/newsfirstlive-kannada/media/post_attachments/wp-content/uploads/2024/10/Dubai-1.jpg)
ಮದುವೆ ಆಗೋದು ಎಂದರೆ ಈಗಿನ ಕಾಲಕ್ಕೆ ಅದು ಕಷ್ಟವೇ ಸರಿ. ಹಣವಿದ್ದವರು ದುಬಾರಿ ಮದುವೆಯಾಗಲು ಬಯಸುತ್ತಾರೆ. ಹಣದ ಕೊರತೆಯಿರುವವರು ಸರಳ ವಿವಾಹಕ್ಕೆ ಮುಂದಾಗುತ್ತಾರೆ. ಆದರೆ ಇಲ್ಲೊಂದು ಜೋಡಿ ಕೆಂಪು ಸಮುದ್ರದ ಆಳದಲ್ಲಿ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರತಿ ಜೋಡಿ ಜೀವನದ ಕೊನೆಯ ಘಟ್ಟದವರೆಗೆ ತಮ್ಮ ವಿವಾಹವು ನೆನಪಿನಲ್ಲಿರುವಂತೆ ವಿಭಿನ್ನವಾಗಿ ಆಗಲು ಬಯಸುತ್ತಾರೆ. ಕೆಲವರು ಸಮುದ್ರ ಕಿನಾರೆ ಬಳಿ ಮದುವೆಯಾದರೆ, ಇನ್ನು ಕೆಲವು ಅತಿ ಎತ್ತರದ ಪ್ರದೇಶದಲ್ಲಿ ಎಂಗೇಜ್​ ಆಗುತ್ತಾರೆ. ಇನ್ನು ಹಲವರು ದೇವಸ್ಥಾನದಲ್ಲಿ ವಿವಾಹವಾಗುತ್ತಾರೆ. ಆದರೆ ಸೌದಿ ಅರೇಬಿಯಾದ ಜೋಡಿಯೊಂದು ಕೆಂಪು ಸಮುದ್ರದ ನೀರಿನಾಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/10/Dubai-2.jpg)
ಸೌದಿಯ ಹಸನ್ ಅಬು ಅಲ್ ಓಲಾ ಮತ್ತು ಯಾಸ್ಮಿನ್ ಕೆಂಪು ಸಮುದ್ರದ ಆಳದಲ್ಲಿ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದು, ಇದು ಸೌದಿ ಅರೇಬಿಯಾದ ಮೊದಲ ಸಮುದ್ರದಾಳದಲ್ಲಿ ನಡೆದ ಮದುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಹಬೀಬಿ.. ಉಬರ್​ನಲ್ಲಿ ಇನ್ಮುಂದೆ ಒಂಟೆ ರೈಡ್​​ ಮಾಡ್ಬೋದು!
ಅಚ್ಚರಿಯ ಸಂಗತಿಯೆಂದರೆ ಈ ಜೋಡಿ ಎಲ್ಲರಿಗಿಂತಲೂ ವಿಭಿನ್ನವಾಗಿ ವಿವಾಹವಾಗಿದ್ದಾರೆ. ಭೂಮಿ ಮೇಲೆ ವಿವಾಹವಾಗಲು ಕಷ್ಟ ಪಡುವ ಕಾಲದಲ್ಲಿ ಈ ಜೋಡಿ ಆಳ ಸಮುದ್ರದಲ್ಲಿ ವಿವಾಹವಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/10/Dubai.jpg)
ಕ್ಯಾಪ್ಟನ್​​ ಫೈಸಲ್​​ ಫ್ಲೆಂಬನ್​​ ನೇತೃತ್ವದ ಸ್ಥಳೀಯ ಡೈವಿಂಗ್​ ಗ್ರೂಪ್​ ಈ ಜೋಡಿಯನ್ನು ಆಳ ಸಮುದ್ರಕ್ಕೆ ಕರೆದೊಯ್ದು ವಿವಾಹ ಮಾಡಿಸಿದೆ.
ಇದನ್ನೂ ಓದಿ: ಪತಿಯ ಗುಟ್ಕಾ ಸೇವನೆಯಿಂದ ನೊಂದ ಪತ್ನಿ.. ನೇ*ಣಿಗೆ ಕೊರಲೊಡ್ಡಿದ ಹೆಂಡತಿ
ವಿವಾಹದ ಬಳಿಕ ಮಾತನಾಡಿದ ವರ, ‘ಇದು ನಿಜಕ್ಕೂ ಅಚ್ಚರಿಯ ಸಂಗತಿ. ನಾವು ವಿವಾಹವಾಗಲು ಬಯಸಿದಾಗ ಕ್ಯಾಪ್ಟನ್​​ ಫೈಸಲ್​​ ಮತ್ತು ತಂಡ ಸಮುದ್ರದ ಆಳದಲ್ಲಿ ವಿವಾಹವಾಗಲು ಪ್ರೋತ್ಸಾಹಿಸಿದರು. ಇದು ಸುಂದರವಾದ ಮತ್ತು ಮರೆಯಲಾಗದ ಅನುಭವ ನೀಡಿದೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us