newsfirstkannada.com

ಇಂದು ಕೋರ್ಟ್​​ನಲ್ಲಿ ಮಾಜಿ ಸಚಿವ HD ರೇವಣ್ಣನ ಭವಿಷ್ಯ ನಿರ್ಧಾರ; ಜೈಲಾ? ಬೇಲಾ?

Share :

Published May 20, 2024 at 6:04am

Update May 21, 2024 at 8:42am

    ಇಂದು ಮಾಜಿ ಸಚಿವ ಹೆಚ್.​ಡಿ ರೇವಣ್ಣನಿಗೆ ‘ಬಿಗ್​​ ಡೇ’

    ರೇವಣ್ಣಗೆ ಟೆನ್ಶನ್​​ ಟೆನ್ಶನ್​​.. ಮತ್ತೆ ಜೈಲಾ? ಬೇಲಾ?

    ದೇವೇಗೌಡರ ಬಳಿ ಜಾಮೀನಿನ ಬಗ್ಗೆ ಗಹನ ಚರ್ಚೆ!

ಬೆಂಗಳೂರು: ಜೆಡಿಎಸ್​ ಸಂಸದ ಪ್ರಜ್ವಲ್​ ವಿರುದ್ಧ ಹಣಕ್ಕೆ ಕೊಕ್ಕೆ ಹಾಕಲು ಅತ್ತ ಎಸ್​​ಐಟಿ ಬಿಗ್​​ ಪ್ಲಾನ್​​ ಮಾಡ್ತಿದ್ರೆ, ಇತ್ತ ಗೌಡರ ಮನೆಯಲ್ಲಿ ಬೇರೆಯದ್ದೆ ವಾತಾವರಣ ಕಾಣಿಸ್ತು. ಶುಕ್ರವಾರ ರೆಗ್ಯೂಲರ್​​ ಬೇಲ್​​ ತೀರ್ಪು ಕಾಯ್ದಿರಿಸಿದ ಕೋರ್ಟ್​​, ಇಂದು ತನ್ನ ತೀರ್ಪು ಪ್ರಕಟಿಸಲಿದೆ.

ಸೆರೆಯುಂಡು ಬಂದ ರೇವಣ್ಣಗೆ ಈಗಲೂ ಜೈಲಿನ ಸರಳಿನ ಸೆರಗಿನ ಕೆಂಡ, ಕನಸು-ಮನಸಲ್ಲೂ ಕಾಡ್ತಿದೆ. ಇದು ರಿಲೀಸೋ? ರಿಯಲ್ಲೋ? ರೀಲ್ಸೋ? ಅನ್ನೋದೇ ಮಾಜಿ ಸಚಿವರ ಕನ್ಫ್ಯೂಸ್​​​​. ಈಗಲೂ ಈ ಸಂಕಟದ ಸಮಯಕ್ಕೆ ವಿರಾಮ ಬಿದ್ದಿಲ್ಲ. ಮನೆಯಲ್ಲಿ ಇನ್ನೂ ಅವುಡುಗಚ್ಚಿದ ಆತಂಕ. ಮಗ ಫಾರೀನ್​ನಲ್ಲಿ, ಹೆಂಡ್ತಿ ತವರಲ್ಲಿ. ಇನ್ನೊಬ್ಬ ಅದೆಲ್ಲೋ? ಹೀಗೆ ಗೌಡರ ಮನೆಗೆ ದೌಡಾಯಿಸಿ ಬಂದ ರೇವಣ್ಣಗೆ ಇಂದಿನ ತೀರ್ಪಿನದ್ದೇ ಕನವರಿಕೆ.

ಇಂದು ಕೋರ್ಟ್​​​ನಲ್ಲಿ ನಿರ್ಣಯವಾಗಲಿದೆ ಬೇಲ್​​!
ಗೌಡರ ನಿವಾಸಕ್ಕೆ ಧಾವಿಸಿದ ಹೆಚ್​ಡಿಕೆ, ರೇವಣ್ಣ!

ಅಂದ್ಹಾಗೆ ಜೈಲಿಂದ ಹೊರಬಂದು ಇವತ್ತಿಗೆ ಸಪ್ತದಿನ. ಈ ಸಪ್ತದಿನವೆಲ್ಲಾ ದೇವರು, ದೇವಸ್ಥಾನ, ಗುಡಿ-ಗುಂಡಾಂತರ ಅಂತ ಗಂಡಾಂತರ ಹೋಗಲಾಡಿಸಲು ಬರಿಗಾಲಲ್ಲೇ ಪ್ರದಕ್ಷಿಣೆ ಮುಗಿಸಿದ್ದಾರೆ. ಇಂದು ಶಿವನ ವಾರ, ಶುಭ ಸೋಮವಾರ ಬೇರೆ. ಕಾನೂನು ಸಮರದ ಅಂತಿಮಘಟ್ಟ. ಇದೊಂದು ಕಂಟಕದಿಂದ ಪಾರಾದ್ರೆ ಬೀಸೋ ದೊಣ್ಣೆಯಿಂದ ಬಚಾವ್​ ಆದಂತೆ. ಆ ಬಚಾವ್​ಗೆ ನೂರು ವರ್ಷ ಆಯಸ್ಸಂತೆ.

ಪ್ರಜ್ವಲ್‌ ರೇವಣ್ಣ ಮತ್ತು ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾರ್ಯ ತಂತ್ರಗಳ ಬಗ್ಗೆ ಚರ್ಚಿಸಲು ದೇವೇಗೌಡರ ಮನೆಗೆ ಮಾಜಿ ಸಿಎಂ ಹೆಚ್​​ಡಿಕೆಯತ್ತ ಧಾವಿಸಿದ್ರು. ಅದಾಗಿ ಕೆಲವೇ ನಿಮಿಷಗಳಲ್ಲಿ ರೇವಣ್ಣ ಸಹ ಎಂಟ್ರಿ ಕೊಟ್ಟಿದ್ರು, ಮನೆಯಲ್ಲಿ ದೇವೇಗೌಡ್ರು, ಕುಮಾರಸ್ವಾಮಿ, ರೇವಣ್ಣ ಗಹನ ಚರ್ಚೆಯಲ್ಲಿ ಮುಳುಗಿದ್ರು.

ರೇವಣ್ಣಗೆ ಟೆನ್ಶನ್​​ ಟೆನ್ಶನ್​​!

ಜೆಡಿಎಸ್ ಶಾಸಕ, ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ವಿರುದ್ಧ ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಟೆನ್ಷನ್ ಹೆಚ್ಚಿಸಿದೆ. ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿ ಮಧ್ಯಂತರ ಷರತ್ತುಬದ್ದ ಜಾಮೀನು ನೀಡಿದ್ದ ಕೋರ್ಟ್​, ಶುಕ್ರವಾರ ರೆಗ್ಯೂಲರ್ ಬೇಲ್ ಅರ್ಜಿ ವಿಚಾರಣೆ ನಡೆಸಿತ್ತು. ರೇವಣ್ಣ ಬೇಲ್​ಗೆ ಎಸ್ಐಟಿ ಹೆಚ್ಚುವರಿ ಎಸ್​ಪಿಪಿಗಳಾದ ಜಯ್ನಾ ಕೋಠಾರಿ ಹಾಗೂ ಅಶೋಕ್ ನಾಯ್ಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ರೆ, ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್​ ಸಹ ಜಾಮೀನಿಗಾಗಿ ಪ್ರಬಲ ವಾದ ಮಂಡಿಸಿದ್ದಾರೆ. ಸುದೀರ್ಘ ವಾದ ಪ್ರತಿವಾದ ಆಲಿಸಿದ 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ಕೋರ್ಟ್​, ಇಂದು ಜಾಮೀನು ತೀರ್ಪು ಕಾಯ್ದಿರಿಸಿದೆ. ಒಂದ್ವೇಳೆ ಕೋರ್ಟ್ ಬೇಲ್ ನೀಡದಿದ್ರೆ ಸರೆಂಡರ್ ಆಗಿರುವ ರೇವಣ್ಣಗೆ ಸಂಕಷ್ಟ ಕಟ್ಟಿಟ್ಟಬುತ್ತಿ.

ಇದೆಲ್ಲಾ ವಿಚಾರವಾಗಿ ಚರ್ಚಿಸಲು ಗೌಡರ ನಿವಾಸದಲ್ಲಿ ರಹಸ್ಯ ಸಭೆ ನಡೆದಿದೆ. ಕೋರ್ಟ್‌ನಲ್ಲಿ ವಿಚಾರಣೆಗೆ ಅರ್ಜಿ ಬರಲಿದೆ. ಹೀಗಾಗೇ ಅರ್ಜಿ ವಿಚಾರಣೆಗೂ ಮುನ್ನ ಚರ್ಚೆ ಗೌಡರ ಬಳಿ ಸಲಹೆ ಸೂಚನೆ ಪಡೆದಿದ್ದಾರೆ. ಕಾನೂನು ಹೋರಾಟ, ರಾಜಕೀಯ ಸಮರವನ್ನ ಹೊತ್ತಿರುವ ಮಾಜಿ ಸಿಎಂ ಹೆಚ್​ಡಿಕೆ, ರೇವಣ್ಣ ಉಪಸ್ಥಿತಿಯಲ್ಲೇ ಗೌಡರಿಂದ ಮಾರ್ಗದರ್ಶನ ಪಡೆದರು.

ಇದನ್ನೂ ಓದಿ: ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್​​.. ಕಾರ್​​, ಬೈಕ್​ ಮಧ್ಯೆ ಭೀಕರ ಅಪಘಾತ; ಓರ್ವ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಕೋರ್ಟ್​​ನಲ್ಲಿ ಮಾಜಿ ಸಚಿವ HD ರೇವಣ್ಣನ ಭವಿಷ್ಯ ನಿರ್ಧಾರ; ಜೈಲಾ? ಬೇಲಾ?

https://newsfirstlive.com/wp-content/uploads/2024/05/HD-Revanna.jpg

Load More