newsfirstkannada.com

IPLನಲ್ಲಿ ‘ದುಬಾರಿ’ಗಳ ಚರ್ಚೆ; ಕೋಟಿ ವೀರರ ಮೇಲೆ ನಿರೀಕ್ಷೆಯ ಭಾರ..!

Share :

Published March 20, 2024 at 10:48am

  ಸೀಸನ್​-17ರ ಐಪಿಎಲ್​​ಗೆ ಕೌಂಟ್​ಡೌನ್​

  ಕಾಸ್ಟ್ಲಿ ಪ್ಲೇಯರ್ಸ್​ ಆಗ್ತಾರಾ ಮ್ಯಾಚ್ ವಿನ್ನರ್ಸ್?

  ಯಾರಿಗೆ ದುಬಾರಿ ಆಗ್ತಾರೆ ಮಿಚೆಲ್ ಸ್ಟಾರ್ಕ್​..?

ಐಪಿಎಲ್​​​​​​​​​​​​​​​​​​​​​​​​ನ ಫೀವರ್ ಶುರುವಾಗಿದೆ. ಇನ್ನೇನಿದ್ರು ಅಖಾಡಕ್ಕಿಳಿದು ಹೋರಾಟ ನಡೆಸೋದೊಂದೇ ಬಾಕಿ. ಅಖಾಡದಲ್ಲಿ ಎಲ್ಲರ ಗಮನ ಸೆಳೆದಿರೋದು ಮಾತ್ರ, ಈ ನಾಲ್ವರು.

ಜಸ್ಟ್​ 2 ದಿನಗಳು. ಬಿಗ್ಗೆಸ್ಟ್​ ಕ್ರಿಕೆಟ್​ ಲೀಗ್​ನ ಕಿಕ್ ಸ್ಟಾರ್ಟ್​ ಆಗಲು ಜಸ್ಟ್ 2 ದಿನಗಳಷ್ಟೇ ಬಾಕಿಯಿದೆ. ಮೋಸ್ಟ್ ಫೇವರಿಟ್​ ಪ್ಲೇಯರ್​​​ಗಳ ಆಟ ಕಣ್ತುಂಬಿಕೊಳ್ಳಲು, ತಮ್ಮ ನೆಚ್ಚಿನ ತಂಡದ ಪ್ರದರ್ಶನ ನೋಡಲು ಫ್ಯಾನ್ಸ್​ ಕಾತರದಿಂದ ಕಾಯ್ತಿದ್ದಾರೆ. ಆದ್ರೆ, ಇವ್ರೆಲ್ಲಕ್ಕಿಂತ ಮಿಗಿಲಾಗಿ ಎಲ್ಲರ ಕಣ್ಣಿರೋದು ಮಾತ್ರ. ಈ ಕಾಸ್ಟ್ಲಿ ಪ್ಲೇಯರ್ಸ್​ ಮೇಲೆ.

ಐಪಿಎಲ್ ಇತಿಹಾಸದಲ್ಲೇ ಮೋಸ್ಟ್ ಕಾಸ್ಟ್ಲಿ ಪ್ಲೇಯರ್. ಬರೋಬ್ಬರಿ 24.75 ಕೋಟಿ ಆಸಿಸ್​​ನ ಮಿಚೆಲ್ ಸ್ಟಾರ್ಕ್ ಮೇಲೆ ಕೆಕೆಆರ್ ಸುರಿದಿದೆ. ಫಸ್ಟ್ ಟೈಮ್​​​​​​ ಆ್ಯಕ್ಷನ್​ನಲ್ಲಿ 2 ಕೋಟಿ ಗಳಿಸಿದ್ದ ಸ್ಟಾರ್ಕ್​, ಈಗ ಬರೋಬ್ಬರಿ 12ಕ್ಕೂ ಹೆಚ್ಚು ಮೊತ್ತ ಜೇಬಿಗಿಳಿಸಿದ್ದಾರೆ. ಆದ್ರೀಗ ಈ ಟಿ20 ಸ್ಪೆಷಲಿಸ್ಟ್ ಎದುರಾಳಿಗೆ ಸ್ಟ್ರೋಕ್ ನೀಡ್ತಾರಾ? ಅಥವಾ ತಂಡಕ್ಕೆ ದುಬಾರಿ ಆಗ್ತಾರಾ ಎಂಬ ಅನುಮಾನ ಇದ್ದೇ ಇದೆ.

ಕಮಿನ್ಸ್​ ನಾಯಕತ್ವದಲ್ಲಿ ಸನ್​ ರೈಸ್ ಆಗುತ್ತಾ​?
ಪ್ಯಾಟ್ ಕಮಿನ್ಸ್, ಈತನಿಗೆ ಸನ್ ರೈಸರ್ಸ್ ಸುರಿಸಿದ್ದು ಬರೋಬ್ಬರಿ 20.50 ಕೋಟಿ. ಸದ್ಯ ನಾಯಕತ್ವದ ಪಟ್ಟ ಕಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್, ಏಕದಿನ ವಿಶ್ವಕಪ್​ ಗೆದ್ದ ಪ್ಯಾಟ್ ಕಮಿನ್ಸ್​ ಮೇಲೆ ನಿರೀಕ್ಷೆಗಳ ಭಾರವೇ ಇದೆ. ಪ್ರಮುಖವಾಗಿ ಪಾತಳಕ್ಕೆ ಕುಸಿದಿರೋ ಸನ್​​ ರೈಸರ್ಸ್​ ತಂಡಕ್ಕೆ ಯಾವ ರೀತಿ ಮುನ್ನಡೆಸ್ತಾರೆ ಎಂಬ ಕುತೂಹಲ ಫ್ಯಾನ್ಸ್​ಗಿದೆ.

ಪಂಜಾಬ್ ಕಿಂಗ್ಸ್​ನ ಕೋಟಿ ವೀರ ಸ್ಯಾಮ್​​​​​​​​​​​​​​​​ ಕರನ್
ಇಂಗ್ಲೆಂಡ್​ನ ಆಲ್​ರೌಂಡರ್ ಸ್ಯಾಮ್​ ಕರನ್​ಗೆ, 18.50 ಕೋಟಿ ನೀಡಿದ್ದ ಪಂಜಾಬ್ ಕಿಂಗ್ಸ್ ಈ ವರ್ಷ ರಿಟೈನ್ ಮಾಡಿಕೊಂಡಿದೆ. ಕಳೆದ ಸೀಸನ್​​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಯಂಗ್​​ ಆಲ್​ರೌಂಡರ್​ ಸ್ಯಾಮ್, ಈ ಸಲ ಪಂಜಾಬ್​ ಕಿಂಗ್ಸ್​ ಪಾಲಿನ ಮ್ಯಾಚ್ ವಿನ್ನರ್​ ಆಗಬೇಕಿದೆ.

ಕ್ಯಾಮಿಯೋ ರೋಲ್ ಪ್ಲೇ ಮಾಡ್ತಾರಾ ಕೆಮರೂನ್..?
ಮುಂಬೈ ಇಂಡಿಯನ್ಸ್​ನಿಂದ ಕೆಮರೂನ್​​ ಗ್ರೀನ್​​ನ ಬರೋಬ್ಬರಿ 17.50 ಕೋಟಿ ನೀಡಿ ಆರ್​ಸಿಬಿ ಟ್ರೇಡ್ ಮಾಡಿದೆ. ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಈ ಕೆಮರೂನ್ ಗ್ರೀನ್, ಆರ್​ಸಿಬಿ ಪರ ಕ್ಯಾಮಿಯೋ ರೋಲ್​ ಪ್ಲೇ ಮಾಡಬೇಕಿದೆ. ಅಕಸ್ಮಾತ್ ಅಬ್ಬರದಾಟ ನಡೆಸಲಿಲ್ಲ ಅಂದ್ರೆ ಆರ್​​ಸಿಬಿ ಪಾಲಿಗೆ ಮತ್ತೊಂದು ಫ್ಲಾಫ್ ಸೀಸನ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಕೋಟಿ ಕೋಟಿ ಬಾಚಿ ದುಬಾರಿ ಪ್ಲೇಯರ್​ಗಳಾಗಿರುವ ಇವರು, ಕಾಸಿಗೆ ತಕ್ಕ ಕಜ್ಜಾಯದ ಆಟವಾಡ್ತಾರಾ? ಇಲ್ಲ ದುಬಾರಿ ವೀರರು ದುಬಾರಿಯೇ ಅನ್ನೋ ಟ್ಯಾಗ್​ ಲೈನ್​​ಗೆ ಸ್ಟಿಕ್ ಆಗ್ತಾರಾ ಅನ್ನೋದಕ್ಕೆ ಪ್ರದರ್ಶನವೇ ಉತ್ತರವಾಗಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPLನಲ್ಲಿ ‘ದುಬಾರಿ’ಗಳ ಚರ್ಚೆ; ಕೋಟಿ ವೀರರ ಮೇಲೆ ನಿರೀಕ್ಷೆಯ ಭಾರ..!

https://newsfirstlive.com/wp-content/uploads/2023/11/pat-cummins.jpg

Load More