/newsfirstlive-kannada/media/post_attachments/wp-content/uploads/2024/12/VEGETARIAN.jpg)
ಜಾಗತಿಕವಾಗಿ ಸಸ್ಯಾಹಾರ ಸೇವನೆಯ ಪದ್ಧತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಇದರ ನಡುವೆಯೇ ಜಗತ್ತಿನಲ್ಲಿ ಕೆಲವು ದೇಶಗಳಿವೆ ಅದರಲ್ಲಿ ಸಾಕಷ್ಟು ಪ್ರತಿಶತ ಜನಸಂಖ್ಯೆ ಇಂದಿಗೂ ಕೂಡ ಸಸ್ಯಾಹಾರವನ್ನು ತಮ್ಮ ಆಹಾರ ಪದ್ಧತಿಯನ್ನಾಗಿಟ್ಟುಕೊಂಡಿವೆ. ಒಂದು ಹವಾಮಾನ ಕಾರಣದಿಂದ ಇನ್ನೊಂದು ನೈತಿಕ ಕಾರಣದಿಂದ. ಇಂತಹ ಹತ್ತು ರಾಷ್ಟ್ರಗಳನ್ನು ಪಟ್ಟಿ ಮಾಡಲಾಗಿದ್ದು. ಆ ರಾಷ್ಟ್ರದಲ್ಲಿ ಕೆಲವೊಂದಿಷ್ಟು ಪ್ರತಿಶತ ಜನಸಂಖ್ಯೆ ಇಂದಿಗೂ ಸಸ್ಯಾಹಾರಕ್ಕೆನೆ ತಮ್ಮ ಆಹಾರದಲ್ಲಿ ಪ್ರಾದಾನ್ಯತೆ ನೀಡುತ್ತಾರೆ. ಹಾಗಿದ್ರೆ ಆ 10 ರಾಷ್ಟ್ರಗಳು ಯಾವುವು ಅಂತ ನೋಡುವುದಾದ್ರೆ.
/newsfirstlive-kannada/media/post_attachments/wp-content/uploads/2024/12/VEGETARIAN-1.jpg)
1. ಭಾರತ: ಸಸ್ಯಹಾರ ಸೇವನೆ ಅತಿಹೆಚ್ಚು ಇರೋದು ನಮ್ಮದೇ ದೇಶದಲ್ಲಿ. ಭಾರತದ ಒಟ್ಟು ಶೇಕಡಾ 38 ರಷ್ಟು ಜನಸಂಖ್ಯೆ ಸಸ್ಯಾಹಾರಿಗಳು ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಅತಿಹೆಚ್ಚು ಸಸ್ಯಾಹಾರಿಗಳು ಇರೋದು ಭಾರತದಲ್ಲಿಯೆ. ಸಸ್ಯಾಹಾರಿಗಳ ಸ್ವರ್ಗವೆಂದೆ ವಿದೇಶಿಗರು ಭಾರತವನ್ನು ಗುರುತಿಸುತ್ತಾರೆ.
2. ಇಸ್ರೇಲ್​: ಇಸ್ರೇಲ್​ ಕೂಡ ಅತಿಹೆಚ್ಚು ಸಸ್ಯಾಹಾರವನ್ನು ಸೇವಿಸುವ ಜನಸಂಖ್ಯೆಯನ್ನು ಹೊಂದಿದೆ. ಹವಾಮಾನ ಹಾಗೂ ನೈತಿಕ ದೃಷ್ಟಿಯಿಂದ ಇಲ್ಲಿ ಕೆಲವೊಂದಿಷ್ಟು ಪ್ರತಿಶತ ಜನರು ಸಸ್ಯಾಹಾರವನ್ನು ತಮ್ಮ ಆಹಾರವನ್ನಾಗಿ ಮಾಡಿಕೊಂಡಿದ್ದಾರೆ. ಇಸ್ರೇಲ್​ನ ರಾಜಧಾನಿ ಟೆಲ್​ ಅವೀವ್​ನ್ನ ವೆಗನ್ ಕ್ಯಾಪಿಟಲ್ ಅಂದ್ರೆ ವಿಶ್ವದ ಸಸ್ಯಾಹಾರದ ರಾಜಧಾನಿ ಅಂತಲೇ ಕರೆಯುತ್ತಾರೆ.ಇಸ್ರೇಲ್​ನಲ್ಲಿ ಶೇಕಡಾ 13 ರಷ್ಟು ಜನರು ಸಸ್ಯಾಹಾರಿಗಳಿದ್ದಾರೆ.
/newsfirstlive-kannada/media/post_attachments/wp-content/uploads/2024/12/VEGETARIAN-2.jpg)
3. ತೈವಾನ್​: ತೈವಾನ್​ಲ್ಲಿ ಬೌದ್ಧ ಧರ್ಮದ ಪ್ರಭಾವ ತುಂಬಾ ದೊಡ್ಡದಿದೆ. ಅದರ ಪರಿಣಾಮವಾಗಿ ಇಲ್ಲಿ ಸಸ್ಯಹಾರವು ಜನರ ಬದುಕಿನಲ್ಲಿ ಬೆರೆತಿದೆ. ಈ ದೇಶದ ಶೇಕಡಾ 12 ರಷ್ಟು ಜನರು ಸಸ್ಯಾಹಾರಿಗಳು ಎಂದು ಹೇಳಲಾಗುತ್ತದೆ. ಈ ದೇಶದ ಎಲ್ಲ ನಗರಗಳಲ್ಲಿಯ ಹೋಟೆಲ್​ಗಳಲ್ಲಿಯೂ ಸಸ್ಯಹಾರ ಊಟ ಸಿಗುತ್ತದೆ.
4. ಇಟಲಿ: ಇಟಲಿಯು ಪಾಕಶಾಲೆಯ ಬಹುದೊಡ್ಡ ಪರಂಪರೆಯನ್ನು ಕಂಡಿದೆ. ಇಲ್ಲಿ ದಿನದಿಂದ ದಿನಕ್ಕೆ ಸಸ್ಯಾಹಾರಿಗಳ ಜನಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖವಾಗಿ ಡಯಟ್ ಮಾಡುವವರು ಹೆಚ್ಚು ಪ್ರಾಮುಖ್ಯತೆ ಸಸ್ಯಾಹಾರಕ್ಕೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಟಲಿಯ ತಿಂಡಿ ಪದಾರ್ಥಗಳಲ್ಲಿ ಹಲವು ಸಸ್ಯಹಾರದ ಖಾದ್ಯಗಳು ಆಯ್ಕೆಯಲ್ಲಿರುತ್ತವೆ. ಪಾಸ್ತಾದಿಂದ ಹಿಡಿದು ತರಕಾರಿಯಿಂದ ತಯಾರಾಗುವ ಪಿಜ್ಜಾಗಳು ಕೂಡ ಇಟಲಿಯಲ್ಲಿ ಸಿಗುತ್ತದೆ. ಇಟಲಿಯಲ್ಲಿ ಶೇಕಡಾ 10 ರಷ್ಟು ಜನಸಂಖ್ಯೆ ಸಸ್ಯಾಹಾರಕ್ಕೆ ಪ್ರಾಮುಖ್ಯತೆ ನೀಡುತ್ತದೆ.
5. ಆಸ್ಟ್ರೀಯಾ: ಈ ದೇಶದಲ್ಲಿ ಕಳೆದ ಹಲವು ದಶಕಗಳಿಂದ ಸಸ್ಯಾಹಾರಿಗಳ ಸಂಖ್ಯೆ ದೊಡ್ಡದಾಗುತ್ತಿದೆ. ಈ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸಸ್ಯಾಹಾರಿ ಆಹಾರ ಪದಾರ್ಥಗಳನ್ನು ಸಿದ್ಧಗೊಳಿಸಲಾಗುತ್ತದೆ. ಆಸ್ಟ್ರೀಯಾದ ಶೇಕಡಾ 9 ರಷ್ಟು ಜನರು ಸಸ್ಯಾಹಾರನ್ನು ಸೇವಿಸುತ್ತಾರೆ ಎಂದು ತಿಳಿದು ಬಂದಿದೆ.
/newsfirstlive-kannada/media/post_attachments/wp-content/uploads/2024/12/VEGETARIAN-3.jpg)
6. ಜರ್ಮನ್: ಉತ್ತಮ ಆರೋಗ್ಯ ಹಾಗೂ ಉತ್ತಮ ಜೀವನ ಶೈಲಿಗಾಗಿ ಜರ್ಮನ್​ರು ಕೂಡ ಸಸ್ಯಾಹಾರವನ್ನು ಹೆಚ್ಚು ಪ್ರಚಾರಕ್ಕೆ ಒಳಪಡಿಸುತ್ತಿದ್ದಾರೆ. ಇತ್ತೀಚೆಗೆ ಈ ದೇಶದ ಜನರು ಕೂಡ ಸಸ್ಯಾಹಾರವನ್ನು ತಮ್ಮ ಆಹಾರದ ಒಂದು ಭಾಗವಾಗಿ ಮಾಡಿಕೊಂಡಿದ್ದಾರೆ. ಈ ದೇಶದ ಜನಸಂಖ್ಯೆಯಲ್ಲಿ ಶೇಕಡಾ 9 ರಷ್ಟು ಜನರು ಸಸ್ಯಾಹಾರ ಸೇವಿಸುವವರು ಆಗಿದ್ದಾರಂತೆ
7. ಯುಕೆ(ಯುನೈಟೆಡ್ ಕಿಂಗ್​ಡಮ್): ಈ ದೇಶದಲ್ಲಿ ಇತ್ತೀಚೆಗೆ ಸಸ್ಯಹಾರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸೂಪರ್ ಮಾರ್ಕೆಟ್​ಗಳಲ್ಲಿ ಹೆಚ್ಚು ಹೆಚ್ಚು ತರಕಾರಿಗಳು ಮಾರಾಟವಾಗುತ್ತಿವೆ. ಇನ್ನು ಯುನೈಟೆಡ್ ಕಿಂಗ್​ಡಮ್​ ಹೋಟೆಲ್​ಗಳಲ್ಲಿಯೂ ಕೂಡ ಸಸ್ಯಾಹಾರ ಖಾದ್ಯಗಳು ಹೆಚ್ಚು ಹೆಚ್ಚು ಸಿದ್ಧಗೊಳ್ಳುತ್ತಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಸಸ್ಯಾಹಾರ ಹೋಟೆಲ್​ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಗುರುತರ ಬೆಳವಣಿಗೆ. ಈ ದೇಶದಲ್ಲಿ ಸುಮಾರು 9 ಪರ್ಸೆಂಟ್ ಜನರು ಸಸ್ಯಾಹಾರಿಗಳು ಎಂದು ಅಂಕಿ ಅಂಶಗಳಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ:ಅತಿಬೇಗನೇ ತರಬೇತಿ ಕಲಿಯುವ ಶ್ವಾನದ ತಳಿಗಳು ಯಾವುವು? ಈ ಐದು ನಾಯಿಗಳು ಯಾವತ್ತಿಗೂ ಬೆಸ್ಟ್
8. ಬ್ರೆಜಿಲ್: ಬ್ರೆಜಿಲ್ ದೇಶದಲ್ಲಿಯೂ ಕೂಡ ಸುಮಾರು ಶೇಕಡಾ 8 ರಷ್ಟು ಜನರು ಸಸ್ಯಾಹಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಸ್ಯ ಮೂಲದ ಆಹಾರವನ್ನೇ ತಮ್ಮ ಜೀವನದ ಆಹಾರಕ್ರಮವನ್ನಾಗಿ ಮಾಡಿಕೊಂಡ ಲಕ್ಷಾಂತರ ಜನರು ನಮಗೆ ಬ್ರೆಜಿಲ್​ನಲ್ಲಿ ಕಾಣಸಿಗುತ್ತಾರೆ.
9. ಐರ್ಲ್ಯಾಂಡ್: ಐರ್ಲ್ಯಾಂಡ್​ನ ಶೇಕಡಾ 6 ರಷ್ಟು ಜನರು ಸಸ್ಯಾಹಾರಿಗಳು ಎಂದು ತಿಳಿದು ಬಂದಿದೆ. ಕೆಲವು ವರ್ಷಗಳ ಹಿಂದಿನಿಂದ ಈ ಸಸ್ಯಾಹಾರಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿದೆ ಎಂದು ಕೂಡ ತಿಳಿದು ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ಐರ್ಲ್ಯಾಂಡ್​​ನಲ್ಲಿ ಸಸ್ಯಾಹಾರಿ ಹೋಟೆಲ್ ಮತ್ತು ರೆಸ್ಟೊರೆಂಟ್​ಗಳ ಸಂಖ್ಯೆ ಹೆಚ್ಚಾಗುತ್ತಿದೆ.
10 ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿಯೂ ಕೂಡ ಸಸ್ಯಾಹಾರಿಗಳ ಜನಸಂಖ್ಯೆ ದೊಡ್ಡದಿದೆ. ಇಡೀ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 5ರಷ್ಟು ಜನರು ಸಸ್ಯಾಹಾರಿಗಳು ಎಂದು ದಾಖಲೆಗಳು ಹೇಳುತ್ತವೆ. ಅದರಲ್ಲೂ ಆಸ್ಟ್ರೇಲಿಯಾದ ಮೆಲ್ಬರ್ನ್ ಹಾಗೂ ಸಿಡ್ನಿಯಂತಹ ನಗರಗಳಲ್ಲಿ ಈ ಪದ್ಧತಿ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us