newsfirstkannada.com

BREAKING: ಅಯೋಧ್ಯೆ ಬೆನ್ನಲ್ಲೇ ಜ್ಞಾನವಾಪಿ ಮಸೀದಿ ಕೇಸಲ್ಲೂ ಹಿಂದೂಗಳಿಗೆ ಜಯ; ಪೂಜೆಗೆ ಅವಕಾಶ

Share :

Published January 31, 2024 at 4:11pm

    ಅಯೋಧ್ಯೆ ಕೇಸ್​ ಬೆನ್ನಲ್ಲೇ ಬಂದ ಜ್ಞಾನವಾಪಿ ಮಸೀದಿ ವಿವಾದ!

    ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ದೊಡ್ಡ ಜಯ

    ಜ್ಞಾನವಾಪಿ ಮಸೀದಿ ಕೇಸ್​​ ಕುರಿತು ಕೋರ್ಟ್​ ಮಹತ್ವದ ​ತೀರ್ಪು

ಲಕ್ನೋ: ಅಯೋಧ್ಯೆ ಬೆನ್ನಲ್ಲೇ ಜ್ಞಾನವಾಪಿ ಮಸೀದಿ ಕೇಸಲ್ಲೂ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಇನ್ಮುಂದೆ ಮಸೀದಿ ಬೇಸ್​ಮೆಟ್​​ನಲ್ಲಿ ಪೂಜೆ ಮಾಡಲು ಹಿಂದೂಗಳಿಗೆ ಅವಕಾಶ ನೀಡಿ ವಾರಣಾಸಿ ಕೋರ್ಟ್ ಆದೇಶ ಹೊರಡಿಸಿದೆ.

ಮುಂದಿನ ಒಂದು ವಾರದಲ್ಲಿ ಪೂಜೆಗೆ ವ್ಯವಸ್ಥೆ ಮಾಡಬೇಕು. ಹಿಂದೂಗಳು ಪೂಜೆ ಮಾಡಲು ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕೋರ್ಟ್​ ಸೂಚನೆ ಕೊಟ್ಟಿದೆ. ಕೋರ್ಟ್​ ಕೊಟ್ಟ ಈ ತೀರ್ಪಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ಹಿಂದೆಯೇ ವಾರಣಾಸಿ ಜ್ಞಾನವಾಪಿ ಮಸೀದಿ ಸ್ಥಳದಲ್ಲಿ ದೇವಾಲಯ ಮರುಸ್ಥಾಪನೆಗೆ ಆದೇಶ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್​​​ ಮಹತ್ವದ ಆದೇಶ ನೀಡಿತ್ತು. ಎರಡು ಕಡೆಯವರ ವಾದ ಆಲಿಸಿದ ಹೈಕೋರ್ಟ್​​ ಆರ್ಕಿಯಾಲಜಿಕಲ್ ಸರ್ವೇ ಆಫ್​ ಇಂಡಿಯಾ ನೇತೃತ್ವದಲ್ಲಿ ಸಮಿತಿ ಒಂದು ರಚಿಸಿದೆ. ಅಲ್ಲದೇ ಈ ಕುರಿತು ಕೂಲಂಕಷ ತನಿಖೆ ನಡೆಸಿ ಪರಿಶೀಲಿಸಿ ಒಂದು ರಿಪೋರ್ಟ್​ ಸಿದ್ಧತೆ ಮಾಡಿ ಎಂದು ಸಮಿತಿಗೆ ಹೈಕೋರ್ಟ್​ ಸೂಚನೆ ಕೊಟ್ಟಿತ್ತು. ಎರಡು ಕಡೆಯವರು ರಿಪೋರ್ಟ್​ ಸಲ್ಲಿಸಿದ ಬಳಿಕ ಕೋರ್ಟ್​ ಈ ಆದೇಶ ಕೊಟ್ಟಿದೆ.

ಏನಿದು ಕೇಸ್​..?

ಜ್ಞಾನವ್ಯಾಪಿ ಮಸೀದಿ ಉತ್ತರ ಪ್ರದೇಶದ ಬನಾರಸ್‌ನಲ್ಲಿ ಇದೆ. 1669ರಲ್ಲಿ ಮೊಘಲ ದೊರೆ ಔರಂಗಜೇಬ ಕೆಡವಿದ್ದರು ಎನ್ನಲಾದ ಹಳೆ ಶಿವ ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸ್ಥಳ ಮೂಲತಃ ವಿಶ್ವೇಶ್ವರ ದೇವಸ್ಥಾನಕ್ಕೆ ಸೇರಿದ್ದು, ಇದನ್ನು ಬಸಾರಸ್‌ ಮೂಲದ ಅತ್ಯಂತ ಪ್ರಸಿದ್ಧ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ನಾರಾಯಣ ಭಟ್ಟರು ಎಂಬುವರು ಸ್ಥಾಪಿಸಿದ್ದರು ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಅಯೋಧ್ಯೆ ಬೆನ್ನಲ್ಲೇ ಜ್ಞಾನವಾಪಿ ಮಸೀದಿ ಕೇಸಲ್ಲೂ ಹಿಂದೂಗಳಿಗೆ ಜಯ; ಪೂಜೆಗೆ ಅವಕಾಶ

https://newsfirstlive.com/wp-content/uploads/2024/01/Gyanvapi-Case.jpg

Load More