newsfirstkannada.com

ಹನಿಮೂನ್​ ಕ್ಯಾನ್ಸಲ್​​ ಮಾಡಿ ಬೀಚ್​ ಕ್ಲೀನ್​ ಮಾಡಿದ್ದ ಜೋಡಿ! ಕೇಂದ್ರದಿಂದ ಗಣರಾಜ್ಯೋತ್ಸವಕ್ಕೆ ಆಹ್ವಾನ

Share :

Published January 25, 2024 at 1:14pm

Update January 25, 2024 at 1:29pm

    ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ ಜೋಡಿ

    ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛ ಮಾಡಿದ ಪತಿ-ಪತ್ನಿ

    ಜೋಡಿಗೆ 75 ನೇ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಲು ಆಹ್ವಾನ

ಉಡುಪಿ: ಮದುವೆಯಾದ ಬಳಿಕ ಹನಿಮೂನ್ ಹೋಗೋದು ಸದ್ಯದ ಟ್ರೆಂಡ್​​. ಆದರೆ ಇಲ್ಲೊಂದು ಜೋಡಿ ಎನು ಮಾಡಿದೆ ಗೊತ್ತಾ? ಹನಿಮೂನ್​ ಕ್ಯಾನ್ಸಲ್​ ಮಾಡಿ ಸಮುದ್ರ ತೀರವನ್ನು ಸ್ವಚ್ಛ ಮಾಡಿದ್ದಾರೆ.

ಹೌದು. ಅನು ದೀಪ್ ಮತ್ತು ಮಿನುಷಾ ಜೋಡಿ ಹನಿಮೂನ್​ ಹೋಗದೆ ತಮ್ಮ ಊರಿನ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛ ಮಾಡಿದ್ದಾರೆ. ಆದರೀಗ ಈ ಉಡುಪಿಯ ಜೋಡಿಗೆ 2024ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ.

ನಮ್ಮ ಪ್ರವಾಸಿ ತಾಣಗಳು ನಮ್ಮ ಸಂಪತ್ತು. ಕಡಲ ತೀರಗಳನ್ನು ಸುಂದರವಾಗಿ ಇಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ನಲ್ಲಿ ಕರೆ ಕೊಟ್ಟಿದ್ದರು. ಅದರಂತೆ ಅನುದೀಪ್ ಮತ್ತು ಮಿನೂಷಾ ಜೋಡಿ ಮೋದಿ ಮಾತು ಆಲಿಸಿ ಬೀಚ್​ ಸ್ವಚ್ಛ ಮಾಡಿದ್ದಾರೆ.

ಆದರೀಗ ಅವರ ಕೆಲಸವನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ಇಬ್ಬರಿಗೂ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಆಮಂತ್ರಣ ನೀಡಿದೆ. ಹಾಗಾಗಿ ಉಡುಪಿ ಜಿಲ್ಲೆ ಜೋಡಿ ಈಗ ದೆಹಲಿ ತಲುಪಿದ್ದಾರೆ. ನಾಳಿನ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಸಂತೋಷವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಭಾರತ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.

ಪ್ರವಾಸಕ್ಕೆಂದು ಹೋಗುವ ಎಲ್ಲರೂ ಪರಿಸರವನ್ನು ಕಲುಷಿತ ಮಾಡಬೇಡಿ. ಕೊಂಡು ಹೋದ ವಸ್ತುವನ್ನು ಎಲ್ಲೂ ಎಸೆಯದೆ ಹಿಂದಕ್ಕೆ ತನ್ನಿ ಎಂದು ಈ ಸಂದರ್ಭದಲ್ಲಿ ಈ ಜೋಡಿ ಕರೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹನಿಮೂನ್​ ಕ್ಯಾನ್ಸಲ್​​ ಮಾಡಿ ಬೀಚ್​ ಕ್ಲೀನ್​ ಮಾಡಿದ್ದ ಜೋಡಿ! ಕೇಂದ್ರದಿಂದ ಗಣರಾಜ್ಯೋತ್ಸವಕ್ಕೆ ಆಹ್ವಾನ

https://newsfirstlive.com/wp-content/uploads/2024/01/Udupi-5.jpg

Load More