Advertisment

ವರ್ಲ್ಡ್ ಹಿಂದೂ ಎಕನಾಮಿಕ್ ಫೋರಂ 2024 ಅಧಿವೇಶನಕ್ಕೆ ಕ್ಷಣಗಣನೆ; ಈ ಬಾರಿಯ WHEF ವಿಶೇಷ ಏನು?

author-image
Gopal Kulkarni
Updated On
ವರ್ಲ್ಡ್ ಹಿಂದೂ ಎಕನಾಮಿಕ್ ಫೋರಂ 2024 ಅಧಿವೇಶನಕ್ಕೆ ಕ್ಷಣಗಣನೆ; ಈ ಬಾರಿಯ WHEF ವಿಶೇಷ ಏನು?
Advertisment
  • ವರ್ಲ್ಡ್ ಹಿಂದೂ ಎಕನಾಮಿಕ್ ಫೋರಂ 2024 ದಿನಗಣನೆ
  • ಮುಂಬೈನಲ್ಲಿ ಹಿಂದೂ ಉದ್ಯಮಿಗಳ ಬೃಹತ್ ಅಧಿವೇಶನ
  • ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ WHEF ಅಧಿವೇಶನ

ವಿಶ್ವದ ಹಿಂದು ಉದ್ಯಮಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ವರ್ಲ್ಡ್ ಹಿಂದೂ ಎಕನಾಮಿಕ್ ಫೋರಂ (WHEF 2024) ಅಧಿವೇಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

Advertisment

publive-image

2024ರ ಡಿಸೆಂಬರ್ 13 ರಿಂದ 15 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ದೇಶದ ಆರ್ಥಿಕ ಬೆಳವಣಿಗೆ, ಉದ್ಯಮ ವ್ಯವಹಾರ, ಹಾಗೂ ಬಂಡವಾಳ ಹೂಡಿಕೆಗಳ ಕುರಿತಾದ ಮಹತ್ವದ ಚರ್ಚೆಗಳು ನಡೆಯಲಿವೆ. ಅಧಿವೇಶನದ ಉದ್ದೇಶವನ್ನು ವರ್ಲ್ಡ್ ಹಿಂದೂ ಎಕಾನಮಿಕ್ ಫೋರಂನ ಸಂಸ್ಥಾಪಕರಾದ ಶ್ರೀ ಸ್ವಾಮಿ ವಿದ್ಯಾನಂದ ಜಿ ಅವರು ವಿವರಿಸಿದ್ದಾರೆ

publive-image

ವಿಶ್ವ ಹಿಂದೂ ಎಕನಾಮಿಕ್ ಫೋರಂ 2024 ಹಲವಾರು ಉದ್ದೇಶಗಳಿವೆ. ಅದರಲ್ಲಿ ಮೊದಲನೇಯದಾಗಿ ಭಾರತವನ್ನು ವಿಶ್ವ ಮಟ್ಟದಲ್ಲಿ ಒಳ್ಳೆಯ ಆರ್ಥಿಕತೆ ಹೊಂದಿದ ದೇಶವನ್ನಾಗಿ ಮಾಡುವುದು. ಇದು ಕೇವಲ ಸರ್ಕಾರ ಮತ್ತು ಸಂಸ್ಥೆಗಳಿಂದ ಮಾತ್ರ ಆಗುವಂತದಲ್ಲ, ಇದರಲ್ಲಿ ಉದ್ಯಮಿಗಳು, ವ್ಯಾಪಾರಸ್ಥರು, ಅಧಿಕಾರಿಗಳು ಕೂಡ ಶಾಮೀಲಾಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:Shivanna; ತಿರುಪತಿ ತಿಮ್ಮಪ್ಪಗೆ ಮುಡಿಕೊಟ್ಟ ಶಿವರಾಜ್​ ಕುಮಾರ್ ದಂಪತಿ

Advertisment

ಅಧಿವೇಶನದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಮಹಾಂತ ಯೋಗಿ ಆದಿತ್ಯನಾಥ್‌, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಹಾಗೂ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಭಾಗವಹಿಸಲಿದ್ದಾರೆ.

ವರ್ಲ್ಡ್ ಹಿಂದೂ ಎಕಾನಮಿಕ್ ಫೋರಂ ನಲ್ಲಿ ಹಿಂದೂ ಎಂಬ ಶಬ್ದದ ಅಗತ್ಯ ಏನು ಎಂಬ ಪ್ರಶ್ನೆಗೆ ಸ್ವಾಮೀಜಿಯವರು ಹಿಂದೂ ಎಂಬುದು ನಮ್ಮೆಲ್ಲರ ಐಡೆಂಟಿಟಿ. ನಮ್ಮ ಅಸ್ಮಿತೆ. ಅದನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಇಡೀ ಜಗತ್ತನ್ನೇ ಹಿಂದು ಎಂಬ ಶಬ್ದ ಮುಂದೆ ಆಳಲಿದೆ ಎಂದು ಹೇಳಿದರು.

publive-image

ಕರ್ನಾಟಕದಿಂದ 60ಕ್ಕೂ ಹೆಚ್ಚು ಉದ್ಯಮಿಗಳು ಆಗಮಿಸುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅಲ್ಲದೆ ಹಿಂದೂ ಎಕಾನಮಿಕ್ ಫೋರಂ ಅಡಿಯಲ್ಲಿ ರಾಜ್ಯದ ಸುಮಾರು 18 ಜಿಲ್ಲೆಗಳಲ್ಲಿ 18 ಕ್ಕೂ ಹೆಚ್ಚು ಸೌಹಾರ್ದ ಸೊಸೈಟಿಗಳನ್ನು ಪ್ರಾರಂಭಿಸುತ್ತಿರುವುದಾಗಿ ಹಿಂದೂ ಎಕಾನಮಿಕ್ ಫೋರಂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಟಿ. ಆರ್ ಅವರು ಹೇಳಿದರು.  ಈ ಅಧಿವೇಶನದಲ್ಲಿ ಭಾಗವಹಿಸಲು 95912 56666 ಈ ನಂಬರಿಗೆ ವಾಟ್ಸಪ್ ಸಂದೇಶ ಕಳುಹಿಸಬಹುದಾಗಿದೆ.

Advertisment

ಇದನ್ನೂ ಓದಿ:ಪವಾಡ ಎಂಬಂತೆ ಕ್ಯಾನ್ಸರ್ ಗೆದ್ದ ಮಗಳು.. 1500 Km ದೂರದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ ತಂದೆ

ಅಧಿವೇಶನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ದೇಶದ ಪ್ರಮುಖ ಕೈಗಾರಿಕಾ ಮುಖ್ಯಸ್ಥರು, ಆರ್ಥಿಕ ತಜ್ಞರು, ಬ್ಯಾಂಕರ್‌ಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹೀಗಾಗಿ ಅಧಿವೇಶನದ ಕಡೆಗೆ ಈಗ ಎಲ್ಲರ ಗಮನ ಕೇಂದ್ರೀಕೃತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment