ಚಿನ್ನಸ್ವಾಮಿ ಸ್ಟೇಡಿಯಂ ಆರೋಪಿಗಳಿಗೆ ನ್ಯಾಯಾಂಗ ಬಂಧನ; ಕೋರ್ಟ್ ಮಹತ್ವದ ಆದೇಶ

author-image
admin
Updated On
ಚಿನ್ನಸ್ವಾಮಿ ಸ್ಟೇಡಿಯಂ ಆರೋಪಿಗಳಿಗೆ ನ್ಯಾಯಾಂಗ ಬಂಧನ; ಕೋರ್ಟ್ ಮಹತ್ವದ ಆದೇಶ
Advertisment
  • 41ನೇ ಎಸಿಎಂಎಂ ಕೋರ್ಟ್ ಮುಂದೆ‌ ಹಾಜರು ಪಡೆಸಿದ ಪೊಲೀಸರು
  • RCB ಮೆರವಣಿಗೆ ಮಾಡಲು ಕೆಎಸಿಎ ಸರ್ಕಾರಕ್ಕೆ ಅನುಮತಿ ಕೇಳಿತ್ತು
  • ಕಾಲ್ತುಳಿತ ಆಗಿರುವುದು ರಸ್ತೆಯಲ್ಲಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಲ್ಲ!

ಬೆಂಗಳೂರು: ಜೂನ್ 4ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ನಾಲ್ವರು ಆರೋಪಿಗಳನ್ನು ಪೊಲೀಸರು 41ನೇ ಎಸಿಎಂಎಂ ಕೋರ್ಟ್ ಮುಂದೆ‌ ಹಾಜರು ಪಡೆಸಿದ್ದರು. ವಿಚಾರಣೆ ನಡೆಸಿದ ಕೋರ್ಟ್‌ ಜೂನ್ 19ರವರಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ನೀಡಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. DNS ಡೈರೆಕ್ಟರ್​ ಸುನೀಲ್​ ಮ್ಯಾಥ್ಯೂ, DNA ಮ್ಯಾನೇಜ್​ಮೆಂಟ್ ಮ್ಯಾನೇಜರ್ ಕಿರಣ್​, DNA ಮ್ಯಾನೇಜ್​ಮೆಂಟ್ ಸಿಬ್ಬಂದಿ ಸುಮಂತ್​, RCB ಮಾರ್ಕೆಟಿಂಗ್​ ಹೆಡ್​ ನಿಖಿಲ್​ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

publive-image

ಆರೋಪಿಗಳ ಪರ ವಕೀಲ ಸುನೀಲ್ ಅವರು ಸಿಎಂ ಆರೋಪಿಗಳನ್ನು ಅರೆಸ್ಟ್ ಮಾಡಿ‌ ಎಂದು ಹೇಳಿದ ನಂತರ ಅರೆಸ್ಟ್‌ ಮಾಡಲಾಗಿದೆ. ಈ ರೀ‌ತಿ ಅರೆಸ್ಟ್ ಮಾಡಿ ಎಂದು‌ ಹೇಳುವುದೇ ಕಾನೂನು ‌ಬಾಹಿರ. ಸರ್ಕಾರ ತನ್ನ ಇಮೇಜ್ ಕಾಪಾಡಲು ಈ ರೀತಿ ಮಾಡಿದ್ದಾರೆ. ಸಂಪೂರ್ಣವಾಗಿ ಕಾರ್ಯಕ್ರಮವನ್ನು ಸುರಕ್ಷಿತವಾಗಿ ನಡೆಸದೇ ಬಂಧಿಸಿದ್ದಾರೆ ಎಂದು ವಾದಿಸಿದರು.

ಇದನ್ನೂ ಓದಿ: KSCAಗೆ ತಾತ್ಕಾಲಿಕ ರಿಲೀಫ್ ಕೊಟ್ಟ ಹೈಕೋರ್ಟ್​.. RCB ನಿಖಿಲ್ ಸೋಸಲೆ ವಿಚಾರಣೆ ಏನಾಯ್ತು..?  

ವಾದ ಆಲಿಸಿದ ಬಳಿಕ ನ್ಯಾಯಾಧೀಶರು ಆರೋಪಿಗಳ ಪರ ವಕೀಲರಿಗೆ ಸೆಲೆಬ್ರೆೇಷನ್ ಮಾಡಲು ನಿಮಗೆ ಅನುಮತಿ ಇತ್ತ ಎಂದು ಪ್ರಶ್ನಿಸಿದರು. ಆರೋಪಿಗಳ ಪರ ವಕೀಲರು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡಲು ನಿರ್ಧಾರ ಮಾಡಿದ್ದೇ ಸರ್ಕಾರ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏನಾದ್ರು ಸಣ್ಣ ತೊಂದರೆ ಆದರೂ ಅದು ಇವೆಂಟ್ ಮ್ಯಾನೇಜ್‌ಮೆಂಟ್‌ ಜವಾಬ್ದಾರಿಯಾಗುತ್ತದೆ. ಆದರೆ ಅಲ್ಲಿ ಏನು ಆಗಿಲ್ಲ.

publive-image

ಕಾಲ್ತುಳಿತ ಆಗಿರುವುದು ರಸ್ತೆಯಲ್ಲಿ. ಈ ಇದರ ಸಂಪೂರ್ಣ ಜವಾಬ್ದಾರಿ ಪೊಲೀಸರದ್ದಾಗಿದೆ. ಮೆರವಣಿಗೆ ಮಾಡಲು ಕೆಎಸಿಎ ಸರ್ಕಾರಕ್ಕೆ ಅನುಮತಿ ಕೇಳಿತ್ತು. ಅದರೆ ಅದಕ್ಕೆ ಅನುಮತಿ ‌ನೀಡಿಲ್ಲ. ಜೂನ್‌ 3ರಂದು ಭದ್ರತೆ ನೀಡಲು ಕೆಎಸಿಎ ಕೇಳಿದ್ದರು. ಆದರೆ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಜೂನ್ 3ರಂದು‌ ಪೊಲೀಸರು ರಾತ್ರಿಯೆಲ್ಲ ಕೆಲಸ ಮಾಡಿದ್ದಾರೆ. ಹೀಗಾಗಿ ರ್ಯಾಲಿಗೆ ಅನುಮತಿ ‌ನೀಡುವುದಿಲ್ಲ ಎಂದು‌ ಪೊಲೀಸ್ ಇಲಾಖೆ ಹೇಳಿತ್ತು. ರ್ಯಾಲಿಗೆ ಅನುಮತಿ ನಿರಾಕರಿಸದಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದರು.

ಆಗ ನ್ಯಾಯಧೀಶರು ಭದ್ರತಾ ಸಿಬ್ಬಂದಿನಯನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು. ಮತ್ತೆ ವಕೀಲ ಸುನೀಲ್ ಅವರು ಭದ್ರತೆಯನ್ನು‌ ಕೇಳುವುದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಅದನ್ನು ಒದಗಿಸುವ ಜವಾಬ್ದಾರಿ ಪೊಲೀಸರಿಗೆ‌ ಇರುತ್ತೆ ಎಂದರು. ಅಂತಿಮವಾಗಿ ನ್ಯಾಯಾಧೀಶರು ಆರೋಪಿಗಳನ್ನು ಜೂನ್ 19 ರವರಗೆ ನ್ಯಾಯಾಂಗ ಬಂಧನ ನೀಡಿ ಮಹತ್ವದ ಆದೇಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment