newsfirstkannada.com

×

ದರ್ಶನ್‌ ಗ್ಯಾಂಗ್‌ಗೆ ಮತ್ತೊಂದು ಬಿಗ್ ಶಾಕ್.. ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್‌ ಆದೇಶ; ಹೇಳಿದ್ದೇನು?

Share :

Published September 9, 2024 at 2:23pm

Update September 9, 2024 at 2:24pm

    ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾದ ದರ್ಶನ್!

    ಜಾರ್ಜ್‌ಶೀಟ್ ಓಕೆ ಡಿಜಿಟಲ್ ಸಾಕ್ಷಿಗಳ ಪ್ರತಿಗೆ 2 ವಾರ ಕೇಳಿದ SPP

    ಜಾಮೀನು ಅರ್ಜಿ ಸಲ್ಲಿಸಲು ತಯಾರಿ ನಡೆಸಿರುವ ದರ್ಶನ್‌ ಗ್ಯಾಂಗ್‌!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ಗ್ಯಾಂಗ್‌ ನ್ಯಾಯಾಂಗ ಬಂಧನ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಇಂದಿಗೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳೆಲ್ಲಾ ರಾಜ್ಯದ ವಿವಿಧ ಜೈಲುಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾಗಿದ್ದರು.

ಇದನ್ನೂ ಓದಿ: ಇಷ್ಟು ದಿನ ಒಂದು ಲೆಕ್ಕ ನಾಳೆಯಿಂದ ದರ್ಶನ್‌ಗೆ ಹೊಸ ದುನಿಯಾ.. ದಾಸ ಕಾಯುತ್ತಿದ್ದ ಆ ದಿನ ಬಂದೇ ಬಿಡ್ತಾ? 

ಪ್ರಕರಣದ ವಿಚಾರಣೆ ನಡೆಸಿದ 24ನೇ ಎಸಿಎಂಎಂ ಕೋರ್ಟ್, ದರ್ಶನ್​​ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್‌ 12ರವರೆಗೂ ವಿಸ್ತರಣೆ ಮಾಡಿದೆ. ಇದೇ ವೇಳೆ ಆರೋಪಿ ಪರ ವಕೀಲರು ಪೊಲೀಸರು ಸಲ್ಲಿಸಿರುವ ಜಾರ್ಜ್‌ಶೀಟ್‌ ವರದಿಯನ್ನು ಇಂದೇ ನೀಡುವಂತೆ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಜಡ್ಜ್‌, ಆರೋಪಿಗಳಿಗೆ ಪರ್ಸನಲ್ ಆಗಿ ಕೋಡೋಕೆ ಹೇಳ್ತಿನಿ ಬಿಡಿ ಎಂದರು.

ವಕೀಲರ ಹೆಸರು ಹೇಳಿದ ದರ್ಶನ್‌!
ಕೋರ್ಟ್ ವಿಚಾರಣೆ ವೇಳೆ ನಟ ದರ್ಶನ್ ಅವರು ಸಿ.ವಿ ನಾಗೇಶ್ ನನ್ನ ವಕೀಲರು ಎಂದು ಉತ್ತರ ನೀಡಿದರು.

ಡಿಜಿಟಲ್ ಸಾಕ್ಷಿಗಳ ಪ್ರತಿಗೆ 2 ವಾರ!
ಇಂದಿನ ಕೋರ್ಟ್ ವಿಚಾರಣೆಯಲ್ಲಿ ಹಾರ್ಡ್ ಡಿಸ್ಕ್, ಪೆನ್ ಡ್ರೈವ್‌ಗಳ ಸೀಲ್ ಕವರ್‌ನಲ್ಲಿ ಪೊಲೀಸರು ನೀಡಿದರು. ಈ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಹಾಜರಿದ್ದರು. ಪ್ರಕರಣದ ಸಾಕ್ಷಿಗಳಿರುವ ವಿಡಿಯೋ ಆಡಿಯೋ ಡಿವೈಸಸ್, 60 ಒರಿಜಿನಲ್ ಡಿಜಿಟಲ್ ಸಾಕ್ಷಿಗಳ ಪ್ರತಿ ಸಲ್ಲಿಕೆಯಾಗಿದೆ. ಈಗ ಚಾರ್ಜ್ ಶೀಟ್ ಸಲ್ಲಿಕೆಯ ಪ್ರತಿ ನೀಡಲಾಗುತ್ತೆ. ಆದರೆ ಈ ಡಿಜಿಟಲ್ ಕಾಪಿ ಮಾಡಬೇಕಿರುವುದರಿಂದ ಕೆಲ ದಿನಗಳ ನಂತರ ನೀಡಲಾಗುತ್ತೆ ಎಂದರು.

ಇದನ್ನೂ ಓದಿ: ದರ್ಶನ್​ ವಿರುದ್ಧದ ಚಾರ್ಜ್​ಶೀಟ್​ಗೆ ಹೊಸ ಟ್ವಿಸ್ಟ್ ಕೊಡಲು ಮುಂದಾದ ದಾಸನ ಪರ ವಕೀಲರು..! 

ಎಸ್‌ಪಿಪಿ ಪ್ರಸನ್ನ ಕುಮಾರ್ ಅವರಿಗೆ ಜಡ್ಜ್‌ ಯಾವಾಗ ಕೊಡ್ತಿರಾ? ಎಂದು ಪ್ರಶ್ನೆ ಮಾಡಿದರು. ಆಗ ಪ್ರಸನ್ನ ಕುಮಾರ್ ಅವರು ಕಾಪಿ ಮಾಡೋಕೆ ಒಂದು ವಾರ ಬೇಕು ಎಂದರು. ಮೊದಲು ಪೇಪರ್ ಚಾರ್ಜ್‌ಶೀಟ್ ನೀಡಿ. ಆಮೇಲೆ ಡಿಜಿಟಲ್ ದಾಖಲೆ ನೀಡಲಿ ಎಂದು ಸೂಚಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ ಗ್ಯಾಂಗ್‌ಗೆ ಮತ್ತೊಂದು ಬಿಗ್ ಶಾಕ್.. ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್‌ ಆದೇಶ; ಹೇಳಿದ್ದೇನು?

https://newsfirstlive.com/wp-content/uploads/2024/09/DARSHAN_BALLARY_7.jpg

Load More