ಚನ್ನಪಟ್ಟಣದಲ್ಲಿ ಯಾರ್ ಗೆಲ್ತಾರೆ? ಯಾರು ಸೋಲ್ತಾರೆ? ಕಾಂಗ್ರೆಸ್, ಬಿಜೆಪಿ-ಜೆಡಿಎಸ್‌ ಲೆಕ್ಕಾಚಾರವೇನು?

author-image
admin
Updated On
ಚನ್ನಪಟ್ಟಣದಲ್ಲಿ ಯಾರ್ ಗೆಲ್ತಾರೆ? ಯಾರು ಸೋಲ್ತಾರೆ?  ಕಾಂಗ್ರೆಸ್, ಬಿಜೆಪಿ-ಜೆಡಿಎಸ್‌ ಲೆಕ್ಕಾಚಾರವೇನು?
Advertisment
  • ಚನ್ನಪಟ್ಟಣ ಚಕ್ರವ್ಯೂಹ ಭೇದಿಸೋದ್ಯಾರು? ಸೈನಿಕನಾ.. ಅಭಿಮನ್ಯುನಾ?
  • CP ಯೋಗೇಶ್ವರ್ ಎರಡು ಬಾರಿ ಸೋತಿರೋದ್ರಿಂದ ಸಿಂಪಥಿ ಲೆಕ್ಕಾಚಾರ
  • ಒಕ್ಕಲಿಗ ಮತಗಳು ಸಂಪೂರ್ಣ ಜೆಡಿಎಸ್ ಕಡೆ ಎನ್ನುತ್ತಿರುವ ದಳಪತಿಗಳು

ಕಾಂಗ್ರೆಸ್, ಜೆಡಿಎಸ್, ಬಿಜೆಪಿ. ಮೂರು ಪಕ್ಷಗಳಿಗೂ ನಾಳೆ ಮಹತ್ವದ ದಿನ. ನಾಳೆ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ರಿಸೆಲ್ಟ್​ ಅನೌನ್ಸ್​ ಆಗಲಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಚನ್ನಪಟ್ಟಣದ ಮತ ಯುದ್ಧದಲ್ಲಿ ಗೆಲ್ಲೋದು ಸೈನಿಕನಾ ಅಭಿಮನ್ಯುನಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ.

ಇದನ್ನೂ ಓದಿ: ಚನ್ನಪಟ್ಟಣ ಫಲಿತಾಂಶಕ್ಕೂ ಮೊದಲೇ ಶಾಸಕರಾದ್ರಾ ನಿಖಿಲ್ ಕುಮಾರಸ್ವಾಮಿ? ಸೆಲೆಬ್ರೇಷನ್‌ಗೆ ತಯಾರಿ! 

ಚನ್ನಪಟ್ಟಣ ಚಕ್ರವ್ಯೂಹ ಭೇದಿಸೋದ್ಯಾರು? ಸೈನಿಕನಾ.. ಅಭಿಮನ್ಯುನಾ?
ನಾಳೆ ಉಪ ಕದನದ ಫಲಿತಾಂಶ.. ಉಭಯ ಅಭ್ಯರ್ಥಿಗಳಿಗೂ ಢವಢವ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮುಗಿದಾಗಿದೆ. ಮತದಾರರ ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಿ ಆಗಿದೆ. ಇನ್ನೇನಿದ್ರು ಫಲಿತಾಂಶ ಹೊರಬೀಳೋದೊಂದೇ ಬಾಕಿ. ರಾತ್ರಿ ಕಳೆದು ಸೂರ್ಯ ಉದಯಿಸಿದ್ರೆ ಸಾಕು ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಚನ್ನಪಟ್ಟಣದ ಚಕ್ರವ್ಯೂಹ ಭೇದಿಸೋದು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.

publive-image

ಚನ್ನಪಟ್ಟಣಕ್ಕೆ ನಡೆದಿದ್ದು. ಉಪ ಚುನಾವಣೆಯಾದ್ರೂ, ಭಾರೀ ಸದ್ದು ಮಾಡಿತ್ತು. ಒಂದೆಡೆ ಡಿಕೆ ಬ್ರದರ್ಸ್​ಗೆ ಪ್ರತಿಷ್ಟೆಯ ಕದನವಾದ್ರೆ ಮತ್ತೊಂದೆಡೆ ದಳಪತಿಗಳಿಗೆ ಪಕ್ಷ ಅಳಿವು ಉಳಿವಿನ ಪ್ರಶ್ನೆ. ಹೀಗಾಗಿ ಉಭಯ ಪಕ್ಷಗಳೂ ಚನ್ನಪಟ್ಟಣವನ್ನು ಗೆಲ್ಲಲೇ ಬೇಕೆಂದು ಪಣತೊಟ್ಟು ಎದುರಾಳಿಗೆ ಮಣ್ಣು ಮುಕ್ಕಿಸಲು ಚಕ್ರವ್ಯೂಹವನ್ನೇ ರಚನೆ ಮಾಡಿದ್ದರು. ಸೈನಿಕನ ಪರ ಇಡೀ ಕಾಂಗ್ರೆಸ್​ ಸರ್ಕಾರವೇ ಅಖಾಡಕ್ಕಿದ್ರೆ ಅಭಿಮನ್ಯುವನ್ನ ಗೆಲ್ಲಿಸಲು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ರು. ಹೀಗಾಗಿ ಎರಡೂ ಪಕ್ಷದಲ್ಲಿ ಸೋಲು- ಗೆಲುವಿನ ಲೆಕ್ಕಾಚಾರ ಭರ್ಜರಿಯಾಗಿದೆ. ಕಾಂಗ್ರೆಸ್ ನಾಯಕರಂತೆ.. ಜೆಡಿಎಸ್​ ನಾಯಕರಲ್ಲೂ ಗೆಲುವಿನ ಲೆಕ್ಕಾಚಾರಗಳು ಬಹಳಷ್ಟಿದೆ.

publive-image

ಕಾಂಗ್ರೆಸ್​ ನಾಯಕರ ಲೆಕ್ಕಾಚಾರ
ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮತಗಳು ಕೈ ಹಿಡಿದಿದೆ
ಮಹಿಳೆಯರ ಮತದಾನ ಪ್ರಮಾಣ ಹೆಚ್ಚಳ ಹಿನ್ನಲೆ ಲಾಭ ನಿರೀಕ್ಷೆ
ಸಣ್ಣ ಪುಟ್ಟ ಸಮುದಾಯಗಳು ಯೋಗೇಶ್ವರ್ ಪರ ವಾಲಿವೆ
ಡಿ.ಕೆ.ಬ್ರದರ್ಸ್, ಸಿಪಿವೈ ವರ್ಚಸ್ಸಿಗೆ ಒಕ್ಕಲಿಗ ಮತಗಳು ಕೈ ಹಿಡಿದಿವೆ
ನಗರ ವ್ಯಾಪ್ತಿ ಜೊತೆಗೆ 5 ಜಿ.ಪಂ ಪೈಕಿ 2ರಲ್ಲಿ ಕಾಂಗ್ರೆಸ್ ಲೀಡ್ ವಿಶ್ವಾಸ
ಯೋಗೇಶ್ವರ್ ಎರಡು ಬಾರಿ ಸೋತಿರೋದ್ರಿಂದ ಸಿಂಪಥಿ ಲೆಕ್ಕಾಚಾರ
15ರಿಂದ 20 ಸಾವಿರ ಅಂತರದಲ್ಲಿ ಗೆಲ್ಲುತ್ತೇವೆ ಎಂಬ ಅಂದಾಜು

publive-image

ದಳಪತಿಗಳ ಲೆಕ್ಕಾಚಾರ ಏನು?
ಒಕ್ಕಲಿಗ ಮತಗಳು ಸಂಪೂರ್ಣ ಜೆಡಿಎಸ್ ಕಡೆ ಬಂದಿದೆ
ಅಲ್ಪಸಂಖ್ಯಾತ, ಹಿಂದುಳಿದ ಮತ ವಿಂಗಡಣೆಯಿಂದ ಲಾಭ
ಜಮೀರ್ ವಿವಾದಿತ ಹೇಳಿಕೆಯಿಂದ ಒಕ್ಕಲಿಗ ಮತ ಒನ್ ಸೈಡ್ ಆಗಿದೆ
ಟೌನ್ ಬಿಟ್ಟು ಗ್ರಾಮೀಣ ಭಾಗದಲ್ಲಿ ಹೆಚ್ಚು ಮತ ಕ್ರೊಡೀಕರಣ
ನಿಖಿಲ್ ಯುವಕ ಎಂಬ ಕಾರಣಕ್ಕೆ ಯುವಮತಗಳು JDSಗೆ ಬಂದಿವೆ
8 ರಿಂದ 10 ಸಾವಿರ ಅಂತರದಲ್ಲಿ ಗೆಲ್ಲುವ ವಿಶ್ವಾಸ ಜೆಡಿಎಸ್​ಗೆ ಇದೆ

publive-image

ನಾಮಫಲಕ ರೆಡಿ ಮಾಡಿಸಿದ ನಿಖಿಲ್​ ಅಭಿಮಾನಿಗಳು 
ನಾಳೆ ಫಲಿತಾಂಶ ಪ್ರಕಟವಾಗಲಿದೆ. ಆದರೆ ಅದಕ್ಕೂ ಮೊದಲೇ ನಿಖಿಲ್​ ಎಂಎಲ್​ಎ ಎಂಬ ನಾಮಫಲಕ ರೆಡಿಯಾಗಿದೆ. ಈ ಹಿಂದೆ ಮಂಡ್ಯ, ರಾಮನಗರದಲ್ಲಿ ಸೋತು‌ ಕಾರ್ಯಕರ್ತರಿಗೆ ನೋವು ಉಂಟಾಗಿತ್ತು. ಆದ್ರೆ ಈ ಬಾರಿ ತಮ್ಮ ಯುವ ನಾಯಕ ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ತಾರೆ ಎಂಬ ವಿಶ್ವಾಸದಲ್ಲಿ ಅಭಿಮಾನಿಗಳು ಇದ್ದಾರೆ. ಅದೇ ವಿಶ್ವಾಸದಲ್ಲಿ ಕೆಲ ಅಭಿಮಾನಿಗಳು ಶ್ರೀಯುತ ನಿಖಿಲ್ ಕುಮಾರಸ್ವಾಮಿ, ಶಾಸಕರು, ಚನ್ನಪಟ್ಟಣ ಎಂದು ಕಚೇರಿಗೆ ನಾಮಫಲಕವನ್ನು ರೆಡಿ ಮಾಡಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ್ದೇ ಟೆನ್ಷನ್‌; ಮತಎಣಿಕೆ ಹೇಗಿರುತ್ತೆ? ಬಂದೋಬಸ್ತ್‌ ಹೇಗಿದೆ ಗೊತ್ತಾ? 

ಮಂಡ್ಯದಲ್ಲೂ ಅಭಿಮಾನಿಗಳು ನಿಖಿಲ್​ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಶ್ರೀರಂಗಪಟ್ಟದಲ್ಲಿರುವ ಶಕ್ತಿ ದೇವತೆ ಆರತಿ ಉಕ್ಕಡದ ಅಹಲ್ಯದೇವಿಗೆ ಕಾರ್ಯಕರ್ತ ಪ್ರವೀಣ್​ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಮೈತ್ರಿ ಅಭ್ಯರ್ಥಿ ನಿಖಿಲ್​ ಗೆಲ್ಲಲಿ ಎಂದು ಮೇಕೆ ಬಲಿಕೊಟ್ಟು ಹರಕೆ ಹೊತ್ತಿದ್ದಾರೆ. ನಾಳೆ ಮತದಾರ ಬರೆದಿರುವ ನಿರ್ಧಾರ ಹೊರ ಬೀಳಲಿದ್ದು, ಚನ್ನಪಟ್ಟಣದ ಅಧಿಪತಿ ಯಾರಾಗ್ತಾರೆ ಅನ್ನೋ ಕುತೂಹಲ ಗರಿಗೆದರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment