ಬೆಂಗಳೂರಲ್ಲಿ ಮಲತಂದೆಯಿಂದ ಇಬ್ಬರು ಮಕ್ಕಳ ಹತ್ಯೆ ಕೇಸ್; ಅಪರಾಧಿಗೆ ಕೋರ್ಟ್​ನಿಂದ ಜೀವಾವಧಿ ಶಿಕ್ಷೆ

author-image
Veena Gangani
Updated On
ಬೆಂಗಳೂರಲ್ಲಿ ಮಲತಂದೆಯಿಂದ ಇಬ್ಬರು ಮಕ್ಕಳ ಹತ್ಯೆ ಕೇಸ್; ಅಪರಾಧಿಗೆ ಕೋರ್ಟ್​ನಿಂದ ಜೀವಾವಧಿ ಶಿಕ್ಷೆ
Advertisment
  • ಅಪರಾಧಿ ಮಲತಂದೆಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ
  • ಅಮೃತಹಳ್ಳಿ ಅಪ್ರಾಪ್ತ ಹೆಣ್ಮಕ್ಕಳ ಡಬಲ್ ಮರ್ಡರ್ ಕೇಸ್​ಗೆ ಟ್ವಿಸ್ಟ್
  • ಅಪ್ರಾಪ್ತ ಬಾಲಕಿಯರನ್ನು ಹತ್ಯೆ ಮಾಡಿದ್ದ ಮಲತಂದೆ ಸುಮಿತ್

ಬೆಂಗಳೂರು: ಅಮೃತಹಳ್ಳಿ ಅಪ್ರಾಪ್ತ ಹೆಣ್ಣುಮಕ್ಕಳ ಡಬಲ್ ಮರ್ಡರ್ ಕೇಸ್​ಗೆ ಸಂಬಂಧಿಸಿದಂತೆ ಅಪರಾಧಿ ಮಲತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಎಂದು ಆದೇಶಿಸಿದೆ.

publive-image

ಇದನ್ನೂ ಓದಿ:ಸಖತ್​ ಗ್ರ್ಯಾಂಡ್​ ಆಗಿ ಅಮ್ಮನ ಬರ್ತ್​ ಡೇ ಸೆಲೆಬ್ರೇಟ್ ಮಾಡಿದ ದೀಪಿಕಾ ದಾಸ್​; ಫೋಟೋಸ್​ ಇಲ್ಲಿವೆ!

2024ರ ಆಗಷ್ಟ್ 24ರಂದು ಅಮೃತಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯರ ಕೊಲೆ ನಡೆದಿತ್ತು. ಈ ಕೊಲೆ ಮಾಡಿರೋದು ಕೋರ್ಟ್​ನಲ್ಲಿ ಸಾಬೀತಾಗಿತ್ತು. ಮಲಮಕ್ಕಳು ತಂದೆ ಅಂತಾ ಮರ್ಯಾದೆ ಕೊಡುತ್ತಿಲ್ಲ, ಹೇಳಿದ ಮಾತನ್ನ ಕೇಳುತ್ತಿಲ್ಲ ಎಂದು ಸುಮಿತ್ ಇಬ್ಬರು ಮಕ್ಕಳ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದ. 16 ವರ್ಷದ ಸೃಷ್ಟಿ, 14 ವರ್ಷದ ಸೋನಿಯಾಳನ್ನು ಕೊಲೆ ಮಾಡಿದ್ದ. ಅಪರಾಧಿ ಸುಮಿತ್, ಈ ಹೆಣ್ಮಕ್ಕಳ ತಾಯಿ ಅನಿತಾ ಯಾದವ್​​ರನ್ನು ಮದುವೆಯಾಗಿದ್ದ.

publive-image

ಅನಿತಾ ಯಾದವ್ ಮೊದಲ ಪತಿಗೆ ಡಿವೋರ್ಸ್ ಆಗಿ ಇಬ್ಬರು ಹೆಣ್ಣು ಮಕ್ಕಳಿದ್ದವು. ನಂತರ ಅನಿತಾಳಿಗೆ ಶಾದಿ ಡಾಟ್.ಕಾಮ್​ನಲ್ಲಿ ಸುಮಿತ್ ಪರಿಚಿತನಾಗಿದ್ದ. ಬಳಿಕ ಸುಮಿತ್ ಹಾಗೂ ಅನಿತಾ ಯಾದವ್ ಇಬ್ಬರು ಹೆಣ್ಮಕ್ಕಳೊಂದಿಗೆ ಕೆಂಪಾಪುರದಲ್ಲಿ ವಾಸವಿದ್ದ. ಮಕ್ಕಳು ಮೊಬೈಲ್​ನಲ್ಲಿ ಮಾತಾಡ್ತಿದಿದ್ದನ್ನು ಸುಮಿತ್ ಪ್ರಶ್ನೆ ಮಾಡಿದ್ದನಂತೆ. ನೀನು ನನ್ನ ತಂದೆಯಲ್ಲ, ನಿನಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ಹೆಣ್ಮಕ್ಕಳು ಹೇಳಿದ್ದರು. ಇದಕ್ಕೆ ಕೋಪಗೊಂಡ ಸುಮಿತ್ತ್ ಉಸಿರುಗಟ್ಟಿಸಿ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದ. ಸುಮಿತ್​ಗೆ ಬೆಂಗಳೂರಿನ 50ನೇ ಸಿಸಿಹೆಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಜೊತೆಗೆ 50 ಸಾವಿರ ದಂಡ ಕಟ್ಟುವಂತೆ ಆದೇಶಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment