VIDEO:ಫೋಟೋಶೂಟ್ ಮಾಡುವಾಗ ಅನಾಹುತ.. ಮದುವೆಯ ದಿನವೇ ವಧುವಿಗೆ ಸುಟ್ಟ ಗಾಯ ! ಆಗಿದ್ದೇನು?

author-image
Gopal Kulkarni
Updated On
VIDEO:ಫೋಟೋಶೂಟ್ ಮಾಡುವಾಗ ಅನಾಹುತ.. ಮದುವೆಯ ದಿನವೇ ವಧುವಿಗೆ ಸುಟ್ಟ ಗಾಯ ! ಆಗಿದ್ದೇನು?
Advertisment
  • ಮದುವೆಗಾಗಿ ಕೆನಡಾದಿಂದ ಬೆಂಗಳೂರಿಗೆ ಬಂದ ಜೋಡಿಗೆ ಸಿಡಿದ ಕಲರ್ ಬಾಂಬ್​
  • ಫೋಟೋಶೂಟ್​ಗೆ ಬ್ಯಾಕ್​ಗ್ರೌಂಡ್ ಕಲರ್​ಫುಲ್ ಮಾಡಲು ಯತ್ನಿಸಿದ್ದೇ ತಪ್ಪಾಯ್ತು
  • ಕಲರ್ ಬಾಂಬ್ ಸಿಡಿದು ವಧುವಿನ ಬೆನ್ನು ಹಾಗೂ ಸೊಂಟದ ಭಾಗದಲ್ಲಿ ಸುಟ್ಟಗಾಯ

ಬೆಂಗಳೂರಿನ ಮೂಲದ ಜೋಡಿಗಳು ಮದುವೆಯಾಗುವುದಕ್ಕಾಗಿ ಕೆನಡಾದಿಂದ ಬೆಂಗಳೂರಿಗೆ ಬಂದು ಅದ್ಧೂರಿಯಾಗಿ ಮದುವೆಯಾಗಿ ಫೋಟೋಶೂಟ್ ನಡೆಯುವ ವೇಳೆ ದೊಡ್ಡ ಅನಾಹುತಕ್ಕೆ ತುತ್ತಾಗಿದ್ದಾರೆ. ಫೋಟೋಶೂಟ್ ನಡೆಯುವಾಗ ಸುತ್ತಲೂ ರಂಗು ರಂಗಿನ ಸ್ಮೂಕ್​ ಹರಡಲು ಎಂದು ಕೆಲವು ಕಲರ್ ಬಾಂಬ್​ಗಳನ್ನು ಸ್ಫೋಟಿಸಿದ್ದೇ ದೊಡ್ಡ ದುರಂತಕ್ಕೆ ಕಾರಣವಾಗಿ ಹೋಗಿದೆ.
ಬಣ್ಣ ಬಣ್ಣ ಹೊಗೆಯನ್ನು ಸುತ್ತಲೂ ಹರಡಿಸಿ ಫೋಟೋ ವಿಡಿಯೋಗಳು ಇನ್ನುಷ್ಟು ಸುಂದರತೆಯಿಂದ ತುಂಬಿಕೊಳ್ಳಲಿ ಎಂದು ಈ ಕಲರ್ ಬಾಂಬ್​ಗಳನ್ನು ಸಿಡಿಸಲಾಗುತ್ತದೆ. ಮದುವೆ ಮುಗಿದ ನಂತರ ಗಂಡು ಹೆಣ್ಣಿನ ಫೋಟೋಶೂಟ್ ನಡೆಯುವ ವೇಳೆ ಕಲರ್ ಬಾಂಬ್​ ಸಿಡಿಸಲಾಗಿದ್ದು ಅದರಲ್ಲಿ ಒಂದು ಬಾಂಬ್​ ಬ್ಲಾಸ್ಟ್ ಆಗಿ ವಧುವಿನ ಬೆನ್ನಿಗೆ ಸಿಡಿದಿದೆ. ವಿಕ್ಕಿ ಮತ್ತು ಪ್ರಿಯಾ ಎಂಬ ಜೋಡಿಯ ಮದುವೆಗೆ ಕಂಟಕವಾಗಿ ಪರಿಣಮಿಸಿದೆ. ಈ ಜೋಡಿಯ ವಿಯಾಪಾರಡೈಸ್ ಎಂಬ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿವಿಡಿಯೋ ಹಂಚಿಕೊಂಡಿದ್ದು. ಅದ್ಯಾವ ದುಷ್ಟಶಕ್ತಿಯ ದೃಷ್ಟಿ ಬಿದ್ದಿತೋ ನನ್ನ ಮದುವೆಯ ದಿನವೇ ಸುಟ್ಟು ಹೋಯಿತು ಎಂದು ನೋವಿನಿಂದ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Bank Strike; ನಾಳೆ ಕರ್ನಾಟಕ ಬಂದ್ ಬೆನ್ನಲ್ಲೇ 2 ದಿನ ಬ್ಯಾಂಕುಗಳ ಮುಷ್ಕರ.. ಯಾವಾಗಿನಿಂದ?

ವಿಕ್ಕಿ ಪ್ರಿಯಾಳನ್ನು ತನ್ನ ಎರಡು ಕೈಗಳಿಂದ ಎತ್ತಿಕೊಂಡು ಸುತ್ತು ಹಾಕುವಾಗ ಈ ಒಂದು ಕಲರ್ ಬಾಂಬ್ ಬ್ಲಾಸ್ಟ್ ಆಗಿದೆ. ಯಾವುದು ಸಂಭ್ರಮದ ಸಂಕೇತವಾಗಿ ಉಳಿಯಬೇಕಾಗಿತ್ತೋ ಅದು ಸಂಕಟದ ಕ್ಷಣವಾಗಿ ಪರಿಣಮಿಸಿದೆ.

ಈ ವಿಡಿಯೋವನ್ನು ಪ್ರಿಯಾ ಶೇರ್ ಮಾಡಿಕೊಂಡಿದ್ದು. ಅವರ ಬೆನ್ನಿಗೆ ಹಾಗೂ ಸೊಂಟಕ್ಕೆ ಗಂಭೀರವಾದ ಗಾಯಗಳು ದೃಶ್ಯದಲ್ಲಿ ಕಂಡು ಬಂದಿವೆ. ಒಂದು ಅದ್ಭುತ ಫೋಟೋ ಶೂಟ್​​ಗಾಗಿ ಪ್ಲ್ಯಾನ್ ಮಾಡಿಕೊಂಡಿದ್ದ ಫೋಟೋಗ್ರಾಫರ್, ವಿಕ್ಕಿ ಪ್ರಿಯಾಳನ್ನು ಎತ್ತಿಕೊಂಡಾಗ ಸುತ್ತಲೂ ಕಲರ್ ಬಾಂಬ್​ ಎಸೆದು ಬಣ್ಣ ಬಣ್ಣದ ಹೊಗೆಗಳು ಬ್ಯಾಕ್​ಗ್ರೌಂಡ್​ನಲ್ಲಿ ಕಾಣುವಂತೆ ಮಾಡಿ ಫೋಟೋಶೂಟ್​ನ್ನು ಅದ್ಭುತಗೊಳಿಸು ವಿಚಾರವಿತ್ತು. ಆದರೆ ಎಸೆದ ಕಲರ್ ಬಾಂಬ್​ ಅನಾಹುತವಾಗುವಂತಹ ಕಾರ್ಯ ಮಾಡಿಬಿಟ್ಟಿತ್ತು.

publive-image

ಇದನ್ನೂ ಓದಿ:ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್​ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು. ಎಲ್ಲರೂ ಸಂಭ್ರಮಿಸುವ ಕ್ಷಣದಲ್ಲಿ ಈ ಜೋಡಿಗೆ ಎಂತಹ ಸಂಕಟ ಬಂತು ಎಂದು ಮಮ್ಮಲ ಮರುಗಿದ್ದಾರೆ. ಅದರಲ್ಲೂ ಪ್ರಿಯಾಗೆ ಆಗಿರುವ ಗಾಯವನ್ನು ಕಂಡವರು ನಿಜಕ್ಕೂ ಇದು ಘೋರ ದುರಂತ ಎಂದಿದ್ದಾರೆ. ಕೆಲವರು ಜೋಡಿಯ ಮೇಲೆ ದುಷ್ಟಶಕ್ತಿಯ ದೃಷ್ಟಿ ತಾಗಿದ್ದು ನಿಜ ಎಂದರೆ, ಇನ್ನೂ ಕೆಲವರು ಇದು ದೃಷ್ಟಿ ತಾಗಿದ್ದಲ್ಲ, ಸರಿಯಾದ ಸುರಕ್ಷತೆಗಳನ್ನು ಪೂರ್ವವಾಗಿ ತೆಗೆದುಕೊಳ್ಳದೇ ಮಾಡುವುದರಿಂದ ಸಂಭವಿಸುವ ಅನಾಹುತಗಳು ಎಂದಿದ್ದಾರೆ. ಇನ್ನು ಕೆಲವರು ಇದೊಂದು ಸ್ಟುಪಿಡಿಟಿ ಅಂತ ಕೂಡ ಬೇಸರವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment