/newsfirstlive-kannada/media/post_attachments/wp-content/uploads/2025/06/Couple-cheats-people-of-Bengaluru-2.jpg)
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಧ್ಯಮ ವರ್ಗದ ಲಕ್ಷಾಂತರ ಜನರು ಈಗಲೂ ಕೆಲವರನ್ನ ನಂಬಿ ಚೀಟಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ಹಾಕುತ್ತಾರೆ. ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇದ್ದೇ ಇರ್ತಾರೆ ಅನ್ನೋದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಜರಗನಹಳ್ಳಿ ದಂಪತಿ ಚೀಟಿ ಹೆಸರಲ್ಲಿ ಇಡೀ ಏರಿಯಾ ಜನರಿಗೆ ಮಕ್ಮಲ್​ ಟೋಪಿ ಹಾಕಿ ಎಸ್ಕೇಪ್ ಆಗಿದ್ದಾರೆ. ಸುಧಾ, ಸಿದ್ದಪ್ಪಾಜಿ ದಂಪತಿ ರಾತ್ರೋರಾತ್ರಿ ಮನೆ ಬಿಟ್ಟು ಹೋಗಿದ್ದು, ನೂರಾರು ಜನರು ಪುಟ್ಟೆನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ದಂಪತಿ ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ಕಂಪ್ಲೇಟ್ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/06/Couple-cheats-people-of-Bengaluru.jpg)
‘ಚೀಟಿ’ಗೆ ದುಡ್ಡು ಹಾಕ್ತೀರಾ? ಎಚ್ಚರ!
ಸುಧಾ, ಸಿದ್ದಪ್ಪಾಜಿ ದಂಪತಿ 5, 10 ಲಕ್ಷದ ಚೀಟಿ ವ್ಯವಹಾರ ನಡೆಸುತ್ತಿದ್ದರು. 5 ಲಕ್ಷದ ಚೀಟಿಗೆ ತಿಂಗಳಿಗೆ 12,500 ಮತ್ತು 10 ಲಕ್ಷದ ಚೀಟಿಗೆ 25 ಸಾವಿರ ಕಟ್ಟಿಸಿಕೊಳ್ಳುತ್ತಿದ್ದರು. ಇವರು ದುಡ್ಡು ಹಾಕಿದ್ರೆ, ಸತಾಯಿಸಲ್ಲ, ಮೋಸ ಮಾಡಲ್ಲ ಅಂತ ಇಡೀ ಜರಗನಹಳ್ಳಿ ಏರಿಯಾ ಜನರ ನಂಬಿಕೆಗಳಿಸಿದ್ದರು. ಅದೇ ನಂಬಿಕೆ ಮೇಲೆ ಲಕ್ಷಾಂತರ ಹಣ ಕೊಟ್ಟ ಜನರು ಈಗ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಮಗನೇ ಹೋದ ಮೇಲೆ ಹಣ ಏನ್ ಮಾಡಲಿ..? ಮನೋಜ್​ ತಂದೆಗೆ 25 ಲಕ್ಷ ರೂಪಾಯಿಯ ಚೆಕ್ ವಿತರಣೆ
ಸಿದ್ದಪ್ಪಾಜಿ ದಂಪತಿಯನ್ನ ನಂಬಿದ್ದ ಸುಮಾರು 200ಕ್ಕೂ ಹೆಚ್ಚು ಮಂದಿ ಕಷ್ಟ ಕಾಲಕ್ಕೆ ಸಹಾಯ​​​​ ಆಗುತ್ತೆ ಅಂತ ಚೀಟಿ ಕಟ್ಟುತ್ತಿದ್ರು. ಮೊದ, ಮೊದಲಿಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ದಂಪತಿ ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದ್ದು, ಮೋಸ ಹೋದ ನೂರಾರು ಜನರು ಸುಧಾ, ಸಿದ್ದಪ್ಪಾಜಿ ವಿರುದ್ಧ BNS 318 ಅಡಿ ವಂಚನೆ ಕೇಸ್ ದಾಖಲು ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/06/Couple-cheats-people-of-Bengaluru-1.jpg)
ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ತೆರಳಿರುವ ಸುಧಾ, ಸಿದ್ದಪ್ಪಾಜಿ ದಂಪತಿ ಕಾಣೆಯಾಗಿದ್ದಾರೆಂದು ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ನೂರಾರು ಜನರ ಆಕ್ರೋಶ ಮುಗಿಲುಮುಟ್ಟಿದ್ದು, ಚೀಟಿ ಕಟ್ಟಿದ್ದ ಲಕ್ಷ, ಲಕ್ಷ ಹಣ ಕಳೆದುಕೊಂಡು ಬೀದಿ ಪಾಲಾಗಿದ್ದೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us