newsfirstkannada.com

×

ನಟ ದರ್ಶನ್​ಗೆ ಸಿಗುತ್ತಾ ಬೇಲ್​​? ಇಂದು ಕೋರ್ಟ್​ನಲ್ಲಿ ದಾಸನ ಭವಿಷ್ಯ ನಿರ್ಧಾರ!

Share :

Published September 23, 2024 at 6:12am

Update September 23, 2024 at 6:13am

    ಜಾಮೀನಿಗಾಗಿ ಆರೋಪಿ ದರ್ಶನ್ ಅರ್ಜಿ ಸಲ್ಲಿಕೆ

    ದರ್ಶನ್​ಗೆ ಧೈರ್ಯ ತುಂಬಿದ್ದ ಅಮ್ಮನ ಪ್ರೀತಿ ಅಪ್ಪುಗೆ

    ಬೇಲ್​ ಸಿಗುವ ನಿರೀಕ್ಷೆಯಲ್ಲಿದ್ದಾರಂತೆ ನಟ ದರ್ಶನ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್​ ಸೇರಿ 17 ಮಂದಿ ಜೈಲು ಪಾಲಾಗಿದ್ದಾರೆ. ರಾಜ್ಯದ ವಿವಿಧ ಜೈಲುಗಳಲ್ಲಿ ಸೆರೆವಾಸ ಅನುಭವಿಸ್ತಿದ್ದಾರೆ. ಕೆಲ ಆರೋಪಿಗಳು ಜಾಮೀನಿಗಾಗಿ ಹೋರಾಟ ಶುರು ಮಾಡಿದ್ರೂ ದರ್ಶನ್​ ಮಾತ್ರ ಯಾಕೋ ಸ್ವಲ್ಪ ಹಿಂದೇಟು ಹಾಕಿದ್ರು. ಆದ್ರೆ ಈಗ ಅವರು ಕೂಡ ತಮ್ಮ ವಕೀಲರ ಮೂಲಕ ಕಾನೂನು ಹೋರಾಟ ಶುರು ಮಾಡಿದ್ದು, ಈಗಾಗಲೇ 57ನೇ ಸಿಸಿಹೆಚ್ ಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ವಕೀಲರಾದ ಎಸ್. ಸುನೀಲ್​ ದರ್ಶನ್​ ಜಾಮೀನು ಅರ್ಜಿಯನ್ನ ಸಲ್ಲಿಸಿದ್ದು, ನ್ಯಾಯಾಧೀಶರಾದ ಜಯಶಂಕರ್​ ಅರ್ಜಿ ವಿಚಾರಣೆ ನಡೆಸಿದ್ರು. ಬಳಿಕ ಸರ್ಕಾರದ ಪರ ಎಸ್ಪಿಪಿಗೆ ಆಕ್ಷೇಪಣೆಗೆ ಅವಕಾಶ ಕೊಟ್ಟು ನೋಟಿಸ್​ ನೀಡಿದ್ದು, ಸೋಮವಾರಕ್ಕೆ ವಿಚಾರಣೆ ಮುಂದೂಡಿದ್ದಾರೆ.

ಬಳ್ಳಾರಿ ಜೈಲಲ್ಲಿ ತಾಯಿ ಭೇಟಿ ಬಳಿಕ ಅರ್ಜಿ ಸಲ್ಲಿಕೆ

ದರ್ಶನ್​​ ಬಳ್ಳಾರಿ ಜೈಲಿಗೆ ಹೋದಾಗಿನಿಂದ ಸಾಕಷ್ಟು ತೊಂದರೆ ಅನುಭವಿಸ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಸಿಕ್ಕಷ್ಟು ಸೌಲಭ್ಯಗಳೂ ಇಲ್ಲದೇ ಒದ್ದಾಡ್ತಿರೋ ದರ್ಶನ್​ ಜೈಲಾಧಿಕಾರಿಗಳ ಮುಂದೆ ಬೇಡಿಕೆಗಳ ಮೇಲೆ ಬೇಡಿಕೆಗಳನ್ನ ಇಡ್ತಾನೇ ಬಂದಿದ್ದಾರೆ. ಅದ್ರಲ್ಲಿ ಕೆಲವೊಂದು ಈಡೇರಿದ್ದು,, ಕೆಲವು ಇನ್ನೂ ಪೆಂಡಿಂಗ್​ ಇದೆ. ಇದರ ಬೆನ್ನಲ್ಲೇ ತಾಯಿ ತನ್ನನ್ನ ನೋಡೋಕೆ ಬಂದಿದ್ದು, ದರ್ಶನ್​ಗೆ ಆನೆ ಬಲ ಕೊಟ್ಟಿತ್ತು. ಅಮ್ಮನ ಪ್ರೀತಿಯ ಅಪ್ಪುಗೆ ದರ್ಶನ್​ಗೆ ಧೈರ್ಯ ಕೊಟ್ಟಿತ್ತು. ಸುಮಾರು 25 ನಿಮಿಷಗಳ ಕಾಲ ಮಾತನಾಡಿದ ಬಳಿಕ ದರ್ಶನ್​ ತುಂಬಾ ಬದಲಾಗಿದ್ದಾರೆ ಎನ್ನಲಾಗ್ತಿದೆ. ಜೊತೆಗೆ ಬೇಲ್​ ಸಿಗುವ ನಿರೀಕ್ಷೆಯಲ್ಲೂ ಇದ್ದಾರೆ.

ಆದ್ರೆ ಪೊಲೀಸರು ಸಲ್ಲಿಸಿರುವ ಚಾರ್ಜ್​​ಶೀಟ್​ ಎವಿಡೆನ್ಸ್​​ ಬಹಳ ಸ್ಟ್ರಾಂಗ್​ ಆಗಿದೆ. ಜೊತೆಗೆ ನಾನ್​ ಬೇಲೆಬಲ್ ಸೆಕ್ಷನ್​ಗಳನ್ನೂ ದರ್ಶನ್​ ವಿರುದ್ಧ ಹಾಕಲಾಗಿದೆ. ಇಡೀ ಪ್ರಕರಣದ 2ನೇ ಆರೋಪಿ ದರ್ಶನ್​ ಆಗಿದ್ದು, ಬೇಲ್​ ಸಿಗೋದು ಬಹುತೇಕ ಡೌಟ್​ ಆಗಿದೆ. ಅತ್ತ ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಟೆಂಪಲ್​ ರನ್​ ಮಾಡ್ತಿದ್ದು, ದೇವರು ಕೈ ಹಿಡೀತಾನೆ ಅನ್ನೋ ಭರವಸೆಯಲ್ಲಿದ್ದಾರೆ. ಆದ್ರೆ ದರ್ಶನ್ ಭವಿಷ್ಯವೇನು ಅನ್ನೋದು ಇಂದು ಕೋರ್ಟ್​ ನೀಡುವ ತೀರ್ಮಾನದ ಮೇಲೆ ನಿಂತಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನಟ ದರ್ಶನ್​ಗೆ ಸಿಗುತ್ತಾ ಬೇಲ್​​? ಇಂದು ಕೋರ್ಟ್​ನಲ್ಲಿ ದಾಸನ ಭವಿಷ್ಯ ನಿರ್ಧಾರ!

https://newsfirstlive.com/wp-content/uploads/2024/08/darshan-7-1.jpg

Load More