಲ ಎರಡು ಅಲೆಯಲ್ಲಿ ವಿಪರೀತ ಪಾಸಿಟಿವಿಟಿ ರೇಟ್ ದಾಖಲಾಗಿತ್ತು. ಎಲ್ಲರಿಗೂ ಮಾಸ್ಕ್ ಕಡ್ಡಾಯ, ಲಾಕ್ ಡೌನ್‌ಗಳು ಈ ಹೆಲ್ತ್ ಬುಲೆಟಿನ್ ಮೇಲೆ ನಿರ್ಧಾರವಾಗಿತ್ತು. ಹೆಲ್ತ್ ಬುಲೆಟಿನ್ ಆಧಾರದ ಮೇಲೆ ಆರೋಗ್ಯ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ.

publive-image

ಹೆಲ್ತ್ ಬುಲೆಟಿನ್ ಮೇಲೆ ಎಲ್ಲವೂ ನಿರ್ಧಾರ!
ಒಂದೊಮ್ಮೆ ಪಾಸಿಟಿವಿಟಿ ರೇಟ್ ಕಡಿಮೆ ಇದ್ರೆ ಯಾರು ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಜಾಸ್ತಿ ಆದ್ರೆ ಮಾತ್ರ ಟೆನ್ಷನ್‌ ಹೆಚ್ಚಾಗುತ್ತದೆ.

ಇಂದಿನ ಹೆಲ್ತ್‌ ಬುಲೆಟಿನ್ ಬಿಡುಗಡೆಯಾದ ಬಳಿಕ ಪಾಸಿಟಿವಿಟಿ ರೇಟ್ ನೋಡಿ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಮತ್ತೊಮ್ಮೆ ಸಭೆ ನಡೆಸಲಿದೆ. ಈ ಸಭೆಯಲ್ಲಿ ಸದ್ಯದ ರೂಪಾಂತರಿ ವೈರಸ್ ಮಾರಣಾಂತಿಕನಾ? ಇದರ ತಡೆಗೆ ಏನು ಕಠಿಣ ಕ್ರಮ ಕೈಗೊಳ್ಳಬೇಕು? ಮಾಸ್ಕ್ ಕಡ್ಡಾಯ ಮಾಡಬೇಕಾ? ಕೆಲವೊಂದು ಜನ ದಟ್ಟಣೆ ಜಾಗಕ್ಕೆ ನಿರ್ಬಂಧ ಹೇರಬೇಕಾ? ಈ ಎಲ್ಲಾ ವಿಚಾರದ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment