ರೈಲ್ವೆ ಟ್ರ್ಯಾಕ್ ಮೇಲೆ ಪ್ರೀ ವೆಡ್ಡಿಂಗ್ ಶೂಟ್ ಹುಚ್ಚಾಟ.. ಚಿತ್ರದುರ್ಗದಲ್ಲಿ ಜೋಡಿ ಜಸ್ಟ್ ಮಿಸ್‌!

author-image
Veena Gangani
Updated On
ರೈಲ್ವೆ ಟ್ರ್ಯಾಕ್ ಮೇಲೆ ಪ್ರೀ ವೆಡ್ಡಿಂಗ್ ಶೂಟ್ ಹುಚ್ಚಾಟ.. ಚಿತ್ರದುರ್ಗದಲ್ಲಿ ಜೋಡಿ ಜಸ್ಟ್ ಮಿಸ್‌!
Advertisment
  • ಮಿತಿ ಮೀರಿದ ಜೋಡಿಯ ಫ್ರೀ ವೆಡ್ಡಿಂಗ್ ಶೂಟ್
  • ಯಾವುದೇ ಅನುಮತಿ ಪಡೆಯದೇ ಫೋಟೋಶೂಟ್
  • ಐದು ಮಂದಿ ಕ್ಷಣ ಮಾತ್ರದಲ್ಲಿ ಪ್ರಾಣಪಾಯದಿಂದ ಪಾರು

ಚಿತ್ರದುರ್ಗ: ಇತ್ತೀಚೆಗೆ ಮದುವೆಗೆ ರೆಡಿಯಾಗಿರೋ ಜೋಡಿಗಳು ಡಿಫರೆಂಟ್‌ ಆಗಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಳ್ಳುತ್ತಾ ಇರುತ್ತಾರೆ. ಎಲ್ಲಿ ನೋಡಿದರೂ ಬೇರೆ, ಬೇರೆ ಲೊಕೇಷನ್​ನಲ್ಲಿ, ಭಿನ್ನ ವಿಭಿನ್ನ ಥೀಮ್​ಗಳಲ್ಲಿ ನವ ಜೋಡಿಗಳು ಫೋಟೋಗೆ ಪೋಸ್​ ಕೊಟ್ಟು ಗಮನ ಸೆಳೆಯುತ್ತಾರೆ. ಆದರೆ ಇಲ್ಲೊಂದು ಜೋಡಿ ಯಾವುದೇ ಅನುಮತಿ ಪಡೆಯದೇ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿ ಫಜೀತಿಗೆ ಸಿಲುಕಿಕೊಂಡಿದೆ.

ಇದನ್ನೂ ಓದಿ: ಕೇವಲ ಕಂಪ್ಯೂಟರ್​ ಸೈನ್ಸ್​ ಮಾತ್ರವಲ್ಲ.. ಇಂಜಿನಿಯರಿಂಗ್​​ನಲ್ಲಿ ಇವೆ ಸಾಕಷ್ಟು ಸ್ಪೆಷಲ್​ ಕೋರ್ಸ್​ಗಳು

publive-image

ಹೌದು, ಚಿತ್ರದುರ್ಗದ ಮದಕರಿಪುರ ಅಂಡರ್​ಪಾಸ್ ಬಳಿ ನೂತನ ಜೋಡಿಯೊಂದು ರೈಲ್ವೆ ಹಳಿ ಮೇಲೆ ಫ್ರೀ ವೆಡ್ಡಿಂಗ್ ಶೂಟ್ ಮಾಡಿಸಿದೆ. ಈ ಜೋಡಿ ಯಾವುದೇ ಅನುಮತಿ ಪಡೆಯದೇ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದರು.

publive-image

ಆದ್ರೆ ಇದೇ ವೇಳೆ ಏಕಾಏಕಿ ರೈಲು ಬಂದಿದೆ. ​ಶೂಟ್​ಗೆಂದು ಹಳಿ ಮೇಲೆ ನಿಂತುಕೊಂಡಿದ್ದ ಐದು ಮಂದಿ ಕ್ಷಣ ಮಾತ್ರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ​ನ್ಯೂಸ್​ ಫಸ್ಟ್​ಗೆ ಘಟನೆಯ ಎಕ್ಸ್‌ಕ್ಯೂಸಿವ್ ದೃಶ್ಯ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment