newsfirstkannada.com

ಕೇರಳ ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಭಾರೀ ಹಿನ್ನಡೆ

Share :

Published February 17, 2024 at 7:41am

    ಎಕ್ಸಾಲಾಜಿಕ್‌ ಸಲ್ಯೂಷನ್ಸ್ ಗಂಭೀರ ವಂಚನೆ ಕೇಸ್

    Exalogic Solutions ವಿರುದ್ಧ ತೆರಿಗೆ ವಂಚನೆ ಆರೋಪ

    ಕೇಂದ್ರ ಸರ್ಕಾರ ಎಸ್‌ಎಫ್‌ಐಒ ತನಿಖೆಗೆ ಆದೇಶ ನೀಡಿತ್ತು

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ವೀಣಾ ವಿಜಯನ್​​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಹಿನ್ನಡೆಯಾಗಿದೆ. ವೀಣಾ ವಿಜಯನ್​​ ಒಡೆತನದ ಐಟಿ ಸಂಸ್ಥೆ ಎಕ್ಸಾಲಾಜಿಕ್‌ ಸಲ್ಯೂಷನ್ಸ್ (Exalogic Solutions) ವಿರುದ್ಧದ ವಂಚನೆ ಆರೋಪ ಕೇಳಿಬಂದಿತ್ತು. ಈ ಕುರಿತು ಎಸ್‌ಎಫ್‌ಐಒ (Serious Fraud Investigation Office) ತನಿಖೆ ನಡೆಸುತ್ತಿದೆ. ಎಸ್‌ಎಫ್‌ಐಒ ತನಿಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ್ದು, ಭಾರೀ ವಂಚನೆ ಆರೋಪದ ವಿರುದ್ಧ ಕಾನೂನು ಪ್ರಕಾರ ವಿಚಾರಣೆ ನಡೆಯಲಿದೆ. ಎಸ್‌ಎಫ್‌ಐಒ ತನಿಖೆ ಮುಂದುವರಿಯಬಹುದು ಎಂದು ಹೈಕೋರ್ಟ್ ಹೇಳಿದೆ. ಕಂಪನಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿದಾರರು ಎಸ್‌ಎಫ್‌ಐಒಗೆ ಒದಗಿಸಬೇಕು. ಅರ್ಜಿದಾರರ ವಿರುದ್ಧ ಬಂಧನದಂತಹ ಯಾವುದೇ ಬಲವಂತದ ಕ್ರಮವನ್ನು ಎಸ್‌ಫ್‌ಐಒ ಕೈಗೊಳ್ಳಬಾರದು ಎಂದು ಕೋರ್ಟ್​ ಸೂಚಿಸಿದೆ.

ಏನಿದು ಆರೋಪ..? 

ಇದಕ್ಕೆ ಸಂಬಂಧಿಸಿದ ಸಂಪೂರ್ಣ ಆದೇಶವು ಇಂದು ಪ್ರಕಟ ಆಗಲಿದೆ. ವೀಣಾ ವಿಜಯನ್, ಎಸ್‌ಎಫ್‌ಐಒ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ಇವರ ಕಂಪನಿ ಇದೆ. ಇದು ಕೇರಳದಲ್ಲಿರುವ ವಿವಿಧ ಸಂಸ್ಥೆಗಳಿಗೆ ಸಾಫ್ಟ್​ವೇರ್ ಸೇವೆ ಒದಗಿಸಿ ಬಹುಕೋಟಿ ಹಣ ವರ್ಗಾವಣೆ ಮಾಡಿಸಿಕೊಂಡಿದೆ. ಈ ಬಹುಕೋಟಿ ಹಣ ವರ್ಗಾವಣೆಯಲ್ಲಿ ತೆರಿಗೆಯಲ್ಲಿ ವಂಚನೆ ಮಾಡಲಾಗಿದೆ ಎಂಬ ಆರೋಪ ಇದೆ. ಕಂಪನಿ ಕಾನೂನುಗಳ ವಿವಿಧ ಸೆಕ್ಷನ್‌ಗಳ ಅಡಿ ತನಿಖೆ ನಡೆಸುವಂತೆ ಜನವರಿ 31 ರಂದು ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಸೂಕ್ತ ಕಾರಣ ಇಲ್ಲದೇ ತನಿಖೆಗೆ ಆದೇಶಿಸಿದ್ದು ಸಂವಿಧಾನದ ಪರಿಚ್ಛೇದ 14 ಮತ್ತು 21ಕ್ಕೆ ವಿರುದ್ಧವಾಗಿದೆ ಎಂದು ವೀಣಾ ವಕೀಲರು ಪ್ರತಿಪಾದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇರಳ ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಭಾರೀ ಹಿನ್ನಡೆ

https://newsfirstlive.com/wp-content/uploads/2024/02/PINARAYI-VIJAYAN.jpg

Load More