newsfirstkannada.com

‘ಡಿ’ ಗ್ಯಾಂಗ್‌ಗೆ ಶಾಕ್​.. ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್​.. ಮುಂದಿನ ನಡೆಯೇನು?

Share :

Published June 16, 2024 at 6:56am

  ಮೈಸೂರಿನಲ್ಲಿ ಆರೋಪಿಗಳ ಜೊತೆ ದರ್ಶನ್ ಡೀಲ್ ಮಾಹಿತಿ

  ಬಡಪಾಯಿಗೆ ಸಿನಿಮಾ ಸ್ಟೈಲ್‌ನಲ್ಲಿ ಹಿಂಸೆ‌ ಕೊಟ್ಟಿದ್ದ ಗ್ಯಾಂಗ್

  ವಿದ್ಯುತ್ ಶಾಕ್ ನೀಡಿ‌ ಹಿಂಸೆ ನೀಡಿದ್ದು ತನಿಖೆಯಲ್ಲಿ ಬಯಲು

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಌಂಡ್ ಪಟಾಲಂಗೆ ಕೋರ್ಟ್​ ಮತ್ತೆ ಶಾಕ್ ಕೊಟ್ಟಿದೆ. ದರ್ಶನ್, ಪವಿತ್ರಾ ಸೇರಿ 13 ಆರೋಪಿಗಳನ್ನ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಇದೀಗ ಕಸ್ಟಡಿಗೆ ಪಡೀತಿದ್ದಂತೆ ಆರೋಪಿಗಳನ್ನ ಮತ್ತೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಹತ್ಯೆಯ ನಿಜಾಂಶಗಳನ್ನ ಡಿ ಗ್ಯಾಂಗ್‌ನಿಂದ ಬಾಯ್ಬಿಡಿಸೋದು ಪಕ್ಕಾ ಆಗಿದೆ.

ಕರ್ಮಫಲ ಅನುಭವಿಸದೇ ಎಲ್ಲಿಗೆ ಹೋಗ್ಬೇಕು. ದರ್ಶನ್, ಪವಿತ್ರಾ ಮತ್ತು ಪಟಾಲಂ ಮತ್ತೆ ಪೊಲೀಸರ ಕಸ್ಟಡಿಗೆ ಸೇರಿದ್ದಾರೆ. ಅಮಾಯಕ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಗ್ಯಾಂಗ್​ಗೆ ಸದ್ಯಕ್ಕೆ ಪೊಲೀಸರ ಆತಿಥ್ಯವೇ ಖಾಯಂ ಆಗಿದೆ.

ಆರೋಪಿಗಳಿಂದ ಮೈಸೂರಿನಲ್ಲಿ ಸ್ಥಳ ಮಹಜರಿಗೆ ಸಿದ್ಧತೆ

ಭೀಕರ ಹತ್ಯೆ ಪ್ರಕರಣದಲ್ಲಿ ದರ್ಶನ್ ಌಂಡ್ ಗ್ಯಾಂಗ್​ನ್ನ ನ್ಯಾಯಾಲಯ ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಮೂಲಕ ಜೂನ್ 20ರವರೆಗೆ ದರ್ಶನ್, ಪವಿತ್ರಾ ಸೇರಿ ಡೆವಿಲ್ ಗ್ಯಾಂಗ್​ನ 13 ಆರೋಪಿಗಳು ಮತ್ತೆ ಪೊಲೀಸ್ ಠಾಣೆಯಲ್ಲೇ ವಾಸ ಮಾಡುವಂತಾಗಿದೆ. ಇದೀಗ ಮತ್ತೆ ವಿಚಾರಣೆ ಮಾಡಲು ಸಿದ್ಧತೆ ನಡೆಸಿರೋ ಪೊಲೀಸರು, ಮತ್ತಷ್ಟು ಸಾಕ್ಷ್ಯಗಳನ್ನ ಕಲೆ ಹಾಕಲು ಸನ್ನದ್ಧರಾಗಿದ್ದಾರೆ.

ಇದನ್ನೂ ಓದಿ: ಪವಿತ್ರಾ ಗೌಡ ಮಹಿಳೆ ಅಂತ ಪೊಲೀಸ್ರು ಸೌಜನ್ಯದಲ್ಲಿ ವರ್ತಿಸಿಲ್ಲ; ಕೋರ್ಟ್‌ಗೆ ವಕೀಲರು ಹೇಳಿದ್ದೇನು?

ಶವ ಬಿಸಾಡಿ ಭೀತಿಯಿಂದ ಮೈಸೂರಿಗೆ ತೆರಳಿದ್ದ ಆರೋಪಿಗಳು

ಹತ್ಯೆ ಆರೋಪಿಗಳನ್ನ ಪೊಲೀಸರು ಮೈಸೂರಿಗೆ ಕರೆದೊಯ್ಯಲಿದ್ದಾರೆ. ಶವ ಬಿಸಾಡಿ ಭೀತಿಯಿಂದ ಮೈಸೂರಿಗೆ ತೆರಳಿದ್ದ ಆರೋಪಿಗಳಾದ ರಾಘವೇಂದ್ರ, ನಿಖಿಲ್, ಕಾರ್ತಿಕ್, ಕೇಶವಮೂರ್ತಿ, ದರ್ಶನ್, ಪ್ರದೋಶ್‌ನ ಪೊಲೀಸರು ಮೈಸೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಿದ್ದಾರೆ. ಅಂದ್ಹಾಗೆ ಹತ್ಯೆ ಬಳಿಕ ಮೈಸೂರಿನಲ್ಲಿ ಆರೋಪಿಗಳ ಜೊತೆ ದರ್ಶನ್ ಡೀಲ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸ್ಥಳದಲ್ಲಿ ಮಹಜರು ಮಾಡಿ ಪೊಲೀಸರ ತಂಡ ಸಾಕ್ಷ್ಯ ಕಲೆ ಹಾಕಲಿದೆ.

ರೇಣುಕಾಸ್ವಾಮಿಗೆ ಹಿಂಸೆ ನೀಡಲು ಸಿನಿಮಾ ಸ್ಟೈಲ್ ‌ಪ್ಲಾನ್!

ಡೆವಿಲ್ ಗ್ಯಾಂಗ್‌ ಮೃತ ರೇಣುಕಾಸ್ವಾಮಿಗೆ ಪಟ್ಟಣಗೆರೆ ಶೆಡ್‌ನಲ್ಲಿ ಯಾವ ರೀತಿ ಹಿಂಸೆ ಕೊಟ್ಟಿದ್ರು ಎಂಬ ಮಾಹಿತಿಯನ್ನ ಪೊಲೀಸರು ಕೋರ್ಟ್ ಮುಂದೆ ತೆರೆದಿಟ್ಟಿದ್ದಾರೆ. ರೇಣುಕಾಸ್ವಾಮಿಗೆ ಹಿಂಸೆ ನೀಡಲು ಕೀಚಕ ಗ್ಯಾಂಗ್ ಸಿನಿಮಾ ಸ್ಟೈಲ್‌ನಲ್ಲಿ ‌ಪ್ಲಾನ್ ಮಾಡಿದ್ರು ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್​; ನಟ ದರ್ಶನ್​ಗೆ ಯಾವ್ಯಾವ ಶಿಕ್ಷೆ ನೀಡ್ಬೋದು ಗೊತ್ತಾ?

ಪ್ರಕರಣ ಇಂಚಿಂಚು ಮಾಹಿತಿ ಕಲೆಹಾಕಿ ಚಾರ್ಜ್ ಶೀಟ್

ಬಡಪಾಯಿ ರೇಣುಕಾಸ್ವಾಮಿಗೆ ಸಿನಿಮಾ ಸ್ಟೈಲ್‌ನಲ್ಲಿ ಡಿ ಗ್ಯಾಂಗ್‌ ಹಿಂಸೆ‌ ಕೊಟ್ಟಿತ್ತು ಅಂತ ತಿಳಿದುಬಂದಿದೆ. ಐದನೇ ಆರೋಪಿ ನಂದೀಶ್, 14ನೇ ಆರೋಪಿ ಪ್ರದೋಶ್‌ ಭೀಕರವಾಗಿ ಹಲ್ಲೆ ಮಾಡಿದ್ರು ಅನ್ನೋದು ಕೋರ್ಟ್‌ನಲ್ಲಿ ಗೊತ್ತಾಗಿದೆ. ವಿದ್ಯುತ್ ಶಾಕ್ ನೀಡಿ‌ ರೇಣುಕಾಸ್ವಾಮಿಗೆ ಹಿಂಸೆ ನೀಡಲಾಗಿತ್ತು ಅನ್ನೋದು ತನಿಖೆಯಲ್ಲಿ ಬಯಲಾಗಿದ್ದು, ಶಾಕ್ ಕೊಟ್ಟ ವಸ್ತುಗಳನ್ನು ವಶಕ್ಕೆ ಪಡೆಯಲು ಪೊಲೀಸರು ಹರಸಾಹಸ ಪಡ್ತಿದ್ದಾರೆ. ಈ ಹಿನ್ನೆಲೆ ಮತ್ತೆ ಐದು ದಿನ‌ಗಳ ಕಸ್ಟಡಿ ಪಡೆದು ವಿಚಾರಣೆ ನಡೆಸಲಿದ್ದಾರೆ. ಬಳಿಕ ಪ್ರಕರಣದ ಇಂಚಿಂಚು ಮಾಹಿತಿ ಕಲೆಹಾಕಿ ಚಾರ್ಜ್ ಶೀಟ್ ತಯಾರಿಸಲು ಪೊಲೀಸರ ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ‘ರೌಡಿ ಬಾಸ್‌ನಿಂದ ಖ್ಯಾತ ಸಂಗೀತ ನಿರ್ದೇಶಕನಿಗೆ ಹಾರ್ಟ್ ಅಟ್ಯಾಕ್‌’- ಪ್ರಶಾಂತ್​ ಸಂಬರಗಿ ಹೊಸ ಬಾಂಬ್‌!

ಒಟ್ಟಾರೆ ಮಾಡಿದ್ದುಣ್ಣೋ ಮಾರಾಯ ಅನ್ನುವಂತೆ ಒಬ್ಬ ಅಮಾಯಕನನ್ನು ಬರ್ಬರವಾಗಿ ಕೊಲೆ ಮಾಡಿದ ದರ್ಶನ್ ಌಂಡ್ ಗ್ಯಾಂಗ್ ಮತ್ತೆ ಪೊಲೀಸರ ಆತಿಥ್ಯ ಸ್ವೀಕರಿಸುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಡಿ’ ಗ್ಯಾಂಗ್‌ಗೆ ಶಾಕ್​.. ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್​.. ಮುಂದಿನ ನಡೆಯೇನು?

https://newsfirstlive.com/wp-content/uploads/2024/06/darshan22.jpg

Load More