/newsfirstlive-kannada/media/post_attachments/wp-content/uploads/2024/11/darshan13.jpg)
ಬೆಂಗಳೂರು: 130 ದಿನಗಳ ಕಾಲ ಜೈಲಿನಲ್ಲಿದ್ದ ಆರೋಪಿ ದರ್ಶನ್‌ಗೆ ಹೈಕೋರ್ಟ್ ಅನಾರೋಗ್ಯದ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಆಸ್ಪತ್ರೆಯಲ್ಲಿರೋ ದರ್ಶನ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಅನಾರೋಗ್ಯ ಕಾರಣ ಇಡ್ಕೊಂಡು ದರ್ಶನ್ ಬೇಲ್ ಪಡೆದ್ರೆ ಅದೇ ಕಾರಣ ಇಡ್ಕೊಂಡು ಪೋಲೀಸರು ಸುಪ್ರೀಂಕೋರ್ಟ್ ಮೊರೆ ಹೋಗೋದಕ್ಕೆ ಸಜ್ಜಾಗಿದ್ದು, ಅದಕ್ಕೆ ರಾಜ್ಯ ಗೃಹ ಇಲಾಖೆ ಕೂಡ ಒಪ್ಪಿಗೆ ಸೂಚಿಸಿದೆ.
ಬಳ್ಳಾರಿ ಜೈಲಿನಲ್ಲಿ ಬೆನ್ನುನೋವಿನಿಂದ ಬಳಲ್ತಿದ್ದ ದರ್ಶನ್ ಇದೇ ಕಾರಣ ಇಡ್ಕೊಂಡು ಮಧ್ಯಂತರ ಜಾಮೀನು ಪಡೆದಿದ್ರು. ಬೆಂಗಳೂರು ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿರೋ ದರ್ಶನ್‌ಗೆ ಸದ್ಯ ಫಿಸಿಯೋಥೆರಪಿ ನೀಡ್ತಾಗ್ತಿದೆ. ಬರೀ ಫಿಸಿಯೋಥೆರಸಿ ಸಾಕಾಗಲ್ಲ ಸರ್ಜರಿ ಮಾಡ್ಲೇಬೇಕು ಅಂದಿದ್ದಕ್ಕೆ ದರ್ಶನ್ ಒಪ್ಪಿಗೆ ಕೊಟ್ಟಿದ್ರೂ. ಆದ್ರೆ ಇನ್ನೂ ದರ್ಶನ್‌ಗೆ ಬೆನ್ನುನೋವಿಗೆ ಸರ್ಜರಿಯಾಗಿಲ್ಲ. ಸದ್ಯ ಇದೇ ಕಾರಣ ದರ್ಶನ್‌ಗೆ ಸಂಕಷ್ಟತಂದೊಡ್ಡಿದೆ.
ದರ್ಶನ್‌ಗೆ ಮತ್ತೆ ಸಂಕಷ್ಟ ಶುರು.. ರದ್ದಾಗುತ್ತಾ ಜಾಮೀನು?
ನಟ ದರ್ಶನ್ ಬೇಲ್ ಅರ್ಜಿ ರದ್ದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸೋದಕ್ಕೆ ಪೊಲೀಸ್ರಿಗೆ ನವೆಂಬರ್ 13ರಂದು ಸರ್ಕಾರ ಅನುಮತಿ ನೀಡಿದೆ. ಈಗಾಗ್ಲೇ ಮೇಲ್ಮನವಿ ಸಿದ್ಧ ಮಾಡಿರೋ ಎಸ್‌ಎಸ್‌ಪಿ ಪ್ರಸನ್ನ ಕುಮಾರ್ ಪೊಲೀಸ್ರಿಗೆ ನೀಡಿದ್ದಾರೆ. ಮತ್ತೊಂದೆಡೆ ಪೊಲೀಸ್ರು ಕೆಲ ದಾಖಲೆಗಳ ಭಾಷಾಂತರ ಕಾರ್ಯ ಮಾಡ್ತಿದ್ದಾರೆ. ಸದ್ಯ ಮೇಲ್ಮನವಿ ಸಿದ್ಧ ಮಾಡ್ಕೊಂಡಿರೋ ಪ್ರಸನ್ನಕುಮಾರ್ ಸೋಮವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸೋ ಸಾಧ್ಯತೆ ಇದೆ.
ಕೊಲೆ ಆರೋಪಿ ದರ್ಶನ್‌ಗೆ ಏಕಾಏಕಿ ಸರ್ಜರಿ ಮಾಡೋಕೆ ಆಗೋದಿಲ್ವಂತೆ. ಯಾಕಂದ್ರೆ ಮೂಳೆ ಮೇಲಿನ ನರಕ್ಕೆ ಪೆಟ್ಟು ಬಿದ್ದಿರೋದ್ರಿಂದ ಕೆಲವೊಂದು ಫ್ರೊಸಿಜರ್ ಫಾಲೋ ಮಾಡ್ಬೇಕಾಗಿದೆ ಎಂದು ಹೇಳಲಾಗ್ತಿದೆ.
ದರ್ಶನ್‌ಗೆ ಸರ್ಜರಿ ಯಾವಾಗ?
ನರಕ್ಕೆ ಪೆಟ್ಟಾಗಿರೋದ್ರಿಂದ ಏಕಾಏಕಿ ಆಪರೇಷನ್ ಮಾಡಲು ಆಗಲ್ಲ. ಮೂಳೆಯ ಮೇಲಿನ ನರ ಜರುಗಿಸಿ ದರ್ಶನ್‌ಗೆ ಆಪರೇಷನ್ ಮಾಡ್ಬೇಕು. ಸದ್ಯ ಫಿಸಿಯೋಥೆರಸಿ ಮೂಲಕ ನರವನ್ನ ಜರುಗಿಸಲಾಗ್ತಿದೆ. ನಾಳೆ ಅಥವಾ ನಾಡಿದ್ದು ದರ್ಶನ್‌ಗೆ ಮತ್ತೊಂದು ಸ್ಕ್ಯಾನಿಂಗ್ ಮಾಡ್ಲಾಗುತ್ತೆ. ವೈದ್ಯರ ರಿಪೋರ್ಟ್ ಬಂದ ಬಳಿಕ ಸರ್ಜರಿಯ ದಿನಾಂಕ ಫಿಕ್ಸ್ ಆಗಲಿದೆ.
ಅಕ್ಟೋಬರ್ 30ರಂದು ದರ್ಶನ್‌ಗೆ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿ ಡಿಸೆಂಬರ್ 11ಕ್ಕೆ ಮುಗಿಯುತ್ತೆ. ಈಗಾಗ್ಲೇ ಕೋರ್ಟ್‌ಗೆ ವೈದ್ಯಕೀಯ ತಪಾಸಣಾ ವರದಿ ಸಲ್ಲಿಸಲಾಗಿದೆ. ಸದ್ಯ ದರ್ಶನ್‌ಗೆ ಫಿಜಿಯೋಥೆರಪಿ ಮಾಡ್ತಿರೋದ್ರಿಂದ ಕೊನೆ ಹಂತದಲ್ಲಿ ಸರ್ಜರಿ ಆದ್ರೆ, ವಿಶ್ರಾಂತಿಗಾಗಿ ಕೋರ್ಟ್‌ಗೆ ಜಾಮೀನು ವಿಸ್ತರಣೆ ಕೋರಿ ದರ್ಶನ್ ಮನವಿ ಮಾಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸದೇ ಇರೋದೇ ದರ್ಶನ್‌ಗೆ ಮುಳ್ಳಾಗುವ ಎಲ್ಲ ಲಕ್ಷಣಗಳು ಕಾಣ್ತಿದೆ. ಒಂದ್ವೇಳೆ ಸುಪ್ರೀಂಕೋರ್ಟ್ ದರ್ಶನ್ ಮಧ್ಯಂತರ ಜಾಮೀನು ರದ್ದು ಮಾಡಿದ್ರೆ.. ಆರು ವಾರಕ್ಕೂ ಮೊದ್ಲೇ ದರ್ಶನ್ ಬಳ್ಳಾರಿ ಜೈಲು ಸೇರುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಪ್ಪನ ಮಾತಿನಿಂದ ಮಗನ ಕ್ರಿಕೆಟ್ ಕರಿಯರ್ ಡ್ಯಾಮೇಜ್ ಆಗುತ್ತಾ..? ಸಂಜು ಸ್ಯಾಮ್ಸನ್ ಬೆನ್ನಿಗೆ ನಿಂತಿದ್ದ ಕನ್ನಡಿಗ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ