newsfirstkannada.com

ಜಸ್ಟೀಸ್ ಫಾರ್ ನೇಹಾ.. ಹುಬ್ಬಳ್ಳಿಯಲ್ಲಿ 11 ಬಾರಿ ಚಾಕು ಇರಿದವನ ಗಲ್ಲಿಗೇರಿಸಲು ಬಿಗಿ ಪಟ್ಟು

Share :

Published April 19, 2024 at 4:09pm

Update April 19, 2024 at 4:14pm

    ದಲಿತ ವಿಮೋಚನಾ ಸಮಿತಿಯಿಂದ ತಮಟೆ ಬಾರಿಸುತ್ತಾ ವಿದ್ಯಾರ್ಥಿಗಳ ಮೆರವಣಿಗೆ

    ಹುಬ್ಬಳ್ಳಿಯಲ್ಲಿ ಕಾರ್ಪೊರೇಟರ್ ಪುತ್ರಿ ನೇಹಾ ಕೊಲೆ ಖಂಡಿಸಿ ಎಬಿವಿಪಿ ಪ್ರತಿಭಟನೆ

    ಕಾಲೇಜು ಆವರಣಕ್ಕೆ ಬಂದು ಆಕ್ರೋಶ ಹೊರಹಾಕಿದ ಕಾಲೇಜು ಸ್ಟೂಡೆಂಟ್ಸ್

ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಕ್ಯಾಂಪಸ್​​ನಲ್ಲಿ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾಳನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಫಯಾಜ್​ನನ್ನು (23) ಬಂಧಿಸಿದ್ದಾರೆ.

ಇದನ್ನೂ ಓದಿ: 11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ

ಇದೀಗ ನೇಹಾ ಕೊಲೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಎಬಿವಿಪಿ ಕಾರ್ಯಕರ್ತರು ನೇಹಾ ಹತ್ಯೆ ಮಾಡಿದ ಆರೋಪಿ ಫಯಾಜ್‌‌ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ತಮ್ಮ ಪ್ರತಿಭಟನೆ ಮುಟ್ಟಲೆಂದು ‘ಜಸ್ಟೀಸ್ ಫಾರ್ ನೇಹಾ’ ಎಂದು ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದಲ್ಲದೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ಕಾಲೇಜು ಆವರಣದಲ್ಲಿ ಜಮಾಯಿಸಿಕೊಂಡಿದ್ದಾರೆ. ‘ಜಸ್ಟೀಸ್ ಫಾರ್ ನೇಹಾ’ ಎಂದು ಕೂಗುತ್ತ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿತ್ತ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ನೇಹಾಳನ್ನು ಹತ್ಯೆ ಮಾಡಿರುವ ಫಯಾಜ್‌‌ನನ್ನ ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿದ್ದಾರೆ.

ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರ ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣಗೊಂಡಿತ್ತು. ಪ್ರತಿಭಟನಾ ವಿದ್ಯಾರ್ಥಿಗಳು ಸೇರಿ ಹುಬ್ಬಳ್ಳಿ ಧಾರವಾಡ ರಸ್ತೆ ಬಂದ್ ಮಾಡಿಸುತ್ತಿದ್ದಾರೆ. ಪೊಲೀಸರು ಮನವಿ ಮಾಡಿಕೊಂಡರು ಪ್ರತಿಭಟನಾಕಾರರು ಯಾವುದಕ್ಕೆ ಸ್ಪಂದಿಸುತ್ತಿಲ್ಲ. ದಲಿತ ವಿಮೋಚನಾ ಸಮಿತಿಯಿಂದ ತಮಟೆ ಬಾರಿಸುತ್ತಾ ಮೂಲಕ ‘ಜಸ್ಟೀಸ್ ಫಾರ್ ನೇಹಾ’ ಎಂದು ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್​​ರನ್ನು​​ ಕೊಂದ ಆರೋಪಿ ಯಾರು?

ಸದ್ಯ ಕುಟುಂಬಸ್ಥರು, ವಿದ್ಯಾರ್ಥಿಗಳು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಪದ್ಧತಿಯಂತೆ ನೇಹಾ ಹಿರೇಮಠ ಅಂತ್ಯಕ್ರಿಯೆ ನೇರವೇರಿದೆ ನೇರವೇರಿದೆ. ಇದೇ ವೇಳೆ ಮೃತ ನೇಹಾಳನ್ನು ನೆನೆದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಜೊತೆಗೆ ಅವರು ಕೂಡ ಆರೋಪಿಯನ್ನು ಗಲ್ಲಿಗೇರಿಸುವಂತೆ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.

ಬೆಳಗಾವಿಯಲ್ಲಿ ಬಂದ್‌ಗೆ ಕರೆ
ನೇಹಾ ಹೀರೆಮಠ್ ಕೊಲೆ ಖಂಡಿಸಿ ಆರೋಪಿಯ ಊರು ಮುನವಳ್ಳಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬಂದ್‌ಗೆ ಬಿಜೆಪಿ ಕರೆ ನೀಡಿದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ಮುನವಳ್ಳಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಮುನವಳ್ಳಿಯ ಬಿಜೆಪಿ ಮುಖಂಡ ಮಲ್ಲೇಶ ಸುಳೇಭಾವಿಯವರು ಮುನವಳ್ಳಿ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ ಕೋರಿದ್ದಾರೆ. ಬೀದಿ ಬೀದಿಗಳಲ್ಲಿ ತಿರುಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಮನವಿ ಮಾಡಲಾಗಿದೆ. ಬಿಜೆಪಿ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟೀಸ್ ಫಾರ್ ನೇಹಾ.. ಹುಬ್ಬಳ್ಳಿಯಲ್ಲಿ 11 ಬಾರಿ ಚಾಕು ಇರಿದವನ ಗಲ್ಲಿಗೇರಿಸಲು ಬಿಗಿ ಪಟ್ಟು

https://newsfirstlive.com/wp-content/uploads/2024/04/hbl-death1.jpg

Load More