/newsfirstlive-kannada/media/post_attachments/wp-content/uploads/2024/12/Ishwarya.jpg)
ನ್ಯಾಯಾಲಯವು ಚಿನ್ನ ವಂಚಕಿ ಐಶ್ವರ್ಯ ದಂಪತಿಯನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಲಾಗಿದೆ. ವನಿತಾ ಐತಾಳ ಪರ ವಕೀಲ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಬೆಂಗಳೂರು ಕಮಿಷನರ್ ಬಿ.ದಯಾನಂದ್ ಅವರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
ಚಿನ್ನದ ವಂಚಕಿ ಐಶ್ವರ್ಯ ದಂಪತಿ 8 ದಿನ ಪೊಲೀಸರ ವಶಕ್ಕೆ
ದೊಡ್ಡ ದೊಡ್ಡ ರಾಜಕಾರಣಿಗಳ ತಂಗಿ ಹೆಸರಲ್ಲಿ 14 ಕೆ.ಜಿ. ಚಿನ್ನ ಪಡೆದು ವಂಚಿಸಿರುವ ಬಂಗಾರಿ ಐಶ್ವರ್ಯ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ. ನ್ಯಾಯಾಂಗ ಬಂಧನದಲ್ಲಿದ್ದ ಐಶ್ವರ್ಯ ಮತ್ತು ಆಕೆಯ ಪತಿ ಹರೀಶ್ನನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತನ್ನ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಐಶ್ವರ್ಯ ಹಾಗೂ ಪತಿ ಹರೀಶ್ ಬ್ಯಾಂಕ್ ಖಾತೆಯ ಪರಿಶೀಲನೆಗೆ ಮುಂದಾಗಿರುವ ಪೊಲೀಸರಿಗೆ, 14 ಕೆ.ಜಿ ಚಿನ್ನ ರಿಕವರಿ ಮಾಡೋದೆ ದೊಡ್ಡ ಸವಾಲಾಗಿದ್ದು, ಇಂದಿನಿಂದ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ.
ಪ್ರತಿ ಪೈಸೆಗೂ ಲೆಕ್ಕ
- ಐಶ್ವರ್ಯ, ಪತಿ ಹರೀಶ್ ಬ್ಯಾಂಕ್ ಖಾತೆಯ ಪರಿಶೀಲನೆಗೆ ಮುಂದು
- ಖಾತೆಯಲ್ಲಿ ನಡೆದಿರುವ ವ್ಯವಹಾರದ ಪ್ರತಿ ಪೈಸೆಗೂ ಕೊಡ ಬೇಕು ಲೆಕ್ಕ
- ಐಶ್ವರ್ಯಳ ಬ್ಯಾಂಕ್ ಖಾತೆಯ ಮಾಹಿತಿ ಪಡೆಯಲಿರುವ ಪೊಲೀಸರು
- ಇಲ್ಲಿವರೆಗೆ ಮಾಡಿರೋ ವ್ಯವಹಾರದ ಬಗ್ಗೆ ಮಾಹಿತಿ ಪಡೆಯಲು ಸಿದ್ಧತೆ
- ಐಶ್ವರ್ಯಳಿಂದ 14 ಕೆ.ಜಿ ಚಿನ್ನ ರಿಕವರಿ ಮಾಡೋದೆ ದೊಡ್ಡ ಸವಾಲು
- ಮೊದಲ ದಿನ ವಿಚಾರಣೆಯಲ್ಲಿ ನಾನೇನು ಮಾಡಿಲ್ಲ ಎಂದ ಐಶ್ವರ್ಯ
ವಾರಾಹಿ ಜ್ಯುವೆಲ್ಲರ್ಸ್ ವಂಚನೆ ಕೇಸ್ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇತ್ತ ವಾರಾಹಿ ಜ್ಯುವೆಲ್ಲರ್ಸ್ ಮಾಲೀಕರಾದ ವನಿತಾ ಐತಾಳ ಪರ ವಕೀಲ ನಾರಾಯಣಸ್ವಾಮಿ, ಪ್ರಾಮಾಣಿಕ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: BIGG BOSS; ಮನೆಯಲ್ಲಿ ಭಾವನಾತ್ಮಕ ಸಂಬಂಧ.. ಗಿಫ್ಟ್ ಕೊಡುವಾಗ ಕಣ್ಣೀರು ಹಾಕಿದ ಐಶ್ವರ್ಯ, ಚೈತ್ರಾ
ಬೆಂಗಳೂರು ಪೊಲೀಸ್ ಆಯುಕ್ತರಿಗೆ ಡಿ.ಕೆ ಸುರೇಶ್ ದೂರು
ಇನ್ನು ತಮ್ಮ ಹೆಸರು ದುರುಪಯೋಗ ಮಾಡಿಕೊಂಡು ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡಿರುವ ಐಶ್ವರ್ಯಗೌಡ ವಿರುದ್ಧ ಮಾಜಿ ಸಂಸದ ಡಿ.ಕೆ ಸುರೇಶ್ ದೂರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇಂತಹ ಅನ್ಯಾಯಗಳು ಆಗದಂತೆ ಕ್ರಮ ಕೈಗೊಳ್ಳಲು ಮನವಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಈ ಐನಾತಿ ಐಶ್ವರ್ಯಳ ವಂಚನೆಯ ಜಾಲ 14 ಕೆಜಿ ಬಂಗಾರದಿಂದ ಬಯಲಾಗಿದ್ದು, ಇದರ ಹಿಂದಿರುವ ಅಸಲಿ ಕಹಾನಿಯನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ