newsfirstkannada.com

ಎಲ್ಲೆಲ್ಲೂ ರಾಮನದ್ದೇ ಜಪ.. ರಾಮಲಲ್ಲಾ ಪ್ರತಿಷ್ಠಾಪನೆಗೆ ಕೈ ಜೋಡಿಸಿದ ಮುಸ್ಲಿಮರು!

Share :

Published January 21, 2024 at 5:52am

    ಮಂದಿರ ಸಂಭ್ರಮಕ್ಕೆ ಕೈ ಜೋಡಿಸಿದ POK ಮುಸ್ಲಿಮರು

    ನಾಳೆ ಗರ್ಭಗುಡಿಯಲ್ಲಿ ರಾಮ ಲಲ್ಲಾ ವಿರಾಜಮಾನ

    ವಿದ್ಯುತ್ ಅಲಂಕಾರಗಳಿಂದ ರಾಮನೂರು ಝಗಮಗ!

ಎಲ್ಲೆಲ್ಲೂ ರಾಮಜಪ. ದಶ ದಿಕ್ಕುಗಳಲ್ಲೂ ಕೇಳಿ ಬರ್ತಿರೋದು ಜೈ ಶ್ರೀರಾಮ. ನಾಳೆ ರಾಮ ಲಲ್ಲಾನ ಪ್ರಾಣಪ್ರತಿಷ್ಠೆಯಾಗಲಿದ್ದು ಧಾರ್ಮಿಕ ವಿಧಿವಿಧಾನಗಳು ವೈಭವದಿಂದ ನೆರವೇರುತ್ತಿವೆ. ಈ ಹಿನ್ನೆಲೆ ರಾಮನೂರು ಅಯೋಧ್ಯೆಯಲ್ಲಿ ಅಕ್ಷರಶಃ ರಾಮರಾಜ್ಯ ನಿರ್ಮಾಣವಾಗಿದೆ.

ಶತಕೋಟಿಗೂ ಅಧಿಕ ಭಕ್ತರ ಆರಾಧ್ಯ ದೈವ ಶ್ರೀರಾಮ ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾಗಲು ಕೆಲವೇ ಗಂಟೆಗಳು ಬಾಕಿ. 5 ಶತಮಾನಗಳ ಕಾಲ ರಾಮ ಬರ್ತಾನೆ ಬಂದೇ ಬರ್ತಾನೆ ಅಂತ ಕಾಯ್ತಿದ್ದ ಶಬರಿಯಂತ ಭಕ್ತರ ಮನೋಭಿಲಾಷೆ ಸಾಕ್ಷಾತ್ಕಾರಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ. ಇಂದು ಸಂಜೆ ಆ ಸೂರ್ಯ ಕಣ್ಮರೆಯಾಗಿ ನಾಳೆ ಮುಂಜಾನೆ ಪ್ರತ್ಯಕ್ಷವಾಗುತ್ತಿದ್ದಂತೆ ಅದೇ ಸೂರ್ಯವಂಶದ ರಾಮನ ಜಪ ಶುರುವಾಗಲಿದೆ. ಹಿರಿಯ ಕಿರಿಯರೆನ್ನದೇ ಜಾತಿ ಬೇಧವಿಲ್ಲದೇ ಎಲ್ಲರೂ ರಾಮೋತ್ಸವದಲ್ಲಿ ಮಿಂದೇಳಲಿದ್ದಾರೆ. ಇಕ್​ಷ್ವಾಕು ವಂಶದ ರಘುಕುಲ ತಿಲಕ ಪ್ರಭು ರಾಮ, ಅಯೋಧ್ಯೆಯಲ್ಲಿ ಭಕ್ತರಿಗೆ ದರ್ಶನ ತೋರಲಿದ್ದಾನೆ.

ಮಂಗಳವಾರದಿಂದ ಭಕ್ತರಿಗೆ ಬಾಲರಾಮನ ದರ್ಶನ

ಅಯೋಧ್ಯೆಯಲ್ಲಿ ವಿರಾಜಮಾನನಾಗಲಿರುವ ಬಾಲರಾಮನ ಮೂರ್ತಿ ಭಕ್ತರು ಬಾಲ ರಾಮ ಮಂದಸ್ಮಿತನಾಗಿರುವುದನ್ನು ಕಂಡು ಪುಳಕಿತರಾಗಿದ್ದಾರೆ. ಇನ್ನು ನಾಳೆ ಅಂದ್ರೆ ಸೋಮವಾರ ಬಾಲರಾಮನಿಗೆ ಪ್ರಾಣತುಂಬುವ ಶಾಸ್ತ್ರ ನಡೆಯಲಿದೆ. ಇದರ ಪ್ರಯುಕ್ತ ಇಂದು ಮತ್ತು ನಾಳೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ. ಹೀಗಾಗಿ ಎರಡು ದಿನ ಶ್ರೀರಾಮನ ದರ್ಶನ ಇರುವುದಿಲ್ಲ. ಸೋಮವಾರ ಪ್ರಾಣಪ್ರತಿಷ್ಠೆ ಬಳಿಕ ಮಂಗಳವಾರದಿಂದ ಭಕ್ತರಿಗೆ ರಾಮಲಲ್ಲಾ ದರ್ಶನ ನೀಡಲಿದ್ದಾನೆ.

ವಿದ್ಯುತ್​ ದೀಪಗಳಿಂದ ಕಂಗೊಳಿಸ್ತಿದೆ ರಾಮನೂರು

ಸೋಮವಾರ ಪ್ರಾಣಪ್ರತಿಷ್ಠೆ ಹಿನ್ನೆಲೆ ಧಾರ್ಮಿಕ ವಿಧಿ ವಿಧಾನಗಳು ಭರದಿಂದ ಸಾಗಿವೆ. ಅದರಲ್ಲೂ ರಾಮನೂರಿನ ರಾಜವೈಭವ ಕಣ್ಮನ ಸೆಳೆಯುತ್ತಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದೇಗುಲವನ್ನು ಸಿಂಗರಿಸಲಾಗಿದೆ. ವಿವಿಧ ಬಗೆಯ ಹೂಗಳಿಂದ ಅಯೋಧ್ಯೆ ಝಗಮಗಿಸುತ್ತಿದ್ದು ಅಕ್ಷರಶಃ ರಾಮರಾಜ್ಯದ ಅನುಭೂತಿಯಾಗ್ತಿದೆ. ರಾಮಮಂದಿರವನ್ನ ಸಿಂಗರಿಸಲು ಬಗೆ ಬಗೆಯ ಪುಷ್ಪಗಳ ಪರಿವಾರ ಅಯೋಧ್ಯೆಯಲ್ಲಿ ಬೀಡುಬಿಟ್ಟಿದೆ. ರಾಮಮಂದಿರದ ಕಾರಿಡಾರ್​ನಲ್ಲಿ ವಿಧವಿಧದ ಹೂಗಳ ಚಿತ್ತಾರ ಬಿತ್ತರಗೊಂಡಿದ್ದು, ಹೂಗಳ ಸಿಂಗಾರದಿಂದ ಕಾರಿಡಾರ್​ ಕಂಗೊಳಿಸುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಸರಸ್ವತಿ ನದಿಯಿಂದ ಬಂದ ಪುಣ್ಯ ಜಲ

ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಂಭ್ರಮಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ಮುಸ್ಲಿಮರು ಕೈಜೋಡಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸರಸ್ವತಿ ನದಿಯಿಂದ ಪುಣ್ಯ ಜಲವನ್ನ ಅಯೋಧ್ಯೆಗೆ ತರಲು ಮುಸ್ಲಿಂ ಸಮುದಾಯ ಸಹಕರಿಸಿದೆ. ಒಟ್ಟಾರೆ ಸದ್ಯ ದೇಶಾದ್ಯಂತ ರಾಮೋತ್ಸವದ ಕಳೆಗಟ್ಟಿದೆ. ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದು ರಾಮನನ್ನು ಕಾಣಲು ಭಕ್ತರು ಕಾತರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ಲೆಲ್ಲೂ ರಾಮನದ್ದೇ ಜಪ.. ರಾಮಲಲ್ಲಾ ಪ್ರತಿಷ್ಠಾಪನೆಗೆ ಕೈ ಜೋಡಿಸಿದ ಮುಸ್ಲಿಮರು!

https://newsfirstlive.com/wp-content/uploads/2024/01/sumalatha-6.jpg

Load More