ಅಪಘಾತಕ್ಕೆ ₹19 ಲಕ್ಷ ಪರಿಹಾರ ಕೊಡಲಿಲ್ಲ.. ಕೋರ್ಟ್​ ಆದೇಶಕ್ಕೆ ಕ್ಯಾರೆ ಎನ್ನದ KSRTC ಬಸ್‌ಗೆ ಎಂಥಾ ಶಿಕ್ಷೆ ಸಿಕ್ತು ಗೊತ್ತಾ?

author-image
Veena Gangani
Updated On
ಅಪಘಾತಕ್ಕೆ ₹19 ಲಕ್ಷ ಪರಿಹಾರ ಕೊಡಲಿಲ್ಲ.. ಕೋರ್ಟ್​ ಆದೇಶಕ್ಕೆ ಕ್ಯಾರೆ ಎನ್ನದ KSRTC ಬಸ್‌ಗೆ ಎಂಥಾ ಶಿಕ್ಷೆ ಸಿಕ್ತು ಗೊತ್ತಾ?
Advertisment
  • ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದ ಮೃತ ಯುವಕನ ಪೋಷಕರು
  • 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ
  • 3 ತಿಂಗಳೊಳಗೆ ಪರಿಹಾರ ನೀಡುವಂತೆ ಆದೇಶಿಸಿದ್ದ ನ್ಯಾಯಾಲಯ

ಶಿವಮೊಗ್ಗ: ಪರಿಹಾರ ನೀಡದ ಕೆಎಸ್​ಆರ್​ಟಿಸಿ ಬಸ್ ಅನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಕೋರ್ಟ್​ನಿಂದ ಈ ಆದೇಶ ಹೊರಡಿಸಿದೆ.

ಇದನ್ನೂ ಓದಿ:ಹಾವಿನಿಂದ ಮನೆ ಮಾಲೀಕರ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ.. ಹಾಸನದಲ್ಲಿ ಮನಮಿಡಿಯುವ ದೃಶ್ಯ ಸೆರೆ!

publive-image

ಏನಿದು ಪ್ರಕರಣ?

2022 ಜುಲೈ 7ರಂದು ಬೆಳಗಿನ ಜಾವ 5.30ರ ವೇಳೆಗೆ ಪತ್ರಿಕೆ ಹಂಚಲು ಯುವಕ ಗಣೇಶ್ ಎಂಬಾತ ಸೈಕಲ್​ನಲ್ಲಿ ಹೊಗುತ್ತಿದ್ದ. ಆಗ ಇದೇ ವೇಳೆ ಪ್ರವಾಸಿ ಮಂದಿರದ ಎದುರು ಕೆಎಸ್​ಆರ್​ಟಿಸಿ ಬಸ್ ಸೈಕಲ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದ. ಮೃತ ಗಣೇಶನ ಪೋಷಕರು ಅಪಘಾತಕ್ಕೆ ಪರಿಹಾರ ಕೋರಿ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಗಣೇಶ್ ಅವರ ಪೋಷಕರಿಗೆ ಮೂರು ತಿಂಗಳೊಳಗೆ 19 ಲಕ್ಷ ಪರಿಹಾರ ನೀಡುವಂತೆ 2024ರ ಜುಲೈ 8ರಂದು ನ್ಯಾಯಾಲಯ ಆದೇಶಿಸಿತ್ತು.

publive-image

ಮೂರು ತಿಂಗಳು ಕಳೆದರೂ ಕೆಎಸ್​ಆರ್​ಟಿಸಿ ಪರಿಹಾರ ನೀಡದ ಕಾರಣ ಗಣೇಶನ ತಾಯಿ ಉಮಾ ಅವರು ನ್ಯಾಯಾಲಯಕ್ಕೆ ಅಮಲ್ಜಾರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ನೋಟಿಸ್ ಜಾರಿಯಾದ ನಂತರವೂ ಕೆಎಸ್​ಆರ್​ಟಿಸಿ ಹಣ ಪಾವತಿಸಿಲ್ಲ. ಪರಿಹಾರದ ಹಣ ಪಾವತಿಸದ ಕಾರಣ ಶಿರಸಿ ಡಿಪೋಗೆ ಸೇರಿದ ಬಸ್ ಅನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದೆ. ಸದ್ಯ ಜಪ್ತಿ ಮಾಡಿರೋ ಕೆಎಸ್​ಆರ್​ಟಿಸಿ ಬಸ್​ ನ್ಯಾಯಾಲಯದ ಆವರಣದಲ್ಲೇ ನಿಲ್ಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment