newsfirstkannada.com

ಖುಷಿಯಲ್ಲಿದ್ದ ಬೆನ್ನಲ್ಲೇ ದುಃಖ; ಪೃಥ್ವಿ ಷಾಗೆ ಮತ್ತೆ ಬಿಗ್ ಶಾಕ್.. ಈಗ ಏನಾಯ್ತು..

Share :

Published August 14, 2024 at 10:07am

Update August 14, 2024 at 10:11am

    ಕೌಂಟಿ ಕ್ರಿಕೆಟ್​ನಲ್ಲಿ ಅಬ್ಬರ.. ಕಮ್​ಬ್ಯಾಕ್​ ಕನಸು

    ಫೀಲ್ಡ್​ನಲ್ಲಿದ್ದ ಪೃಥ್ವಿ ಷಾಗೆ ಕಟಕಟೆಗೆ ಬರುವಂತೆ ಸಮನ್ಸ್​

    ಏನಿದು ಪ್ರಕರಣ? ಪೃಥ್ವಿಗೆ ಮತ್ತೆ ಸಂಕಷ್ಟ ಎದುರಾಯ್ತಾ?

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇವತ್ತು ಈತ ಟೀಮ್ ಇಂಡಿಯಾದ ಓಪನರ್ ಆಗಿ ವಿಶ್ವ ಕ್ರಿಕೆಟ್​ ಅನ್ನೇ ಆಳುತ್ತಿದ್ದ. ಸ್ವಯಂಕೃತ ಅಪರಾಧವೋ, ಬ್ಯಾಡ್​ ಲಕ್ಕೋ ಗೊತ್ತಿಲ್ಲ. ಅಂದ್ಕೊಂಡಿದ್ದು ಯಾವುದೂ ಮುಂಬೈಕರ್​ ಪೃಥ್ವಿ ಷಾ ಜೀವನದಲ್ಲಿ ಆಗಲಿಲ್ಲ. ಇದೀಗ ಕೌಂಟಿ ಕ್ರಿಕೆಟ್​ನಲ್ಲಿ ಘರ್ಜಿಸಿ ಟೀಮ್​ ಇಂಡಿಯಾಗೆ ವಾಪಾಸ್ಸಾಗೋ ಲೆಕ್ಕಾಚಾರದಲ್ಲಿದ್ದಾರೆ. ಈ ಖುಷಿಯ ಬೆನ್ನಿಗೆ ಮತ್ತೊಂದು ಸಂಕಷ್ಟ ಸುತ್ತಿಕೊಂಡಿದೆ. ಇದ್ರಿಂದಾಗಿ ಕ್ರಿಕೆಟ್​ ಫೀಲ್ಡ್​ನಿಂದ ಕೋರ್ಟ್​ ಕಟಕಟೆಗೆ ಬಂದು ನಿಲ್ಲುವಂತಾಗಿದೆ.

ಪೃಥ್ವಿ ಶಾ..! ಟೀಮ್​ ಇಂಡಿಯಾ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಭಾರತದ ಭವಿಷ್ಯ ಎನಿಸಿಕೊಂಡ ಈತನನ್ನ ದಿಗ್ಗಜ ಸಚಿನ್​ಗೆ ಹೋಲಿಸಲಾಗಿತ್ತು. ಎಂಟ್ರಿ ಕೊಟ್ಟಾಗ ಅಷ್ಟೊಂದು ನಿರೀಕ್ಷೆ ಹುಟ್ಟಿಸಿದ ಪೃಥ್ವಿ ಷಾಗೆ ಈಗ ಟೀಮ್​ ಇಂಡಿಯಾದಲ್ಲಿ ಜಾಗವೇ ಇಲ್ಲದಂತಾಗಿದೆ. ಐಪಿಎಲ್​ನಲ್ಲೂ ಪೃಥ್ವಿಗೆ ಬೇಡಿಕೆ ಕುಗ್ಗಿದೆ. ಸ್ಥಾನಕ್ಕಾಗಿ ಮುಂಬೈಕರ್​​ ಸದ್ಯ ಸರ್ಕಸ್​ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ಪತ್ನಿ, ಇಬ್ಬರು ಮಕ್ಕಳು, ಹೆತ್ತ ಅಮ್ಮನನ್ನೂ ಕತ್ತು ಸೀಳಿ ಸಾಯಿಸಿದ.. ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ಐವರ ಬಲಿ

ಕೌಂಟಿ ಕ್ರಿಕೆಟ್​ನಲ್ಲಿ ಅಬ್ಬರ..
ಸ್ಥಾನ ಸಿಗದೆ ಪರದಾಡ್ತಿರೋ ಪೃಥ್ವಿ ಷಾ, ಸದ್ಯ ಭಾರತ ತೊರೆದು ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್​ ಆಡ್ತಿದ್ದಾರೆ. ಕೌಂಟಿ ಕ್ರಿಕೆಟ್​ನಲ್ಲಿ ಆರ್ಭಟಿಸಿ, ಕಮ್​ಬ್ಯಾಕ್​ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. ಒಂಡೇ ಕಪ್​​ನಲ್ಲಿ ನಾರ್ಥಂಪ್ಟನ್​ ಶೈರ್​ ಪರ ಸಾಲಿಡ್​ ಆಟವಾಡ್ತಿದ್ದಾರೆ. 120+ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿರೋ ಪೃಥ್ವಿ ಷಾ, ಸತತ 3 ಹಾಫ್​​ ಸೆಂಚುರಿ ಸಿಡಿಸಿ ಘರ್ಜಿಸಿದ್ದಾರೆ. 7 ಪಂದ್ಯದಿಂದ 326 ರನ್​​ಗಳಿಸಿ ಟೀಮ್​ ಇಂಡಿಯಾಗೆ ಕಮ್​​ಬ್ಯಾಕ್​ ಕನಸು ಕಾಣ್ತಿದ್ದಾರೆ.

ಕಮ್​​ಬ್ಯಾಕ್​ ಕನವರಿಕೆಯಲ್ಲಿದ್ದ ಪೃಥ್ವಿಗೆ ಶಾಕ್​..!
ಕೌಂಟಿ ಕ್ರಿಕೆಟ್​ನಲ್ಲಿ ಆಡಿ, ಭಾರತಕ್ಕೆ ಬಂದ ಬಳಿಕ ಡೊಮೆಸ್ಟಿಕ್​​ ಕ್ರಿಕೆಟ್​​ನಲ್ಲೂ, ಇಂಪ್ರೆಸ್ಸಿವ್​ ಪರ್ಫಾಮೆನ್ಸ್​ ನೀಡೋ ನಿಟ್ಟಿನಲ್ಲಿ ಪೃಥ್ವಿ ಷಾ ಸಿದ್ಧತೆ ನಡೆಸ್ತಿದ್ದಾರೆ. ಇದ್ರ ಹಿಂದಿರೋದು ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಬೇಕು ಅನ್ನೋ ಕನಸು.! ಈ ಕನವರಿಕೆಯಲ್ಲಿದ್ದಾಗಲೇ ಪೃಥ್ವಿಗೆ ಶಾಕ್​ ಎದುರಾಗಿದೆ. ಕ್ರಿಕೆಟ್​ ಫೀಲ್ಡ್​ನಿಂದ ಕೋರ್ಟ್​ನ ಕಟಕಟೆಗೆ ಬಂದು ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ಕೊನೆಗೂ ತಲೆ ಬಾಗಿದ ಕಿಂಗ್, ನಡೆಯಲಿಲ್ಲ ಕೊಹ್ಲಿ ಆಟ.. ಕಾಲಚಕ್ರ ತಿರುಗುವುದು ಅಂದ್ರೆ ಇದೇ..!

ಸಪ್ನಾ ಗಿಲ್​ ಕೇಸಲ್ಲಿ ಪೃಥ್ವಿಗೆ 2ನೇ ಸಮನ್ಸ್
2023ರಲ್ಲಿ ಸೋಷಿಯಲ್​ ಮೀಡಿಯಾ Influencer ಸಪ್ನಾ ಗಿಲ್​ ಕೇಸ್​​ಗೆ ಸಂಬಂಧಿಸಿದಂತೆ ಪೃಥ್ವಿ ಷಾಗೆ ಸದ್ಯ ಸಂಕಷ್ಟ ಎದುರಾಗಿದೆ. ಈ ಕೇಸ್​​ಗೆ ಸಂಬಂಧಿಸಿದಂತೆ ಈ ಹಿಂದೆ ಪೃಥ್ವಿಗೆ ಕೋರ್ಟ್ ಮೊದಲ​​ ಸಮನ್ಸ್​​ ನೀಡಿತ್ತು. ಕೋರ್ಟ್​​​ ಸಮನ್ಸ್​ಗೆ ಪೃಥ್ವಿ ಆಗಲಿ ಅಥವಾ ಅವ್ರ ಲಾಯರ್​ ಆಗಲಿ ಉತ್ತರಿಸಿಲ್ಲ. ಕೋರ್ಟ್​​ಗೂ ಹಾಜಾರಾಗಿಲ್ಲ. ಇದೀಗ ಮುಂಬೈ ಸೆಷನ್​​ ಕೋರ್ಟ್​ ಮತ್ತೊಂದು ಸಮನ್ಸ್​ ನೀಡಿದ್ದು, ಅಕ್ಟೋಬರ್​ 1ರ ಬಳಗೆ ಖುದ್ದು ಪೃಥ್ವಿ ಷಾ ಬಂದು ಕೋರ್ಟ್​ ಹಾಜಾರಾಗುವಂತೆ ತಿಳಿಸಿದೆ.

ಏನಿದು ಸಪ್ನಾ ಗಿಲ್​ ಕೇಸ್​?
2023ರ ಫೆಬ್ರವರಿಯಲ್ಲಿ ಸೋಷಿಯಲ್ ಮೀಡಿಯಾ INFLUENCER ಸಪ್ನಾ ಗಿಲ್​​ ಹಾಗೂ ಪೃಥ್ವಿ ಷಾ ನಡುವೆ ಸೆಲ್ಫಿಗಾಗಿ ಬೀದಿಯಲ್ಲಿ ಗಲಾಟೆ ನಡೆದಿತ್ತು. ಪೃಥ್ವಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಸ್ವಪ್ನಾ ಗಿಲ್​ ಗೆಳೆಯರು ತೆರಳಿದ್ರು. ಅವರ ಜೊತೆ ಫೋಟೋಗೆ ಷಾ ಪೋಸ್​ ಕೊಟ್ಟಿದ್ರು. ಕೆಲ ನಿಮಿಷಗಳ ಬಳಿಕ ಮತ್ತೆ ಸೆಲ್ಫಿ ಕೇಳಿದಾಗ ಪೃಥ್ವಿ ನೋ ಎಂದಿದ್ದಾರೆ. ಈ ವಿಚಾರ ದೊಡ್ಡ ಸ್ವರೂಪ ಪಡೆದು ಹಲ್ಲೆಯವರೆಗೂ ಹೋಗಿತ್ತು. ಬಳಿಕ ಪರಸ್ಪರ ಆರೋಪಿಸಿಕೊಂಡು ಪೊಲೀಸ್​ ದೂರು ದಾಖಲಿಸಿದ್ರು. ಟೀಮ್​ ಇಂಡಿಯಾ ಆಟಗಾರ ಪೃಥ್ವಿ ಶಾ ಡ್ರಿಂಕ್​ ಮಾಡಿದ್ರು. ಬೇಸ್​ಬಾಲ್​ ಬ್ಯಾಟ್​ನಿಂದ ಹಲ್ಲೆಗೆ ಮುಂದಾದ್ರು ಎಂದು ಸ್ವಪ್ನಾ ಗಿಲ್​ ಕೇಸು ದಾಖಲಿಸಿದ್ರು.

ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!

ಸಪ್ನಾ ಗಿಲ್​​ ಇದ್ದ 8 ಜನರ ಗುಂಪೇ ನನ್ನ ಮೇಲೆ ದಾಳಿ ನಡೆಸಿ ಬೆದರಿಕೆ ಹಾಕಿತ್ತು ಎಂದು ಪೃಥ್ವಿ ಮರು ದೂರಿ ನೀಡಿದ್ರು. ಕಾರಿನ ಗಾಜುಗಳನ್ನ ಒಡೆದು ಹಾಕಿದ್ರು. ಬೇಸ್​ಬಾಲ್​​​​ ಬ್ಯಾಟ್​ನಿಂದ ಹಲ್ಲೆಗೆ ಮುಂದಾಗಿದ್ರು ಅಂತ ಪೃಥ್ವಿ ದೂರಿನಲ್ಲಿ ಹೇಳಿದ್ರು. ವಿಚಾರಣೆ ನಡೆಸಿದ ಪೋಲಿಸರು ಅಂತಿಮವಾಗಿ ಸಪ್ನಾ ಗಿಲ್​ ಹಾಗೂ ಗೆಳೆಯರನ್ನ ಬಂಧಿಸಿದ್ರು. ಸದ್ಯ ಬೇಲ್​ ಮೇಲೆ ಸಪ್ನಾ ಗಿಲ್​ ಬಿಡುಗಡೆಯಾಗಿದ್ದಾರೆ.

ಒಂದೆಡೆ ಕಮ್​ಬ್ಯಾಕ್​ನ ಸರ್ಕಸ್​ ಆದ್ರೆ ಇನ್ನೊಂದೆಡೆ ಆಫ್​ ದ ಫೀಲ್ಡ್​ ಕಾಂಟ್ರವರ್ಸಿ.! ಸಪ್ನಾ ಗಿಲ್​ ಕೇಸ್​ ಒಂದೇ ಅಲ್ಲ. ಇನ್ನೂ ಹಲವು ಕಾಂಟ್ರವರ್ಸಿಗಳಲ್ಲಿ ಪೃಥ್ವಿ ಹೆಸರು ತಳುಕು ಹಾಕಿಕೊಂಡಿದ್ದಿದೆ. ಈ ಎಲ್ಲಾ ಸಂಕಷ್ಟಗಳನ್ನ ಗೆದ್ದು, ಟೀಮ್​ ಇಂಡಿಯಾದಲ್ಲಿರೋ ಪೈಪೋಟಿಯನ್ನ ಮೀರಿ ತಂಡಕ್ಕೆ ವಾಪಾಸ್ಸಾಗೋ ಹಾದಿ ನಿಜಕ್ಕೂ ಕಷ್ಟಕರವಾಗಿದೆ.

ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್​ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖುಷಿಯಲ್ಲಿದ್ದ ಬೆನ್ನಲ್ಲೇ ದುಃಖ; ಪೃಥ್ವಿ ಷಾಗೆ ಮತ್ತೆ ಬಿಗ್ ಶಾಕ್.. ಈಗ ಏನಾಯ್ತು..

https://newsfirstlive.com/wp-content/uploads/2024/08/PRITHWI.jpg

Load More