newsfirstkannada.com

ಕೋವಿಶೀಲ್ಡ್ ಸೈಡ್ ಎಫೆಕ್ಟ್.. ಪುನೀತ್ ರಾಜ್ ಕುಮಾರ್ ವ್ಯಾಕ್ಸಿನ್‌ ಫೋಟೋ ವೈರಲ್‌; ತೀವ್ರ ಆಕ್ರೋಶ!

Share :

Published May 2, 2024 at 1:14pm

Update May 2, 2024 at 1:17pm

    2021ರ ಏಪ್ರಿಲ್ 07ರಂದು ಪುನೀತ್ ರಾಜ್‌ಕುಮಾರ್ ಮೊದಲ ವ್ಯಾಕ್ಸಿನ್

    45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್‌ ಒಳ್ಳೆಯದಲ್ಲ ಎಂದು ಕಮೆಂಟ್!

    ಕೋವಿಡ್ ವ್ಯಾಕ್ಸೀನ್‌ನಿಂದಲೇ ಪುನೀತ್ ರಾಜ್‌ಕುಮಾರ್ ಕಳೆದುಕೊಂಡ್ವಾ?

ಕೊರೊನಾ ಮಹಾಮಾರಿ ಇಡೀ ಮನುಕುಲವನ್ನೇ ಕಾಡಿ ಹೋಗಿದೆ. ಕೊರೊನಾ ವೈರಸ್‌ ತೊಲಗಿ ಹೋದ್ರೂ ಈಗಲೂ ಅದರ ಹೆಸರು ಕೇಳಿದ್ರೆ ಬೆಚ್ಚಿ ಬೀಳುವ ಜನರಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶಾದ್ಯಂತ ಭಾರತ ಸರ್ಕಾರ ವ್ಯಾಕ್ಸಿನ್ ಅಭಿಯಾನ ನಡೆಸಿತ್ತು. ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ ಬಗ್ಗೆ ಭಾರೀ ಚರ್ಚೆಯಾಗುತ್ತಿರುವಾಗಲೇ ವ್ಯಾಕ್ಸಿನ್‌ ಬಗ್ಗೆ ಆತಂಕಕಾರಿ ಮಾಹಿತಿ ಹೊರ ಬೀಳುತ್ತಿದೆ.

ಕೋವಿಶೀಲ್ಡ್ ವ್ಯಾಕ್ಸಿನ್‌ನ ಸೈಡ್ ಎಫೆಕ್ಟ್ ಬಗ್ಗೆ ಭಾರೀ ಚರ್ಚೆಯಾಗುತ್ತಿರುವಾಗಲೇ ಒಂದು ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ವ್ಯಾಕ್ಸಿನ್ ತೆಗೆದುಕೊಂಡು ಅಂದು ಮಾಡಿದ್ದ ಪೋಸ್ಟ್ ಈಗ ಟ್ರೆಂಡಿಂಗ್ ಆಗಿದೆ.

2021ರ ಏಪ್ರಿಲ್ 07ರಂದು ಪುನೀತ್ ರಾಜ್‌ಕುಮಾರ್ ಅವರು ಮೊದಲ ವ್ಯಾಕ್ಸಿನ್ ತೆಗೆದುಕೊಂಡಿದ್ದರು. ವ್ಯಾಕ್ಸೀನ್ ತಗೊಂಡ ಅಪ್ಪು ಫೋಟೋ ಶೇರ್ ಮಾಡಿ ನಾನು ಮೊದಲ ವಾಕ್ಸಿನೇಷನ್ ತಗೊಂಡಿದ್ದೇನೆ. 45 ವರ್ಷ ಮೇಲ್ಪಟ್ಟವರು ವಾಕ್ಸೀನ್ ತೆಗೆದುಕೊಳ್ಳಬಹುದು ಎಂದು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್‌; ಸಿಡಿದೆದ್ದ ಅಪ್ಪು ಫ್ಯಾನ್ಸ್‌ ಮಾಡಿದ್ದೇನು? 

ಅಪ್ಪು ಮಾಡಿದ ಈ ಪೋಸ್ಟ್‌ಗೆ ಬೃಂದಾವನ ಅನ್ನೋ ವ್ಯಕ್ತಿ ಕಮೆಂಟ್ ಮಾಡಿದ್ದು, ಕೋವಿಶೀಲ್ಡ್ ತಗೋಬೇಡಿ. 45 ವರ್ಷ ಮೇಲ್ಪಟ್ಟವರಿಗೆ ಅದು ಒಳ್ಳೆಯದಲ್ಲವೆಂದು ಕಮೆಂಟ್ ಮಾಡಿದ್ದಾರೆ. ಇದೀಗ ಪುನೀತ್ ರಾಜ್‌ಕುಮಾರ್ ಅವರ ಈ ಫೋಟೋ ಹಾಗೂ ಕಮೆಂಟ್ ಪುಲ್ ವೈರಲ್ ಆಗಿದೆ.

ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಪುನೀತ್ ರಾಜ್ ಕುಮಾರ್ ಫೋಟೋ ಟ್ರೆಂಡಿಂಗ್ ಆಗಿದೆ. ಹಲವಾರು ಅಭಿಮಾನಿಗಳು ಅಪ್ಪು ವ್ಯಾಕ್ಸೀನ್ ತಗೊಂಡಿರುವ ಫೋಟೋ ಶೇರ್ ಮಾಡಿ ಕೋವಿಡ್ ವ್ಯಾಕ್ಸೀನ್‌ ಇಂದಲೇ ನಾವು ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡ್ವಾ ಎಂದು ಪ್ರಶ್ನಿಸುತ್ತಿದ್ದಾರೆ.

ಕೋವಿಶೀಲ್ಡ್ ಸೈಡ್ ಎಫೆಕ್ಟ್ ನಿಜಾನಾ?
ಇತ್ತೀಚೆಗೆ ಕೋವಿಶೀಲ್ಡ್ ವ್ಯಾಕ್ಸಿನ್ ತಯಾರಿಸಿದ ಅಸ್ಟ್ರಾಜೆನೆಕಾ ಕಂಪನಿಯು ಕೋವಿಡ್ ಲಸಿಕೆಯ ಸೈಡ್ ಎಫೆಕ್ಟ್ ಬಗ್ಗೆ ಮಾಹಿತಿ ನೀಡಿದೆ. ಲಂಡನ್ ಕೋರ್ಟ್‌ನಲ್ಲಿ ಅಸ್ಟ್ರಾಜೆನೆಕಾ ಕಂಪನಿ ತಯಾರಿಸಿದ ಕೋವಿಶೀಲ್ಡ್‌ ಲಸಿಕೆಯಿಂದ ಅಪರೂಪದ ಪ್ರಕರಣದಲ್ಲಿ ಸೈಡ್ ಎಫೆಕ್ಟ್ ಇದೆ ಎಂದು ಒಪ್ಪಿಕೊಂಡಿದೆ. ತಮ್ಮ ಕೋವಿಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯ ಸೈಡ್ ಎಫೆಕ್ಟ್ ಇದೆ ಎಂದು ಹೇಳಿದೆ.

ಇದನ್ನೂ ಓದಿ: ಕೋರ್ಟ್​ ಮುಂದೆ ಸತ್ಯ ಒಪ್ಪಿಕೊಂಡ ಕೊರೊನಾ ಲಸಿಕೆ ಕಂಪನಿ.. ಕೋವಿಶೀಲ್ಡ್​ ತೆಗೆದುಕೊಂಡವ್ರಿಗೆ ಗಢಗಢ..!

ಕೊರೊನಾ ಕಾಡುತ್ತಿದ್ದ ಸಂದರ್ಭದಲ್ಲಿ ಭಾರತದಲ್ಲಿ ಅಸ್ಟ್ರಾಜೆನೆಕಾ ಕಂಪನಿ ತಯಾರಿಸಿದ ಕೋವಿಶೀಲ್ಡ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಭಾರತದ ಸೆರಮ್ ಇನ್ಸ್‌ಟಿಟ್ಯೂಟ್ ಕಂಪನಿಯು ಕೋವಿಶೀಲ್ಡ್ ಹೆಸರಿನಲ್ಲಿ ಭಾರತದಲ್ಲಿ ಕೋಟ್ಯಂತರ ಮಂದಿಗೆ ವ್ಯಾಕ್ಸಿನ್ ಸರಬರಾಜು ಮಾಡಲಾಗಿದೆ.

ಈ ಬಗ್ಗೆ ICMR ನಿವೃತ್ತ ವಿಜ್ಞಾನಿ ರಮಣ್ ಗಂಗಾಖೇಡ್ಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೋವಿಶೀಲ್ಡ್ ಲಸಿಕೆಯಿಂದ 10 ಲಕ್ಷ ಜನರ ಪೈಕಿ 8 ಮಂದಿಗೆ ಮಾತ್ರ ರಕ್ತ ಹೆಪ್ಪುಗಟ್ಟುವಿಕೆ ಕಾಣಿಸಿಕೊಳ್ಳುತ್ತೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋವಿಶೀಲ್ಡ್ ಸೈಡ್ ಎಫೆಕ್ಟ್.. ಪುನೀತ್ ರಾಜ್ ಕುಮಾರ್ ವ್ಯಾಕ್ಸಿನ್‌ ಫೋಟೋ ವೈರಲ್‌; ತೀವ್ರ ಆಕ್ರೋಶ!

https://newsfirstlive.com/wp-content/uploads/2024/05/Puneeth-Rajkumar-Covishield.jpg

Load More