/newsfirstlive-kannada/media/post_attachments/wp-content/uploads/2024/06/dboss3.jpg)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಹಾಗೂ ಅವರ ಗ್ಯಾಂಗ್​ಗೆ ಬಿಗ್​ ಶಾಕ್​ ಎದುರಾಗಿದೆ. ಆರೋಪಿಗಳ ವಿಚಾರಣೆ ನಡೆಸಿದ 24ನೇ ಆರ್ಥಿಕ ಅಪರಾಧಗಳ ಕೋರ್ಟ್​ನ ಜಡ್ಜ್ ವಿಶ್ವನಾಥ್ ಸಿ. ಗೌಡರ್ ಅವರು ನಟಿ ಪವಿತ್ರಾ ಗೌಡ, ನಟ ದರ್ಶನ್ & ಟೀಂ ಅನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ. ರೇಣುಕಾಸ್ವಾಮಿ ಕಿಡ್ನಾಪ್ & ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 13 ಜನ ಬಂಧಿತ ಆರೋಪಿಗಳು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
/newsfirstlive-kannada/media/post_attachments/wp-content/uploads/2024/06/darshan6.jpg)
ಇದನ್ನೂ ಓದಿ:ಒಂದೆರಡಲ್ಲ.. ನಟ ದರ್ಶನ್​ ಮೇಲಿದೆ ಸಾಲು ಸಾಲು ಆರೋಪ! ಇಲ್ಲಿದೆ ಲಿಸ್ಟ್​
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ನಡೆಸಿದ ಪೊಲೀಸರು ಪವಿತ್ರಾ ಗೌಡ A1, ನಟ ದರ್ಶನ್ A2, ಪವನ್ A3 ಮಾಡಿದ್ದಾರೆ. ಇನ್ನುಳಿದ 10 ಮಂದಿಯನ್ನು ಕೊಲೆ ಪ್ರಕರಣದ ಆರೋಪಿಗಳನ್ನಾಗಿ ಮಾಡಲಾಗಿದೆ. 24ನೇ ಆರ್ಥಿಕ ಅಪರಾಧಗಳ ಕೋರ್ಟ್ ಜಡ್ಜ್ ಮುಂದೆ ದರ್ಶನ್ ಸೇರಿ 8 ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.
1. ಪವಿತ್ರಾ ಗೌಡ
2. ದರ್ಶನ್
3. ಪವನ್
4. ವಿನಯ್
5. ಪ್ರದೋಷ
6. ನಂದೀಶ
7. ದೀಪಕ್
8. ಲಕ್ಷ್ಮಣ್
9. ನಾಗರಾಜು
/newsfirstlive-kannada/media/post_attachments/wp-content/uploads/2024/06/darshan3.jpg)
ಇದನ್ನೂ ಓದಿ: ‘ದರ್ಶನ್​​ಗೆ ಯಾವುದೇ ತೊಂದರೆ ಆಗಲ್ಲ, ಯಾಕೆಂದರೆ..’ ಪ್ರಕರಣದ ಬಗ್ಗೆ ವಕೀಲರು ಹೇಳಿದ್ದೇನು?
ರೇಣುಕಾಸ್ವಾಮಿ ಕ್ರೂರ ಕೊಲೆ ಪ್ರಕರಣದಲ್ಲಿ ಇಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ನಟ ದರ್ಶನ್ ಅವರನ್ನು ಬಂಧಿಸಿದ್ದರು. ಅನ್ನಪೂರ್ಣ ನಗರ ಪೊಲೀಸ್ ಠಾಣೆಯಲ್ಲಿ ಇಂದು ದರ್ಶನ್ ಅವರ ಪ್ರಾಥಮಿಕ ವಿಚಾರಣೆ ನಡೆಸಲಾಗಿತ್ತು. ಇದಾದ ಬಳಿಕ ದರ್ಶನ್ ಅವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್‌ಗೆ ಕರೆದುಕೊಂಡು ಬರಲಾಗಿತ್ತು. ಕೊಲೆ ಪ್ರಕರಣದ ಆರೋಪಿಗಳ ಮೆಡಿಕಲ್ ಚೆಕಪ್ ಮುಗಿಸಿದ ಪೊಲೀಸ್​ ಅಧಿಕಾರಿಗಳು ನಟ ದರ್ಶನ್​ ಹಾಗೂ ಗ್ಯಾಂಗ್​​​ ಅನ್ನು ಕೋರ್ಟ್​ಗೆ ಕರೆದುಕೊಂಡು ಬಂದಿದ್ದರು. 24ನೇ ಆರ್ಥಿಕ ಅಪರಾಧಗಳ ಕೋರ್ಟ್​ನ ಜಡ್ಜ್ ಮುಂದೆ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಆರೋಪಿಗಳನ್ನು ಹಾಜರು ಪಡಿಸಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us