Advertisment

ದರ್ಶನ್​​ಗೆ ಜಾಮೀನು ಬೆನ್ನಲ್ಲೇ ಮತ್ತೊಂದು ಗುಡ್​​ನ್ಯೂಸ್.. ಕೋರ್ಟ್​​ನಿಂದ ಸಿಹಿ ಸುದ್ದಿ

author-image
Bheemappa
Updated On
ದರ್ಶನ್​​ಗೆ ಜಾಮೀನು ಬೆನ್ನಲ್ಲೇ ಮತ್ತೊಂದು ಗುಡ್​​ನ್ಯೂಸ್.. ಕೋರ್ಟ್​​ನಿಂದ ಸಿಹಿ ಸುದ್ದಿ
Advertisment
  • ಮಾರಮ್ಮ ದೇವಿಗೆ ಪೂಜೆ ಮಾಡಿ ಮನೆಗೆ ಹೋದ ಆರೋಪಿ
  • ಆಸ್ಪತ್ರೆಯಿಂದ ಹೊರ ಬರ್ತಿದ್ದಂತೆ ಕಾಟೇರನಿಗೆ ಸಂತಸ ಸುದ್ದಿ
  • ಇಬ್ಬರು ಆರೋಪಿಗಳಿಗೂ ಅನುಮತಿ ಕೊಟ್ಟಿರುವ ಕೋರ್ಟ್​

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪ ಹೊತ್ತಿರುವ ದರ್ಶನ್ ಗ್ಯಾಂಗ್ ಜೈಲಿನಿಂದ ರಿಲೀಸ್ ಆಗಿದೆ. 7 ಮಂದಿ ಆರೋಪಿಗಳಿಗೆ ಸೆರೆವಾಸದಿಂದ ಮುಕ್ತಿ ಸಿಕ್ಕಿದೆ. ಇದರ ಮಧ್ಯೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರೋ ದಾಸ ನಿವಾಸದಲ್ಲಿ ರಿಲ್ಯಾಕ್ಸ್ ಮೋಡ್‌ಗೆ ಜಾರಿದ್ದಾರೆ. ಇದೀಗ ದರ್ಶನ್‌ ಮೈಸೂರಿಗೆ ತೆರಳಲು ಅನುಮತಿ ಸಿಕ್ಕಿದೆ. ಜೊತೆ ಚಿತ್ರದುರ್ಗದ ಇಬ್ಬರು ಆರೋಪಿಗಳಿಗೂ ತಮ್ಮ ತವರಿಗೆ ತೆರಳಲು ಪರ್ಮಿಷನ್ ದೊರಕಿದೆ.

Advertisment

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ಜೈಲಿನಿಂದ ಮುಕ್ತಿ ಸಿಕ್ಕಿದೆ. 7 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಜೈಲಿನಿಂದ ರಿಲೀಸ್ ಆಗಿದ್ದಾರೆ. ಇದೀಗ ಡೆವಿಲ್ ಪಡೆಗೆ ಮತ್ತೊಂದು ಖುಷಿಯ ಸುದ್ದಿ ಸಿಕ್ಕಿದೆ. ದರ್ಶನ್‌ಗೆ ತಮ್ಮ ತವರಿಗೆ ತೆರಳಲು ಅನುಮತಿ ಸಿಕ್ಕಿದೆ. ಚಿತ್ರದುರ್ಗದ ಆರೋಪಿಗಳು ತಮ್ಮ ಊರಿಗೆ ಪಯಣಿಸಿದ್ದಾರೆ.

publive-image

ಮೈಸೂರಿಗೆ ತೆರಳಲು ದರ್ಶನ್‌ ಕೋರ್ಟ್ ಅನುಮತಿ

ಪ್ರಕರಣದ ಆರೋಪ ಹೊತ್ತು ಜೈಲುವಾಸ ಅನುಭವಿಸಿ ಬಂದಿರುವ ದರ್ಶನ್‌ಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಬೇಲ್ ಸಿಗುತ್ತಿದ್ದಂತೆ ಬೆನ್ನುನೋವು ಅಂತ ಆಸ್ಪತ್ರೆ ಸೇರಿದ್ದ ದಾಸ ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಕಾಟೇರನಿಗೆ ಮೈಸೂರಿಗೆ ತೆರಳಲು ಪರ್ಮಿಷನ್ ಸಿಕ್ಕಿದೆ.

‘ದಾಸ’ನಿಗೆ ಪರ್ಮಿಷನ್

  • ಮೈಸೂರಿಗೆ ತೆರಳಲು ಸೆಷನ್ಸ್ ಕೋರ್ಟ್‌ಗೆ ದರ್ಶನ್ ಅರ್ಜಿ
  • ದಾಸನ ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್‌ ನ್ಯಾಯಾಲಯ
  • ತಾಯಿಗೆ ಕ್ಯಾನ್ಸರ್ ಕಾಯಿಲೆಯಿದ್ದು ಅವರನ್ನ ನೋಡಬೇಕು
  • ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸಲಹೆ ಪಡೀಬೇಕು
  • ಫಾರ್ಮ್ ಹೌಸ್‌ನ ಪ್ರಾಣಿಗಳನ್ನ ನೋಡಲು ಹೋಗಬೇಕು
  • ಡಿ.20ರಿಂದ ಜ.05ರವರೆಗೆ ಮೈಸೂರಿಗೆ ತೆರಳಲು ಅನುಮತಿ
  • 4 ವಾರ ಅನುಮತಿ ಕೋರಿದ್ದ ದರ್ಶನ್‌ಗೆ 2 ವಾರ ಪರ್ಮಿಷನ್
Advertisment

ಇದನ್ನೂ ಓದಿ: ಮುಖ ಮುಚ್ಚಿಕೊಂಡಿರೋ ಫೋಟೋಗೆ ಪೋಸ್ ಕೊಟ್ಟ ಸ್ಟಾರ್​ ನಟಿ​; ಯಾರು ಅಂತ ಗೆಸ್​ ಮಾಡಿ ನೋಡೋಣ!

publive-image

ಇನ್ನೂ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿ ಕರೆತಂದಿದ್ದ ಜಗ್ಗ ಮತ್ತು ಅನುಕುಮಾರ್ ಚಿತ್ರದುರ್ಗಕ್ಕೆ ತೆರಳಿದ್ದಾರೆ. ಶಿವಮೊಗ್ಗ ಜೈಲಿಂದ ರಿಲೀಸ್ ಆದ ಜಗದೀಶ್ ಚಿತ್ರದುರ್ಗದ ಅಗಸನಕಲ್ಲು ಏರಿಯಾದ ತಮ್ಮ ಮನೆಗೆ ತೆರಳಿದ್ದಾನೆ. ಮನೆಯ ಮುಂಭಾಗದ ಜೋಡಿ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿ ತೀರ್ಥ, ಪ್ರಸಾದ ಸ್ವೀಕರಿಸಿ ಜಗದೀಶ್ ಮನೆಗೆ ತೆರಳಿದ್ದಾನೆ. ಮಗ ಬಿಡುಗಡೆ ಹಿನ್ನೆಲೆಯಲ್ಲಿ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಪಾಪವನ್ನ ಹೊತ್ತಿದ್ದ ಡಿ ಗ್ಯಾಂಗ್‌ಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ. ಪೊಲೀಸ್ ಅಧಿಕಾರಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ. ಆದರೂ ಅಲ್ಲಿವರೆಗಂತೂ ಡೆವಿಲ್ ಪಡೆ ಸೇಫ್‌.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment