/newsfirstlive-kannada/media/post_attachments/wp-content/uploads/2024/04/CORONA.jpg)
ಒಂದು ಕಾಲದಲ್ಲಿ ಕೊರೊನಾ ಇಡೀ ಜಗತ್ತನ್ನೇ ನಿದ್ದೆಗೆಡಿಸಿತ್ತು. ಈಗಲೂ ಅದರ ರೂಪಾಂತರ ತಳಿ ಜನರನ್ನು ಆಗಾಗ ಬೆಚ್ಚಿ ಬೀಳಿಸುತ್ತಿದೆ. ಅಚ್ಚರಿಯ ವಿಚಾರ ಏನೆಂದರೆ ಡಚ್ ಮೂಲದ ವ್ಯಕ್ತಿಯೊಬ್ಬರಲ್ಲಿ ಬರೋಬ್ಬರಿ 613 ದಿನಗಳ ಕಾಲ ಒಕ್ಕರಿಸಿಕೊಂಡಿತ್ತು. ಸುಮಾರು ಎರಡು ವರ್ಷಗಳ ಕಾಲ ಕಾಡಿದ ಕೊರೊನಾ ಕೊನೆಗೂ ಆ ವ್ಯಕ್ತಿಯನ್ನು ಬಲಿ ಪಡೆದುಕೊಂಡಿದೆ.
ಇದನ್ನೂ ಓದಿ:INSPIRING: ಹಳಿ ತಪ್ಪಿದ್ದ SRHಗೆ ಹೊಸ ದಾರಿ ತೋರಿಸಿದ ದಂಡನಾಯಕ, ಕಮ್ಮಿನ್ಸ್ ಯಶಸ್ಸಿನ ರೋಚಕ ಸ್ಟೋರಿ..!
Amsterdam ವಿವಿಯ ಮಡಿಕಲ್ ಸೆಂಟರ್ ನಡೆಸಿದ ಅಧ್ಯಯನದಿಂದ ಈ ಸತ್ಯ ಗೊತ್ತಾಗಿದೆ. 2022ರ ಸಂದರ್ಭದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕೊರೊನಾ ಸೋಂಕು ತಗುಲಿದ ನಂತರ ಅವರ ಇಮ್ಯುನಿಟಿ ಪವರ್ ಕಮ್ಮಿ ಆಗುತ್ತ ಹೋಗಿದೆ ಎಂದು TIME ವರದಿ ಮಾಡಿದೆ. 613 ದಿನಗಳ ಕಾಲ ಕೊರೊನಾ ವೈರಸ್ 72 ವರ್ಷದ ವ್ಯಕ್ತಿಯೊಬ್ಬರ ದೇಹದಲ್ಲಿದ್ದ ಬಗ್ಗೆ ಸಂಶೋಧಕರು, ಮುಂದಿನ ವಾರ ಬಾರ್ಸಿಲೋನಾದಲ್ಲಿ ನಡೆಯಲಿರುವ ವೈದ್ಯಕೀಯ ಶೃಂಗಸಭೆಯಲ್ಲಿ ಮಂಡಿಸಲಿದ್ದಾರೆ.
ಇದನ್ನೂ ಓದಿ:ಮುದ್ದಾದ ಬಲೆ ಹೆಣೆದು ಕೊನೆಯ ಭೇಟಿಗೆ ಕರೆದ; ಇಬ್ಬರ ಜೀವ ತೆಗೆದ ‘ಆ ಹತ್ತು ನಿಮಿಷ’..!
ವರದಿಗಳ ಪ್ರಕಾರ, ಅವರ ದೇಹದಲ್ಲಿ ಕೊರೊನಾ ಬರೋಬ್ಬರಿ 50 ಬಾರಿ ರೂಪಾಂತರಗೊಂಡಿದೆ. ವ್ಯಕ್ತಿ ಸಾಯುವ ಕಾಲದಲ್ಲಿ ಅಲ್ಟ್ರಾ-ಮ್ಯುಟೇಟೆಡ್ (ultra-mutated) ಆಗಿ ರೂಪಾಂತರಗೊಂಡಿದೆ. 20 ತಿಂಗಳ ಕಾಲ ವ್ಯಕ್ತಿಯ ದೇಹದಲ್ಲಿ ಸೋಂಕು ಇತ್ತು. ಇದೇ ಅತಿ ಹೆಚ್ಚು ದಿನಗಳ ಕಾಲವಿದ್ದ ಕೊರೊನಾ ಸೋಂಕಾಗಿದೆ. ಇನ್ನು ಇವರಿಗೆ ಓಮಿಕ್ರಾನ್ ರೂಪಾಂತರಿಗೆ ತುತ್ತಾಗುವ ಮೊದಲು ಲಸಿಕೆಗಳನ್ನು ನೀಡಲಾಗಿತ್ತು. ಹೀಗಿದ್ದೂ ರೋಗ ನಿರೋಧಕ ಶಕ್ತಿ ಹೆಚ್ಚಲಿಲ್ಲ. ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ವೈರಸ್ ಹಾಳು ಮಾಡಿಬಿಟ್ಟಿತ್ತು ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಬ್ರಿಟಿಷ್ ವ್ಯಕ್ತಿಯಲ್ಲಿ 505 ದಿನಗಳ ಕಾಣಿಸಿಕೊಂಡಿತ್ತು, ಅವರೂ ಕೂಡ ಸಾವನ್ನಪ್ಪಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ