/newsfirstlive-kannada/media/post_attachments/wp-content/uploads/2025/05/CORONA-2.jpg)
ಬೆಂಗಳೂರು: ಆರೋಗ್ಯ ಇಲಾಖೆ ಸೂಚನೆ ಹೊರಡಿಸಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದು ಈಗಿರುವಾಗಲೇ ಕೊರೊನಾಗೆ 63 ವರ್ಷದ ವೃದ್ಧರೊಬ್ಬರು ಜೀವ ಬಿಟ್ಟಿದ್ದು ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 58 ಹೊಸ ಕೊರೊನಾ ಪ್ರಕರಣಗಳು ದಾಖಲು ಆಗಿವೆ. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 238ಕ್ಕೆ ಏರಿಕೆ ಯಾಗಿದ್ದು ಕಳೆದ 24 ಗಂಟೆಯಲ್ಲಿ ಕೊರೊನಾಗೆ 63 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಇನ್ನೊಂದು ಒಳ್ಳೆ ಸುದ್ದಿ ಎಂದರೆ ಕಳೆದ 24 ಗಂಟೆಯಲ್ಲಿ 53 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಒಂದು ದಿನಕ್ಕೆ ಕೊರೊನಾ ಪಾಸಿಟಿವಿಟಿ ರೇಟ್ 13.8% ರಷ್ಟು ಇದೆ.
ಇದನ್ನೂ ಓದಿ:ಪಿರಿಯಡ್ಸ್ ಟೈಮ್ನಲ್ಲಿ ಅಪ್ಪಿತಪ್ಪಿಯೂ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ; ಗಂಭೀರ ಸಮಸ್ಯೆಗೆ ಕಾರಣವಾಗಬಹುದು!
ಕರ್ನಾಟಕ ಮಾತ್ರವಲ್ಲ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರಕತಣಗಳು ದಾಖಲು ಆಗಿವೆ. ಕೇರಳ ಒಂದರಲ್ಲೇ 1136 ಕೇಸ್ಗಳು ಪತ್ತೆ ಆಗಿವೆ. ಮೇ 22 ರಂದು 257 ಇದ್ದ ಕೋವಿಡ್, ಮೇ 26 ರ ವೇಳೆಗೆ 1,010ಕ್ಕೆ ಏರಿಕೆ ಆಗಿತ್ತು. ಇದಾದ 10 ದಿನಗಳಲ್ಲೇ 3,395 ಕೊರೊನಾ ಪ್ರಕರಣಗಳು ದೇಶದಲ್ಲಿ ದಾಖಲು ಆಗಿವೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಹೇಳುತ್ತವೆ.
ಮೇ 31ರ ಕೊರೊನಾ ಅಂಕಿಅಂಶಗಳು
ಕೇರಳ- 1,336
ಮಹಾರಾಷ್ಟ್ರ- 467
ದೆಹಲಿ- 375
ಗುಜರಾತ್- 265
ಪಶ್ಚಿಮ ಬಂಗಾಳ- 205
ತಮಿಳುನಾಡು- 185
ಉತ್ತರಪ್ರದೇಶ- 117
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ